ಬೆಳಗಾವಿ: ಬೆಳಗಾವಿ (Belagavi) ಮಹಾನಗರದಲ್ಲಿ ಹೊಸತನ ಬಯಸುವ ಶಾಸಕ ಅಭಯ ಪಾಟೀಲ (Abhay Patil) ಈಗ ಬೆಳಗಾವಿಯ ಸೌಂದರ್ಯ ಹೆಚ್ಚಿಸಿ ಪಕ್ಕದ ರಾಜ್ಯಗಳ ಪ್ರವಾಸಿಗರನ್ನು ಆಕರ್ಷಿಸುವ ಕೇಬಲ್ ಕಾರ್ (Cable Car) ಯೋಜನೆಯ ಅನುಷ್ಠಾನಕ್ಕೆ ಕೇಂದ್ರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಬೆಳಗಾವಿ ದಕ್ಷಿಣ ಮತಕ್ಷೇತ್ರದ ಯಳ್ಳೂರು ಗ್ರಾಮದಿಂದ ರಾಜಹಂಸಗಡ ವರೆಗೆ ಕೇಬಲ್ ಕಾರ್ ಅಳವಡಿಸಲು 60 ಕೋಟಿ ರೂ.ಗಳ ಯೋಜನೆಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದ್ದರು. ಅದಕ್ಕೆ ತಕ್ಷಣವೇ ಸ್ಪಂದಿಸಿದ ಕೇಂದ್ರ ಸಚಿವರು, ಪರಿಶೀಲನೆ ಮಾಡಿ ತಕ್ಷಣ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: BJP-JDS ಮೈತ್ರಿಗೆ ಜೆಡಿಎಸ್ ಹಾಲಿ, ಮಾಜಿ ಶಾಸಕರಿಂದ ಸಹಮತ
Advertisement
Advertisement
ಡಿಸೆಂಬರ್ ಒಳಗಾಗಿ ವರದಿ ಪಡೆದು ಅಗತ್ಯ ಅನುದಾನ ಬಿಡುಗಡೆ ಮಾಡಿ ಜನವರಿ ತಿಂಗಳ ನಂತರ ಕೇಬಲ್ ಕಾರ್ ಯೋಜನೆಯ ಕಾಮಗಾರಿ ಆರಂಭಿಸಲಾಗುವುದು ಎಂದು ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಭರವಸೆ ನೀಡಿದ್ದಾರೆ ಎಂದು ಶಾಸಕ ಅಭಯ ಪಾಟೀಲ ತಿಳಿಸಿದ್ದಾರೆ. ಇದನ್ನೂ ಓದಿ: CWMA ನೀಡಿರುವ ಆದೇಶ ಪಾಲಿಸಲಾಗದ ಆಜ್ಞೆ: ಬೊಮ್ಮಾಯಿ
Advertisement
Advertisement
ಈ ಯೋಜನೆಯ ಅನುಷ್ಠಾನದಿಂದ ಬೆಳಗಾವಿಯ ಮಹಾನಗರದ ಜನ ಎಂಜಾಯ್ ಮಾಡಲು ಯಳ್ಳೂರು ಪಿಕ್‌ನಿಕ್ ಪಾಯಿಂಟ್ ಆಗುವುದರ ಜೊತೆಗೆ ಪಕ್ಕದ ಮಹಾರಾಷ್ಟç ಮತ್ತು ಗೋವಾ ರಾಜ್ಯಗಳ ಪ್ರವಾಸಿಗರನ್ನು ಬೆಳಗಾವಿಯತ್ತ ಸೆಳೆಯಲು ಕೇಬಲ್ ಕಾರ್ ಪ್ರಮುಖ ಆಕರ್ಷಣೆಯಾಗಲಿದೆ. ಇದರಿಂದ ಬೆಳಗಾವಿಯ ಆರ್ಥಿಕ ವಹಿವಾಟು ಹೆಚ್ಚಳವಾಗಲಿದೆ ಎಂದು ಅಭಯ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ರಿಲೀಫ್ – ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ
Web Stories