ಪಾಟ್ನಾ: ಅಯೋಧ್ಯೆಯ ರಾಮ ಮಂದಿರ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿದ್ದು, ಅದು ನಿಜವಾಗಿದೆ. ಇದೀಗ ಕೇಂದ್ರ ಗೃಹ ಸಚಿವ ಅಮಿತ್ ಶಾ (Amitshah) ಅವರು ಮತ್ತೊಂದು ಪ್ರಮುಖ ಭರವಸೆ ನೀಡಿದ್ದಾರೆ.
ಬಿಹಾರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡುತ್ತಾ, ಸೀತಾಮರ್ಹಿಯಲ್ಲಿ ಸೀತಾ ದೇವಿಗೆ ಮಂದಿರ ನಿರ್ಮಾಣ ಮಾಡುವ ಕುರಿತು ಪ್ರಸ್ತಾಪ ಮಾಡಿದ್ದಾರೆ.
ಬಿಜೆಪಿಯವರು ‘ವೋಟ್ ಬ್ಯಾಂಕ್’ಗೆ ಹೆದರುವುದಿಲ್ಲ. ಅಯೋಧ್ಯೆಯಲ್ಲಿ ರಾಮಲಲ್ಲಾ ಮಂದಿರವನ್ನು (Ayodhya Ramamanidra) ನಿರ್ಮಿಸಿದ ಪ್ರಧಾನಿ ಮೋದಿಯವರಿಗೆ (Narendra Modi) ಈಗ ಉಳಿದಿರುವ ಕೆಲಸವೆಂದರೆ ಸೀತೆಯ ಜನ್ಮಸ್ಥಳದಲ್ಲಿ ದೊಡ್ಡ ಸ್ಮಾರಕವನ್ನು ನಿರ್ಮಿಸುವುದಾಗಿದೆ. ರಾಮಮಂದಿರವನ್ನು ದೂರವಿಟ್ಟವರು ಇದನ್ನು ಮಾಡಲು ಸಾಧ್ಯವಿಲ್ಲ. ಸೀತೆಯ ಜೀವನದಂತೆ ಆದರ್ಶಪ್ರಾಯವಾದ ದೇವಾಲಯವನ್ನು ಯಾರಾದರೂ ನಿರ್ಮಿಸಲು ಸಾಧ್ಯವಾದರೆ ಅದು ನರೇಂದ್ರ ಮೋದಿ ಹಾಗೂ ಬಿಜೆಪಿಯಿಂದ ಮಾತ್ರ ಎಂದು ಅಮಿತ್ ಶಾ ಹೇಳಿದರು.
ಮೇ 20 ರಂದು 5ನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು, ಬಿಹಾರದ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ 40 ರಲ್ಲಿ 39 ಸ್ಥಾನಗಳನ್ನು ಗೆದ್ದಿತ್ತು.