ನವದೆಹಲಿ: ಭಾರತ ಹಾಗೂ ವಿದೇಶಿ ವಿಮಾನಗಳು ಸೇರಿದಂತೆ 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ (Bomb Threats) ಬಂದಿದ್ದ ಐಪಿ ವಿಳಾಸವನ್ನು (IP addresses) ಕೇಂದ್ರ ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ. ಬಾಂಬ್ ಬೆದರಿಕೆ ಬಂದಿದ್ದ ಸೋಷಿಯಲ್ ಮೀಡಿಯಾ ಐಪಿ ವಿಳಾಸಗಳು ಲಂಡನ್ ಮತ್ತು ಜರ್ಮನಿಯಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
Advertisement
ಇದೇ ಅಕ್ಟೋಬರ್ 14ರಿಂದ 17ರ ವರೆಗೆ ಸುಮಾರು 20ಕ್ಕೂ ಹೆಚ್ಚು ವಿಮಾನಗಳಿಗೆ ಬಾಂಬ್ ಬೆದರಿಕೆ ಬಂದಿರುವ ಪ್ರಕರಣಗಳು ವರದಿಯಾಗಿವೆ. ಭಾರತ ಸೇರಿದಂತೆ ಅನೇಕ ವಿದೇಶಿ ವಿಮಾನಗಳಿಗೂ (Indian flights) ಬೆದರಿಕೆ ಬಂದಿವೆ. ಭದ್ರತಾ ಪಡೆಗಳು ತಪಾಸಣೆ ನಡೆಸಿದ ನಂತರ ಅವು ಹುಸಿ ಬಾಂಬ್ ಬೆದರಿಕೆ ಎಂಬುದು ಗೊತ್ತಾಗಿದೆ. ಈ ಬೆನ್ನಲ್ಲೇ ಕೇಂದ್ರ ಗುಪ್ತಚರ ಸಂಸ್ಥೆ ಬೆದರಿಕೆ ಮೂಲವನ್ನು ಪತ್ತೆಹಚ್ಚುವ ಕೆಲಸಕ್ಕೆ ಮುಂದಾಗಿತ್ತು. ಬಳಿಕ ಲಂಡನ್ ಮತ್ತು ಜರ್ಮನಿಯಲ್ಲಿ ವಿಳಾಸ ಪತ್ತೆಯಾಗಿದ್ದು, ಎಕ್ಸ್ ಖಾತೆಗಳನ್ನು ನಿಷ್ಕ್ರಿಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್
Advertisement
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗುಪ್ತಚರ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು, ನಾವು ಪ್ರಾಥಮಿಕ ವರದಿಗಳನ್ನು ಸ್ವೀಕರಿಸಿದ್ದೇವೆ. ಈ ಮೂರು ಪ್ರತ್ಯೇಕ ಹ್ಯಾಂಡಲ್‌ಗಳಿಂದ ಪೋಸ್ಟ್ ಮಾಡಲಾಗಿದೆ. ಲಂಡನ್‌ನಲ್ಲಿ ಪತ್ತೆಯಾದ 2 ಐಪಿ ವಿಳಾಸ ಸಾಮಾನ್ಯ ವಿಳಾಸವಾಗಿದೆ. ಉಳಿದಂತೆ ಬಳಕೆದಾರರೊಬ್ಬರು VPN (ವರ್ಚುವಲ್ ಖಾಸಗಿ ನೆಟ್‌ವರ್ಕ್) ಬಳಸಿ ಎಕ್ಸ್ ಖಾತೆಯಲ್ಲಿ ಬೆದರಿಕೆ ಪೋಸ್ಟ್ ಮಾಡಿದ್ದಾರೆ ಎಂದು ತಿಳಿಸಿರುವುದಾಗಿ ವರದಿಗಳು ಉಲ್ಲೇಖಿಸಿವೆ. ಇದನ್ನೂ ಓದಿ: ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್ ಬೆದರಿಕೆ – 3 ದಿನಗಳಲ್ಲಿ 12 ಕೇಸ್
Advertisement
ಅ.16ರಂದು ಸಹ ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಆಕಾಶ ಏರ್ (Akasa Air) ವಿಮಾನ ಹಾಗೂ ಮುಂಬೈನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನಗಳಿಗೂ (IndiGo Flight) ಬಾಂಬ್ ಬೆದರಿಕೆ ಬಂದಿತ್ತು. ಬೆದರಿಕೆ ಬೆನ್ನಲ್ಲೇ ವಿಮಾನಗಳನ್ನು ತುರ್ತು ಲ್ಯಾಂಡಿಂಗ್ ಮಾಡಿ ತೀವ್ರ ತಪಾಸಣೆ ನಡೆಸಲಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಶೇ.3 ರಷ್ಟು ತುಟ್ಟಿಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಅನುಮೋದನೆ