ಬೆಂಗಳೂರು: ಭೂಪಸಂದ್ರದ ಬಳಿ ಸಿಎಂ ಸಿದ್ದರಾಮಯ್ಯ ಅಕ್ರಮ ಡಿನೋಟಿಫಿಕೇಶನ್ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯಪಾಲ ವಿ.ಆರ್.ವಾಲಾ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.
ಕೇಂದ್ರ ಮಾನವ ಸಂಪನ್ಮೂಲ ಸಚಿವ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ಪ್ರಕಾಶ್ ಜಾವಡೇಕರ್ ಭಾನುವಾರ ರಾತ್ರಿ ಅರ್ಧಗಂಟೆಗಳ ಕಾಲ ಡಿನೋಟಿಫಿಕೇಶನ್ ಪ್ರಕರಣದ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
Advertisement
ಈ ವಿಚಾರದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯಿಸಿದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಇದು ಬೋಗಸ್ ಜನತಾ ಪಾರ್ಟಿಯ ಬೋಗಸ್ ಆರೋಪ ಅಷ್ಟೇ. ಅವರ ಆರೋಪದ ದಾಖಲೆಗಳನ್ನು ನಾವು ಕಸದ ಬುಟ್ಟಿಗೆ ಹಾಕುತ್ತೇವೆ. ಚುನಾವಣೆಯ ಹೊಸ್ತಿಲಲ್ಲಿ ಸಿಎಂ ವಿರುದ್ಧ ಸುಳ್ಳು ಆರೋಪಗಳನ್ನ ಮಾಡ್ತಿದ್ದಾರೆ ಅಷ್ಟೇ ಎಂದು ವಾಗ್ದಾಳಿ ನಡೆಸಿದರು.
Advertisement
ಬಿಜೆಪಿ ಆರೋಪವೇನು?
ಭೂಪಸಂದದ್ರದ ಸರ್ವೆ ನಂಬರ್ 20, 21ರಲ್ಲಿ ಸುಮಾರು 6 ಎಕರೆ 26 ಗುಂಟೆ ಅಕ್ರಮ ಡಿನೋಟಿಫಿಕೇಷನ್ ನಡೆದಿದೆ. ಆರ್‍ಎಂವಿ ಬಡಾವಣೆಗಾಗಿ ಅಕ್ರಮ ಡಿನೋಟಿಫಿಕೇಶನ್ ನಡೆದಿದೆ. ಸಿಎಂ ಸಿದ್ದರಾಮಯ್ಯ, ಸಚಿವ ಕೆಜೆ ಜಾರ್ಜ್ ವಿರುದ್ದ ದೂರು ನೀಡಿದ್ದರೂ ಎಸಿಬಿ, ಲೋಕಾಯುಕ್ತದಲ್ಲಿ ಸರಿಯಾದ ತನಿಖೆಯಾಗಿಲ್ಲ. ಹಾಗಾಗಿ ಸಿಎಂ ವಿರುದ್ಧ ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಡಿ ಎಂದು ಡಿಸೆಂಬರ್ 20 ರಂದು ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಪುಟ್ಟಸ್ವಾಮಿ ನೇತೃತ್ವದ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
Advertisement
Advertisement