ಹುಬ್ಬಳ್ಳಿ: ಭಾರತ ನವೀಕರಿಸಬಹುದಾದ ಇಂಧನ (Renewable Energy) ವಲಯದಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿದ್ದು, ಒಂದೇ ವರ್ಷದಲ್ಲಿ 24.2 GW (13.5%) ರಷ್ಟು ಸಾಮರ್ಥ್ಯ ವೃದ್ಧಿಸಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 24 GW, ಸೌರಶಕ್ತಿ 20 GW ಹೆಚ್ಚಿದೆ. 2023ರ ಅಕ್ಟೋಬರ್ ನಿಂದ 2024ರ ಅಕ್ಟೋಬರ್ ವರೆಗೆ ಭಾರತ ಗಣನೀಯ ಬೆಳವಣಿಗೆ ಕಂಡಿದೆ ಎಂದು ಹೇಳಿದ್ದಾರೆ. 2023ರ ಅಕ್ಟೋಬರ್‌ನಲ್ಲಿ 178.98 GW ಇದ್ದ ಸೌರಶಕ್ತಿ ಸಾಮರ್ಥ್ಯ ಪ್ರಸ್ತುತ 203.18 GW ತಲುಪಿದೆ. ಈ ಗಮನಾರ್ಹ ಏರಿಕೆ RE ವಲಯದ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗುರಿ ಸಾಧನೆಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ಪರಮಾಣು ಶಕ್ತಿ ಒಳಗೊಂಡಂತೆ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯ 2023 ರಲ್ಲಿ 186.46 GW ಇತ್ತು. ಅದೀಗ 211.36 GWಗೆ ಏರಿದೆ ಎಂದಿದ್ದಾರೆ. ಇದನ್ನೂ ಓದಿ: ರಿಯಲ್ ಎಸ್ಟೇಟ್ ಮಾಫಿಯಾದಿಂದ ಮನನೊಂದು ದಂಪತಿ ಆತ್ಮಹತ್ಯೆ; 12 ಮಂದಿ ವಿರುದ್ಧ FIR
ಸೌರ ಮತ್ತು ಪವನ ವಿದ್ಯುತ್ ಹೆಚ್ಚಳ: ಸೌರಶಕ್ತಿ ವಲಯ 20.1 GW ( 27.9%) ಗಮನಾರ್ಹ ಏರಿಕೆ ಕಂಡಿದೆ. 2023ರ ಅಕ್ಟೋಬರ್ ನಲ್ಲಿ 72.02 GW ಇದ್ದದ್ದು ನಿಂದ 2024ರ ಅಕ್ಟೋಬರ್‌ಗೆ 92.12 GW ಗೆ ವಿಸ್ತರಣೆ ಕಂಡಿದೆ. ಪ್ರಸ್ತುತದಲ್ಲಿ ಅನುಷ್ಠಾನದಲ್ಲಿರುವ ಮತ್ತು ಟೆಂಡರ್ ಮಾಡಲಾದ ಯೋಜನೆ ಸೇರಿದಂತೆ ಒಟ್ಟು ಸೌರ ಸಾಮರ್ಥ್ಯವು ಈಗ 250.57 GW (ಕಳೆದ ವರ್ಷ 166.49 GW) ಗಮನಾರ್ಹ ಹೆಚ್ಚಳ ಕಂಡಿದೆ ಎಂದಿದ್ದಾರೆ.
ಪವನ ಶಕ್ತಿ: ಪವನ ಶಕ್ತಿ ಸಹ ಸ್ಥಿರವಾದ ಬೆಳವಣಿಗೆ ಪ್ರದರ್ಶಿಸಿದೆ. ಸ್ಥಾಪಿತ ಸಾಮರ್ಥ್ಯವು 7.8% ರಷ್ಟು ಹೆಚ್ಚಾಗಿದೆ. 2023ರ ಅಕ್ಟೋಬರ್‌ನಲ್ಲಿ 44.29 GW ಇದ್ದದ್ದು ಈಗ 47.72 GWಗೆ ಆಗಿದೆ. ಗಾಳಿ ಯೋಜನೆಗಳಿಗೆ ಪೈಪ್‌ಲೈನ್‌ನಲ್ಲಿ ಒಟ್ಟು ಸಾಮರ್ಥ್ಯ ಈಗ 72.35 GW ತಲುಪಿದೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಕಬ್ಬು ಬೆಲೆ ನಿಗದಿಗಾಗಿ ಹೋರಾಟ- ಸಿಎಂಗೆ ಘೇರಾವ್ ಹಾಕಲು ನಿರ್ಧರಿಸಿದ ಮುಧೋಳ ರೈತರು
2024ರ ಏಪ್ರಿಲ್ ನಿಂದ ಅಕ್ಟೋಬರ್ ವರೆಗೆ, ಭಾರತ 12.6 GW ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರಿಸಿದೆ. ಅಕ್ಟೋಬರ್ ತಿಂಗಳಲ್ಲೇ 1.72 GW ಸ್ಥಾಪಿಸಲಾಯಿತು. ಇದು ನವೀಕರಿಸಬಹುದಾದ ವೇಗದ ಬದಲಾವಣೆ ತೋರುತ್ತಿದೆ ಎಂದಿದ್ದಾರೆ.
ಜಲ-ಪರಮಾಣು ಕೊಡುಗೆ: 2024ರ ಅಕ್ಟೋಬರ್ ಹೊತ್ತಿಗೆ, ದೊಡ್ಡ ಜಲವಿದ್ಯುತ್ ಯೋಜನೆಗಳು ಭಾರತದ ನವೀಕರಿಸಬಹುದಾದ ಬಂಡವಾಳಕ್ಕೆ 46.93 GW ಕೊಡುಗೆ ನೀಡಿದರೆ, ಪರಮಾಣು ಶಕ್ತಿ ಸಾಮರ್ಥ್ಯವು 8.18 GW ಕೊಡುಗೆ ನೀಡಿದೆ ಎಂದು ತಿಳಿಸಿದ್ದಾರೆ.
ಈ ಕೊಡುಗೆಗಳು ಭಾರತದ ನವೀಕರಿಸಬಹುದಾದ ಇಂಧನ ಮಿಶ್ರಣದ ವೈವಿಧ್ಯತೆ ಮತ್ತು ಸ್ಥಿತಿಸ್ಥಾಪಕತ್ವ ಬಲಪಡಿಸುತ್ತದೆ. ಅಲ್ಲದೇ, ಹಸಿರು ಶಕ್ತಿ ಪರಿವರ್ತನೆಗೆ ಸಮಗ್ರ ವಿಧಾನವನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭತ್ತ ಖರೀದಿಸಿ ಕೋಟಿ ಕೋಟಿ ವಂಚನೆ, ತಿರುಪತಿಯಲ್ಲೂ ರೈತರಿಗೆ ನಾಮ – ಆರೋಪಿ ಅರೆಸ್ಟ್!