– ಪ್ರಕರಣ ಕೋರ್ಟ್ ತನಿಖೆಯಲ್ಲಿದ್ದಾಗ ಸೈಟು ವಾಪಸ್ ಪಡೆಯಬಹುದೇ?
ಬೆಂಗಳೂರು: ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ (Parvathi Siddaramaiah) ಅವರ ಪತ್ನಿ ಸೈಟು ವಾಪಸ್ ನೀಡಿದ ಬೆನ್ನಲ್ಲೇ ವಿಪಕ್ಷಗಳ ನಡುವಿನ ವಾಗ್ದಾಳಿ ಇನ್ನಷ್ಟು ತೀವ್ರಗೊಂಡಿದೆ. ಈ ನಡುವೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಬಂಧಿಸಬೇಕು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರು ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲ ಮೂಡಾ ಆಯುಕ್ತರನ್ನ ಬಂಧಿಸಬೇಕು. ಅವರು ಯಾವ ಆಧಾರದ ಮೇಲೆ ಸಿಎಂ ಸಿದ್ದರಾಮಯ್ಯ ಪತ್ನಿಗೆ ನೀಡಿರುವ ಸೈಟುಗಳನ್ನ ವಾಪಸ್ ಪಡೆದರು ಅನ್ನೋದು ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ತನಿಖೆ ನಡೆಯುವಾಗ ಸೈಟ್ ವಾಪಸ್ ಪಡೆಯಬಹುದೇ? ಅದನ್ನ ಬೇರೆಯವರಿಗೆ ಹಂಚಬಹುದೇ?; ಮುಡಾ ಆಯುಕ್ತ ಹೇಳಿದ್ದೇನು?
ಮೂಡಾ ಸೈಟ್ ವಿಚಾರದಲ್ಲಿ ಅಧಿಕಾರಿಗಳು ಸಿಎಂ ಪರ ಕೆಲಸ ಮಾಡ್ತಿದ್ದಾರೆ. ಕೋರ್ಟ್‌ನಲ್ಲಿ 62 ಕೋಟಿ ಬೆಲೆ ಬಾಳುವ ಜಾಗವದು, ನಮಗೆ 62 ಕೋಟಿ ನೀಡಿ ಜಾಗ ವಾಪಸ್ ಪಡೆಯಿರಿ ಅಂತಾ ಹೇಳಿದ್ದು, ಈಗ ತನಿಖೆಯ ದಿಕ್ಕು ತಪ್ಪಿಸಲು ಸೈಟ್ ವಾಪಸ್ ಕೊಡೋ ಡ್ರಾಮವನ್ನ ಮಾಡಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ಇದೆ. ಮೂಡಾ ಆಯುಕ್ತರು ಯಾವ ಆಧಾರದ ಮೇಲೆ ಕೇಸ್ ವಾಪಸ್ ಪಡೆದ್ರು ಅನ್ನೋದು ತನಿಖೆಯಾಗಬೇಕು. ಲೋಕಾಯುಕ್ತದವರು ಮೊದಲು ಮೂಡಾ ಆಯುಕ್ತರನ್ನ ಬಂಧಿಸಬೇಕು, ಜಾರಿ ನಿರ್ದೇಶನಾಲಯವು ಮುಡಾ ವಿಚಾರದಲ್ಲಿ ತನಿಖೆ ಶುರು ಮಾಡ್ತಿದ್ದಂತೆ ಈ ರೀತಿ ಯಾಕೆ ಮಾಡಿದ್ರು ಎಂದು ಪ್ರಶ್ನೆ ಮಾಡಿದ್ದಾರೆ.
ಹಣ ಅಕ್ರಮ ವರ್ಗಾವಣೆ ಆಗಿಲ್ಲ ಅಂತಿದ್ದಾರೆ. 62 ಕೋಟಿ ಅಂದಿದ್ದು ಯಾರು? ನನ್ನ ರಾಜೀನಾಮೆ ಯಾಕ್ ಕೇಳ್ತಾರೆ? ನನ್ನನ್ನ ಏನೂ ಮಾಡಲು ಆಗಲ್ಲ. ನಿನ್ನೆ ಕೂಡ ನನ್ನ ಮೇಲೆ ಎಫ್‌ಐಆರ್ ಆಗಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಇದನ್ನೂ ಓದಿ: 14 ಸೈಟ್ ಕೇಸ್‌ಗಿಂತಲೂ ಇದು ದೊಡ್ಡ ಪ್ರಕರಣ – ಹಳೆಯ ಡಿನೋಟಿಫಿಕೇಶನ್ ಕೆದಕಿ ಸಿಎಂಗೆ ಹೆಚ್‌ಡಿಕೆ ಗುದ್ದು
ಮುಡಾ ಆಯುಕ್ತರು ಹೇಳಿದ್ದೇನು?
ಸಿಎಂ ಪತ್ನಿ ಪಾರ್ವತಮ್ಮ ಸಿದ್ದರಾಮಯ್ಯ ಅವರು ಸ್ವಇಚ಼್ಛೆಯಿಂದ ಸೈಟ್ ವಾಪಸ್ ಮಾಡಿದ್ದರ ಕುರಿತು ಮೈಸೂರು ನಗರಾಭಿವೃದ್ಧಿ ಪ್ರಾಧೀಕಾರದ ಆಯುಕ್ತ ರಘನಂದನ್ ಪ್ರತಿಕ್ರಿಯೆ ನೀಡಿದ್ದರು. ಈಗ ಸ್ವ ಇಚ್ಛೆಯಿಂದ ಸೈಟ್ ವಾಪಸ್ ಕೊಟ್ಟಿದ್ದಾರೆ. ಕಾನೂನು ಪರಿಗಣಿಸಿ ನಾವು ಪಾರ್ವತಮ್ಮ ಅವರ ಹೆಸರಿನಲ್ಲಿ ಇದ್ದ 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದ್ದೇವೆ. ಈಗ 14 ನಿವೇಶನ ಮುಡಾ ವ್ಯಾಪ್ತಿಗೆ ಬಂದಿವೆ. ಈ ಸೈಟ್‌ಗಳನ್ನು ಬೇರೆಯವರಿಗೆ ಹಂಚಬಹುದಾ ಅಥವಾ ತನಿಖೆ ಮುಗಿಯುವವರೆಗೂ ಅದನ್ನು ಹಂಚಬಾರದ ಎಂಬ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಪಾರ್ವತಿ ಅವರ ಸೈಟ್‌ಗಳು ತಮ್ಮ ವಶಕ್ಕೆ ಪಡೆದ ಬಗ್ಗೆ ತನಿಖಾ ಸಂಸ್ಥೆಗಳಿಗೆ ಮಾಹಿತಿ ಕೊಡುತ್ತೇವೆ ಎಂದಿದ್ದರು.
ಮುಡಾ ಕಾರ್ಯದರ್ಶಿ ಹೇಳಿದ್ದೇನು?
1991ನ ರೂಲ್ಸ್ 8ನಲ್ಲಿ ಸ್ವ ಇಚ್ಚೆಯಿಂದ ಸೈಟ್ ಕೊಡಬಹುದು. ಆ ಸೈಟ್ ಅನ್ನು ನಾವು ಪಡೆದುಕೊಳ್ಳಲು ಅವಕಾಶವಿದೆ. ನಮ್ಮ ಬಳಿ ಮಾಲೀಕರು ಬಂದಿಲ್ಲ. ಅವರೇ ಖಾಸಗಿಯಾಗಿಯೂ ಅಧಿಕಾರಿಗಳನ್ನು ಕರೆಸಿಕೊಳ್ಳಬಹುದು. ಅದರಂತೆ ಅವರ ಸ್ಥಳಕ್ಕೆ ಹೋಗಿ ಪ್ರಕ್ರಿಯೆ ನಡೆಸಲಾಗುತ್ತದೆ. ನಾವು ಈಗ ಸೈಟ್ ವಾಪಸ್ ಪಡೆದುಕೊಂಡಿದ್ದೇವೆ. ಈಗ ಇದನ್ನು ರಿಜಿಸ್ಟರ್‌ಗೆ ಕಳುಹಿಸಿಕೊಟ್ಟಿದ್ದೇವೆ. ಮುಂದಿನ ಎಲ್ಲಾ ಪ್ರಕ್ರಿಯೆಯನ್ನು ರಿಜಿಸ್ಟರ್ ಮಾಡುತ್ತಾರೆ ಎಂದು ಮೈಸೂರು ಮುಡಾ (MUDA) ಕಾರ್ಯದರ್ಶಿ ಪ್ರಸನ್ನ ಕುಮಾರ್ ಪ್ರತಿಕ್ರಿಯಿಸಿದ್ದರು. ಇದನ್ನೂ ಓದಿ: MUDA Scam | ಒಡವೆ ಕದ್ದ ಕಳ್ಳ ವಾಪಸ್ ಕೊಟ್ಟರೆ ಕೇಸ್ ಮುಗಿಯುತ್ತಾ: ಪ್ರತಾಪ್ ಸಿಂಹ ಪ್ರಶ್ನೆ