ಧಾರವಾಡ: ಉಪಚುನಾವಣೆ ಇದ್ದಾಗ ಸರ್ಕಾರ ಹಾಗೂ ಸರ್ಕಾರದ ಮಂತ್ರಿಗಳು ನಿಲ್ಲುವುದು ಸಹಜ, ಹಿಂದೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಚುನಾವಣೆ ನಡೆದಾಗ ಸಿದ್ದರಾಮಯ್ಯನವರು ಅಲ್ಲೇ ಟೆಂಟ್ ಹೊಡೆಡಿದ್ರು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಿಎಂ ಯಾರು ಇರ್ತಾರೆ ಅವರು ಉಪಚುನಾವಣೆ ಗೆಲ್ಲಿಸಲು ನಿಲ್ಲುವುದು ಸಹಜ ಎಂದರು. ಎರಡು ಕ್ಷೇತ್ರಗಳ ಒಟ್ಟು ಮತಗಳ ಸರಾಸರಿ ನೋಡಿದರೆ 53 ರಷ್ಟು ಮತ ಬಿಜೆಪಿಗೆ ಬಿದ್ದಿವೆ. ಡಿಪಾಸಿಟ್ ಕಳೆದುಕೊಂಡಿದ್ದರೆ ರೂಟ್ ಔಟ್, ನಮಗೂ 76 ಸಾವಿರ ವೋಟು ಹಾಕಿದ್ದಾರೆ ಎಂದರು.
Advertisement
Advertisement
ಸೋಲು ಅಂದರೆ ವಿರೋಧ ಪಕ್ಷದ ಮಾನ್ಯತೆ ಪಡೆಯಲಿಕ್ಕೂ ವಿಫಲರಾಗಿದ್ದು ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ ಜೋಶಿ, ಹಾನಗಲ್‍ನಲ್ಲಿ ಅವರಿಗೆ 4 ಸಾವಿರ ಹೆಚ್ಚು ಮತ ಬಿದ್ದಿವೆ, ಸಿಂದಗಿಯಲ್ಲಿ ಅವರ ಸ್ಥಿತಿ ಏನಾಗಿದೆ, 30 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದಾರೆ ಎಂದು ಹೇಳಿದರು.
Advertisement
ಸಿದ್ದರಾಮಯ್ಯ ಸಿಂದಗಿಯಲ್ಲೇ ಟೆಂಟ್ ಹೊಡೆದಿದ್ರು. ಒಟ್ಟಿನಲ್ಲಿ ಗೆದ್ದ ನಂತರ ನಾವು ಭಾರೀ ಬೀಗಬಾರದು, ಸೋತ ನಂತರ ಧೃತಿಗೆಡಬಾರದು ಎಂದು ಜೋಶಿ ಹೇಳಿದರು.