ಇಟಾನಗರ: ಭಾರತ-ಚೀನಾ (India – China) ಬೆನ್ನಲ್ಲೇ ಅರುಣಾಚಲ ಪ್ರದೇಶದ (Arunachal Pradesh) ತವಾಂಗ್ ಜಿಲ್ಲೆಯ ಚೀನಾ ಗಡಿರೇಖೆ (LAC) ಬಳಿ ಉತ್ತಮ ಸಂಪರ್ಕಕ್ಕಾಗಿ 22 ಮೊಬೈಲ್ ಟವರ್‌ಗಳನ್ನು (Mobile Towers) ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
Advertisement
ಈ ಕುರಿತು ಮಾತನಾಡಿದ ತವಾಂಗ್ ಜಿಲ್ಲಾಧಿಕಾರಿ ಕೆಸಾಂಗ್ ಗ್ನುರುಪ್ ದಾಮೊ, `ಈಗಿರುವ ಟವರ್‌ಗಳು ನಿರೀಕ್ಷಿತ ಸೇವೆ ನೀಡುತ್ತಿಲ್ಲ. ರಕ್ಷಣಾ ಪಡೆ ಮಾತ್ರವಲ್ಲದೇ ನಾಗರಿಕರಿಗೂ ಇದರಿಂದ ತೊಂದರೆಯುಂಟಾಗುತ್ತಿದೆ. ಹಾಗಾಗಿ ಗಡಿ ಪ್ರದೇಶಗಳಲ್ಲಿ ಮೊಬೈಲ್ ಸಂಪರ್ಕವನ್ನು ಸುಧಾರಿಸಲು 22 ಟವರ್‌ಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ. ಒಟ್ಟು 43 ಟವರ್‌ಗಳ ಸ್ಥಾಪನೆಗೆ ಬೇಡಿಕೆ ಸಲ್ಲಿಸಲಾಗಿತ್ತು. ಈ ಪೈಕಿ ಕೇಂದ್ರ ಸರ್ಕಾರ 22 ಟವರ್ ಸ್ಥಾಪಿಸಲು ಅನುಮತಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಅಫ್ಘಾನ್ ವಿದ್ಯಾರ್ಥಿನಿಯರಿಗೆ ವಿಶ್ವವಿದ್ಯಾನಿಲಯ ಶಿಕ್ಷಣಕ್ಕೂ ಅವಕಾಶವಿಲ್ಲ
Advertisement
Advertisement
ಚುನಾ, ಯಾಂಗ್‌ಟ್ಸೆ, ದಮ್‌ಟೆಂಗ್ ಬುಮ್ಲಾ, ಕ್ಲೆಮ್ಟಾ, ವೈ ಜಂಕ್ಷನ್, ಟಿ ಗೊಂಪಾ ಪ್ರದೇಶ, ಲುಂಪೊ, ಜೆಮಿತಾಂಗ್ ಗಡಿ ಪ್ರದೇಶಗಳಲ್ಲಿ ಏರ್‌ಟೇಲ್ ಹಾಗೂ ಬಿಎಸ್‌ಎನ್‌ಎಲ್ ಸಂಸ್ಥೆಗಳಿಗೆ ಟವರ್ ನಿರ್ಮಾಣ ಮಾಡುವ ಜವಾಬ್ದಾರಿ ನೀಡಿದೆ. ಈ ಪೈಕಿ ಬಿಎಸ್‌ಎನ್‌ಎಲ್ (BSNL) 18 ಟವರ್ ಹಾಗೂ ಏರ್‌ಟೆಲ್ (Airtel) 4 ಟವರ್‌ಗಳನ್ನು ನಿರ್ಮಾಣ ಮಾಡಲಿದೆ ಎಂದು ದಾಮೊ ತಿಳಿಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್ ಸುನಾಮಿಗೆ ಕಾರಣ ಏನು?
Advertisement
Live Tv