– ವಿರೋಧ ಮಾಡಿದವರು ಯಶಸ್ವಿಯಾಗಿಲ್ಲ
– ನಿಜಕ್ಕೂ ನನಗೆ ಖುಷಿಯಾಗಿದೆ
ಬೆಂಗಳೂರು: ಲೋಕಸಭಾ ಚುನಾವಣೆಗೆ ಬೆಂಗಳೂರು ಉತ್ತರದಿಂದ ಟಿಕೆಟ್ ಗೋಷಣೆಯಾದ ಬೆನ್ನಲ್ಲೇ ಕೇಂದ್ರಸ ಚಿವೆ ಶೋಭಾ ಕರಂದ್ಲಾಜೆಯವರು (Shobha Karandlaje) ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿ (CT Ravi) ವಿರುದ್ಧ ಪರೋಕ್ಷ ಟಾಂಗ್ ನೀಡಿದ್ದಾರೆ. ಉಡುಪಿ- ಚಿಕ್ಕಮಗಳೂರಲ್ಲಿ ಬಹಳ ದೊಡ್ಡ ಅಭಿವೃದ್ಧಿ ಕೆಲಸ ಆಗಿದೆ. ಆದರೆ ಅದನ್ನು ಪರಿಗಣಿಸದೇ ಕೆಲವರು ವಿರೋಧ ಮಾಡಿದ್ದರು. ಕೇವಲ ಪ್ರಾಯೋಜಿತ ಗುಂಪು ತಮಗೆ ಟಿಕೆಟ್ ಬೇಕೆಂಬ ಕಾರಣಕ್ಕೆ ಏನೇನೋ ಮಾಡಿತ್ತು. ಆದರೆ ಅವರು ಯಶಸ್ವಿಯಾಗಿಲ್ಲ, ಅವರಿಂದಲೂ ಟಿಕೆಟ್ ತಗೊಂಡು ಬರೋಕೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಪಕ್ಷ ವಿರೋಧಿ, ಗಲಭೆ, ಅವಮಾನ ಮಾಡಿದವರಿಗೆ ಟಿಕೆಟ್ ಸಿಗಲ್ಲ ಎಂದು ನನ್ನಿಂದ ಸಾಬೀತಾಗಿದೆ. ಇನ್ನಾದ್ರು ಇವರು ಪಾಠ ಕಲಿಯಲಿ, ಬಿಜೆಪಿ ಒಂದು ಶಿಸ್ತಿನ ಪಕ್ಷ. ಈ ರೀತಿಯ ಪಕ್ಷಕ್ಕೆ ಅವಮಾನ ಮಾಡಿದರೆ ಮಣೆ ಹಾಕಲ್ಲ ಅಂತಾ ವರಿಷ್ಠರು ತೋರಿಸಿಕೊಟಿದ್ದಾರೆ. ಇದರಿಂದ ನನಗೆ ನಿಜಕ್ಕೂ ಆನಂದವಾಗಿದೆ, ನಾನು ಬೆಂಗಳೂರಲ್ಲಿ ಶಾಸಕರಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ನಾನು ಸದಾನಂದಗೌಡರ ಮನೆಗೆ ಹೋಗಿ ಬಂದಿದ್ದೇನೆ. ಎಲ್ಲರ ಆಶೀರ್ವಾದ ನನ್ನ ಮೇಲಿದೆ ಎಂದು ಶೋಭಾ ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್ ಸೇರುವ ವದಂತಿ ಬಗ್ಗೆ ಡಿವಿಎಸ್ ಸ್ಪಷ್ಟನೆ
Advertisement
ನನಗೆ ವಿಶ್ವಾಸ ಇತ್ತು, ನನ್ನ ನಾಯಕತ್ವದ ಮೇಲೆ ವಿಶ್ವಾಸ ಇತ್ತು. ರಾಷ್ಟ್ರೀಯ ನಾಯಕರ ಮೇಲೆ ವಿಶ್ವಾಸ ಇತ್ತು. ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಉಡುಪಿ- ಚಿಕ್ಕಮಗಳೂರು ಜಿಲ್ಲೆಯಲ್ಲೂ ಅಭಿವೃದ್ಧಿ ಆಗಿತ್ತು. ಆದರೆ ಕೆಲವರು ಸಹಿಸಲಿಲ್ಲ. ಪ್ರಾಯೋಜಿತ ಪ್ರತಿಭಟನೆಗಳು ನಡೆದವು. ತಮಗೆ ಟಿಕೆಟ್ ಬೇಕು ಎಂದು ಕೆಲವರು ಮಾಡಿಸಿದ್ರು, ಅವರು ಯಶಸ್ವಿ ಆಗಲಿಲ್ಲ. ಅವರು ಟಿಕೆಟ್ ತೆಗೆದುಕೊಳ್ಳಲು ಆಗಲಿಲ್ಲ. ರಾಷ್ಟ್ರೀಯ ನಾಯಕರು ಅದನ್ನ ಪರಿಗಣಿಸಲ್ಲ ಎಂದು ಹೇಳಿದರು.