ನವದೆಹಲಿ: ಕಾಶ್ಮೀರಕ್ಕೆ ಈವರೆಗೆ ನೀಡಿದ ವಿಶೇಷ ಸ್ಥಾನಮಾನ ಹಾಗೂ ವಿಶೇಷ ಅಧಿಕಾರವನ್ನು ರದ್ದು ಮಾಡಿದ ಮೋದಿ ಸರ್ಕಾರಕ್ಕೆ ಆಮ್ ಆದ್ಮಿ ಪಾರ್ಟಿ, ಬಿಎಸ್‍ಪಿ(ಬಹುಜನ ಸಮಾಜವಾದಿ ಪಾರ್ಟಿ), ವೈಎಸ್‍ಆರ್ ಪಿ, ಬಿಜೆಡಿ ಮೋದಿ ಸರ್ಕಾರಕ್ಕೆ ಬೆಂಬಲ ನೀಡಿವೆ. ಇಷ್ಟು ಮಾತ್ರವಲ್ಲದೆ ಎಐಡಿಎಂಕೆಯೂ ಸರ್ಕಾರಕ್ಕೆ ಸಪೋರ್ಟ್ ನೀಡಿದೆ.
ಹಾಗಾದ್ರೆ ಮುಂದೇನು..?
1. ಭಾರತ ಸರ್ಕಾರದ ಎಲ್ಲಾ ಕಾನೂನುಗಳು ಜಮ್ಮು-ಕಾಶ್ಮೀರಕ್ಕೂ ಅನ್ವಯವಾಗಲಿದೆ.
2. ಜಮ್ಮು- ಕಾಶ್ಮೀರದಲ್ಲಿ ಇತರೆ ರಾಜ್ಯಗಳ ಜನರಿಗೂ ಬದುಕಲು ಅವಕಾಶ ನೀಡಲಾಗುತ್ತದೆ.
3. ಜಮ್ಮು-ಕಾಶ್ಮೀರದಲ್ಲಿ ಹೊರಗಿನವರೂ ಆಸ್ತಿ-ಪಾಸ್ತಿ ಖರೀದಿಸಬಹುದು.
4. ಜಮ್ಮು-ಕಾಶ್ಮೀರದಲ್ಲಿ ಇನ್ನು ಮುಂದೆ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ
Advertisement
5. ಜಮ್ಮು-ಕಾಶ್ಮೀರದಲ್ಲಿ ಇನ್ನು ಮುಂದೆ ಅಲ್ಪಸಂಖ್ಯಾತರಿಗೂ ಮೀಸಲಾತಿ ಸಿಗಲಿದೆ
6. ಹೊರಗಿನವರು ಕೂಡ ಇಲ್ಲಿ ಉದ್ಯೋಗ ಹೊಂದಬಹುದು.
7. ಜಮ್ಮು-ಕಾಶ್ಮೀರ 2 ಭಾಗಗಳಾಗಿ ವಿಂಗಡಣೆಯಾಗಿದೆ
8. ಇನ್ನು ಮುಂದೆ ಜಮ್ಮು-ಕಾಶ್ಮೀರ ರಾಜ್ಯವಲ್ಲ, ಆದರೆ ವಿಧಾನಸಭೆ ಇರುತ್ತದೆ.
Advertisement
So far it is BSP , SP , BJD, YSRCP , AIADMK outside NDA block supporting Govt move to scrap #Article370…. More are sure to come . #BharatEKHai
— B L Santhosh (@blsanthosh) August 5, 2019
Advertisement
9. ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಲಿದೆ.
10. ಲಡಾಕ್ ಕೇಂದ್ರಾಡಳಿತ ಪ್ರದೇಶವಾಗಲಿದ್ದು, ಆದರೆ ವಿಧಾನಸಭೆ ಇರಲ್ಲ.
11. ಕೇಂದ್ರಾಡಳಿತ ಪ್ರದೇಶ ಹಿನ್ನೆಲೆಯಲ್ಲಿ ಕೇಂದ್ರದ ಹಿಡಿತದಲ್ಲಿ ಇಡೀ ಜಮ್ಮು-ಕಾಶ್ಮೀರ ಇರಲಿದೆ.
12. ಕಾನೂನು ಸುವ್ಯವಸ್ಥೆ ಹಣಕಾಸು ನೇರವಾಗಿ ಕೇಂದ್ರದ ಹಿಡಿತದಲ್ಲಿರಲಿದೆ.
Advertisement
ರಾಜ್ಯಸಭೆಯಲ್ಲಿ ಇಂದು ಕೇಂದ್ರಗೃಹ ಸಚಿವ ಅಮಿತ್ ಶಾ ಪರಿಚ್ಛೇಧ 370 ಮತ್ತು 35(ಎ) ರದ್ದುಗೊಳಿಸಿದರು. ಈ ವೇಳೆ ವಿಪಕ್ಷ ನಾಯಕರು ವಿರೋಧ ವ್ಯಕ್ತಪಡಿಸಿ ಗಲಾಟೆ ಆರಂಭಿಸಿದರು. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ, ಅಧಿಕಾರ ರದ್ದುಗೊಳಿಸಿದ ಆದೇಶಕ್ಕೆ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.