ಮೈಸೂರು: ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರ ಸಾರಿಗೆಯ ಉಚಿತ ಸೇವೆಯ ಬಸ್ಸಿನಲ್ಲಿ ಇಂದು ಬೆಟ್ಟಕ್ಕೆ ಸಚಿವೆ ಆಗಮಿಸಿದರು. ಪ್ರತಿ ಆಷಾಢದಲ್ಲೂ ಚಾಮುಂಡಿ ತಾಯಿಯ ದರ್ಶನಕ್ಕೆ ಶೋಭಾ ಕರಂದ್ಲಾಜೆ ಬರುತ್ತಿದ್ದಾರೆ. ಇದೇ ವೇಳೆ ದಿನಬಳಕೆ ವಸ್ತುಗಳಿಗೆ ಜಿಎಸ್‍ಟಿ ವಿಚಾರ ಸಂಬಂಧ ಮಾತನಾಡಿ, ನಮ್ಮ ಪ್ರಧಾನಿ ತಾಯಿ ಹೃದಯದವರು. ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತವೆ. ಇಂದು ಜಿ.ಎಸ್.ಟಿ ಸಂಬಂಧದ ಸಭೆ ಇದೆ. ಜಿ.ಎಸ್.ಟಿಯನ್ನ ಕಡಿಮೆ ಮಾಡಬಹುದು. ಇದೆಲ್ಲ ಶಕ್ತಿ ಪ್ತಧಾನಮಂತ್ರಿ ಕೈಯಲ್ಲಿದೆ. ಜನರ ಭಾವನೆಗೆ ಪ್ರಧಾನ ಮಂತ್ರಿ ಸ್ಪಂದಿಸುತ್ತಾರೆ ಎಂದರು.
Advertisement
Advertisement
ರಾಜ್ಯದಲ್ಲಿ ನೆರೆ ಪ್ರವಾಹ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈಸೇರಿಲ್ಲ. ನೆರೆ ಪ್ರವಾಹ ಸಂಪೂರ್ಣ ತಗ್ಗಿದ ಮೇಲೆ ಬೆಳೆ ನಷ್ಟ ಎಷ್ಟು ಎಂಬುದು ಗೊತ್ತಾಗಲಿದೆ. ಪ್ರವಾಹ ತಗ್ಗುವವರೆಗೆ ಬೆಳೆ ನಷ್ಟದ ಅಂದಾಜು ಕಷ್ಟ. ಈಗ ಕೇವಲ ರಸ್ತೆ ಸೇತುವೆ ನಾಶವಾಗಿರುವ ಬಗ್ಗೆ ಮಾತ್ರ ವರದಿ ತಯಾರುಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜ್ಯೂನಿಯರ್ ‘ರೆಬಲ್ ಸ್ಟಾರ್’ ಅಭಿಷೇಕ್ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ನಿರ್ಮಾಪಕ
Advertisement
Advertisement
ಪ್ರವಾಹದಲ್ಲಿ ಬಹಳ ಜಿಲ್ಲೆಗಳ ರೈತರ ಬೆಳೆ ಕೊಚ್ಚಿ ಹೋಗಿದೆ. ಅವರಿಗೆ ಮತ್ತೊಮ್ಮೆ ರಸಗೊಬ್ಬರ ಬೀಜ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಹಿಂದೆ ಕೊಟ್ಟ ರಸ ಗೊಬ್ಬರ ಬೀಜದಲ್ಲಿ ಅವರ ಬೆಳೆದ ಬೆಳೆ ನೀರು ಪಾಲಾಗಿದೆ. ಇದರ ಎಲ್ಲಾ ವರದಿಗಳನ್ನು ತರಿಸಿ ಕೊಳುತ್ತಿದ್ದೇವೆ. ನನ್ನ ಜಿಲ್ಲೆಯಲ್ಲೂ ಸಹ ಸಾಕಷ್ಟು ಬೆಳೆ ಹಾನಿಯಗಿದೆ ಎಂದು ಹೇಳಿದರು.