ನವದೆಹಲಿ: ಕೇಂದ್ರ ಸರ್ಕಾರವು ‘ಯಮುನಾ ಮಾಸ್ಟರ್ ಪ್ಲ್ಯಾನ್’ ಅನ್ನು ಸಿದ್ಧಪಡಿಸಿದ್ದು, ದೆಹಲಿಯಲ್ಲಿ ನದಿಯನ್ನು ಮಿಷನ್ ಮೋಡ್‌ನಲ್ಲಿ ಸ್ವಚ್ಛಗೊಳಿಸಲು ಅನುಮೋದನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಶೀಘ್ರದಲ್ಲೇ ಸಲ್ಲಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಭರವಸೆಯನ್ನು ಬಿಜೆಪಿ ನೀಡಿತ್ತು. ಪ್ರಚಾರದ ಸಮಯದಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ಇದೇ ವಿಚಾರಕ್ಕೆ ರಾಜಕೀಯ ಸಂಘರ್ಷವೂ ಆಗಿತ್ತು.
Advertisement
ಬಿಜೆಪಿ ಸರ್ಕಾರ ರಚನೆಯಾದ ಬೆನ್ನಲ್ಲೇ ಕಳೆದ ವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ಆದೇಶದ ಮೇರೆಗೆ, ರಾಷ್ಟ್ರ ರಾಜಧಾನಿಯ ಮಾಲಿನ್ಯ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವ ಭರವಸೆಗೆ ಅನುಗುಣವಾಗಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ.
Advertisement
ಮೂಲಗಳ ಪ್ರಕಾರ, ‘ಯಮುನಾ ಮಾಸ್ಟರ್ ಪ್ಲ್ಯಾನ್’ಗಾಗಿ, ಜಲಶಕ್ತಿ ಸಚಿವಾಲಯವು ಗುಜರಾತ್‌ನ ಸಬರಮತಿ ನದಿ ದಂಡೆಯನ್ನು ನಿರ್ಮಿಸಿದ ತಜ್ಞರನ್ನು ಸಂಪರ್ಕಿಸಿದೆ. ಹೆಚ್ಚುವರಿಯಾಗಿ, ಸಚಿವಾಲಯವು ಕೆಲವು ಸಭೆಗಳನ್ನು ಸಹ ನಡೆಸಿದೆ.
Advertisement
ಯಮುನಾ ಶುದ್ಧೀಕರಣ ಯೋಜನೆಯು ನಾಲ್ಕು ಪ್ರಮುಖ ಅಂಶಗಳನ್ನು ಒಳಗೊಂಡಿದೆ. ತ್ಯಾಜ್ಯವನ್ನು ತೆಗೆದುಹಾಕುವುದು, ಪ್ರಮುಖ ಚರಂಡಿಗಳನ್ನು ಶುಚಿಗೊಳಿಸುವಿಕೆ, ಒಳಚರಂಡಿ ಸಂಸ್ಕರಣಾ ಘಟಕಗಳ ಕಟ್ಟುನಿಟ್ಟಿನ ಮೇಲ್ವಿಚಾರಣೆ ಮತ್ತು ಸಂಸ್ಕರಣಾ ಮೂಲಸೌಕರ್ಯಗಳ ವಿಸ್ತರಣೆ ಮಾಡುವುದಾಗಿದೆ.