– ಏ. 20ರ ಬಳಿಕವಷ್ಟೇ ಹೊಸ ರೂಲ್ಸ್
ನವದೆಹಲಿ: ಲಾಕ್‍ಡೌನ್ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಹಳೆ ಮಾರ್ಗಸೂಚಿಗಳನ್ನು ಮುಂದುವರಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಈ ನಡುವೆ ಏಪ್ರಿಲ್ 20ರ ಬಳಿಕ ಹೊಸ ಮಾರ್ಗಸೂಚಿ ಬರುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮೇ 3ರ ವರೆಗೂ ಲಾಕ್‍ಡೌನ್ ವಿಸ್ತರಿಸಿ ಘೋಷಣೆ ಮಾಡಿದ್ದಾರೆ. ಇದಾದ ಬಳಿಕ ಕೇಂದ್ರ ಗೃಹ ಇಲಾಖೆ ಇದರ ಅಧಿಕೃತ ಆದೇಶ ಪ್ರಕಟಿಸಿದ್ದು, ಮೇ 2ವರೆಗೂ ರಾಷ್ಟ್ರೀಯ ತುರ್ತು ನಿರ್ವಹಣೆ ಪರಿಸ್ಥಿತಿ ಕಾಯ್ದೆ ಅಡಿಯಲ್ಲಿ ಲಾಕ್‍ಡೌನ್ ಮುಂದುವರಿಯಲಿದೆ ಎಂದು ಉಲ್ಲೇಖಿಸಿದೆ. ಈ ಮಧ್ಯೆ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಬಹುತೇಕ ಹಳೆ ನಿಯಮಗಳನ್ನು ಪಾಲಿಸಲು ಸೂಚನೆ ನೀಡಿದೆ.
Advertisement
Advertisement
ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಸಚಿವಾಲಯ, ಗೈಡ್‍ಲೈನ್ಸ್ ಕಳುಸಿದೆ. ಮೇ 3ರ ವರೆಗೂ ಹಳೆಯ ಮಾರ್ಗಸೂಚಿಗಳೇ ಅನ್ವಯ ಆಗಲಿವೆ. ಈ ಹಳೆ ನಿಯಮಗಳ ಪಾಲನೆಯಿಂದಾಗಿ ಮದ್ಯ ಮಾರಾಟ ಅನುಮಾನ ಎನ್ನಲಾಗುತ್ತಿದೆ.
Advertisement
ಲಾಕ್‍ಡೌನ್-2 ಮಾರ್ಗಸೂಚಿ
1. ರಕ್ಷಣೆ, ಕೇಂದ್ರ, ರಾಜ್ಯ ಪೊಲೀಸ್ ಪಡೆಗಳಿಗೆ ವಿನಾಯಿತಿ.
2. ಎಲ್‍ಪಿಜಿ, ವಿದ್ಯುತ್, ನೀರು, ಪೋಸ್ಟ್ ಆಫೀಸ್, ಬ್ಯಾಂಕ್, ಎಟಿಎಂಗಳಿಗೆ ಅವಕಾಶ.
3. ಮದ್ಯ ಮಾರಾಟಕ್ಕೆ ಅವಕಾಶ ಕ್ಷೀಣ.
4. ಬಸ್, ರೈಲು, ವಿಮಾನ ಸಂಚಾರದ ಮೇಲೆ ನಿರ್ಬಂಧ ಮುಂದುವರಿಕೆ.
5. ಸ್ಥಳೀಯ ಸಂಸ್ಥೆಗಳ ಅಗತ್ಯ ಸೇವೆಗಳಿಗೆ ವಿನಾಯಿತಿ.
6. ಸರ್ಕಾರದ ಪರವಾನಗಿ ಹೊಂದಿರುವ ಕೃಷಿ ಉತ್ಪನ್ನಗಳ ಮಂಡಿಗಳಿಗೆ ಅವಕಾಶ.
7. ಕೃಷಿ ಚಟುವಟಿಕೆ, ಕೃಷಿ ಉತ್ಪನ್ನಗಳ ಸಾಗಣೆಗೆ ಅವಕಾಶ.
8. ರಸಗೊಬ್ಬರ, ಕ್ರಿಮಿನಾಶಕ ಅಂಗಡಿಗೆ ಅವಕಾಶ.
9. ದಿನಸಿ ಅಂಗಡಿ, ಹಣ್ಣು, ತರಕಾರಿ, ಹಾಲು, ಮೀನು, ಮಾಂಸ ಮಾರಾಟಕ್ಕೆ ಅವಕಾಶ.
Advertisement
10. ಪತ್ರಿಕೆ, ವಿದ್ಯುನ್ಮಾನ ಮಾಧ್ಯಮ, ಇಂಟರ್ ನೆಟ್ ಸರಾಗ.
11. ವೈದ್ಯಕೀಯ, ಆಹಾರ ಪೂರೈಸುವ ಇ- ಕಾಮರ್ಸ್ ಗಳಿಗೆ ಅವಕಾಶ.
12. ಪೆಟ್ರೋಲ್ ಬಂಕ್, ಷೇರುಪೇಟೆ, ಶೀತಲೀಕರಣ ಘಟಕಗಳಿಗೆ ರಿಲೀಫ್.
13. ಹೆದ್ದಾರಿ, ರೈಲುಗಳಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅವಕಾಶ.
14. ಶಿಕ್ಷಣ ಸಂಸ್ಥೆಗಳು, ಧಾರ್ಮಿಕ ಕಾರ್ಯಕ್ರಮಗಳಿಗೆ ನಿರ್ಬಂಧ.
15. ತುರ್ತು ಸೇವೆಯಲ್ಲಿರುವವರ ಬಳಕೆಗೆ ಹೋಟೆಲ್, ಲಾಡ್ಜ್.
16. ಅಂತ್ಯಕ್ರಿಯೆಗಳಿಗೆ 20ಕ್ಕೂ ಹೆಚ್ಚು ಮಂದಿ ಸೇರುವಂತಿಲ್ಲ.
17. ಮಾಸ್ಕ್ ಇಲ್ಲದೆ ಓಡಾಡಿದರೆ ದಂಡ, ಶಿಕ್ಷೆ ಸಾಧ್ಯತೆ.
18. ರೈತರು, ಕೂಲಿ ಕಾರ್ಮಿಕರಿಗೆ ಸ್ವಲ್ಪ ರಿಯಾಯಿತಿ.
ಪ್ರಧಾನಿ ಮೋದಿ ಭಾಷಣದ ವೇಳೆ ಏಪ್ರಿಲ್ 20ರವರೆಗೂ ಕಠಿಣವಾಗಿ ಲಾಕ್‍ಡೌನ್ ನಿಯಮಗಳು ಪಾಲನೆಯಾಗಬೇಕು ಅಂತ ಎಚ್ಚರಿಸಿದ್ದರು. ಅದರಲ್ಲೂ ರೆಡ್‍ಝೋನ್‍ನಲ್ಲಿರುವ ಪ್ರದೇಶಗಳಲ್ಲಿ ತುಸು ಹೆಚ್ಚಾಗಿ ಎಚ್ಚರಿಕೆ ವಹಿಸಲಾಗುತ್ತೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಹೊಸ ನಿಯಮಗಳನ್ನು ಜಾರಿ ಮಾಡುವುದಾಗಿ ಕೂಡ ಹೇಳಿದ್ದರು. ಈಗಾಗಲೇ ಹಳೆ ನಿಯಮಗಳ ಪಾಲನೆಗೆ ಸೂಚಿಸಿರುವ ಸರ್ಕಾರ ರೆಡ್ ಝೋನ್ ಪ್ರದೇಶಗಳಿಗೆ ಮಾತ್ರ ಇಂದು ಹೊಸ ಮಾರ್ಗಸೂಚಿ ಪ್ರಕಟಿಸಬಹುದು ಎನ್ನಲಾಗುತ್ತಿದೆ.
ಏಪ್ರಿಲ್ 20ರ ಬಳಿಕ ಒಂದಿಷ್ಟು ವಿನಾಯಿತಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವ ಹಿನ್ನೆಲೆಯಲ್ಲಿ 20ರ ಬಳಿಕವಷ್ಟೇ ಹೊಸ ಮಾರ್ಗ ಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.