ಬೆಂಗಳೂರು: ರಾಮನಗರ ಜಿಲ್ಲೆಯ ಹೆಸರು ಬದಲಾವಣೆಗೆ ಕೇಂದ್ರ ತಿರಸ್ಕಾರ ಮಾಡಿರುವುದು ಒಳ್ಳೆಯ ಸುದ್ದಿ ಎಂದು ಶಾಸಕ ಅಶ್ವಥ್ ನಾರಾಯಣ್ (Ashwath Narayan) ಹೇಳಿದರು.ಇದನ್ನೂ ಓದಿ: ವೆಕೇಷನ್ ಮೂಡ್‌ನಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ ಪೈ
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಮಾಡಬೇಕೆಂಬ ಪ್ರಸ್ತಾಪ ತಿರಸ್ಕಾರ ಆಗಿದೆ. ರಾಮನಗರ ಜಿಲ್ಲೆಯಾಗಿ ಉಳಿಯಬೇಕು. ರಿಯಲ್ ಎಸ್ಟೇಟ್ ಹೆಸರಲ್ಲಿ ಮಾರಾಟ ಮಾಡಬೇಕು ಎನ್ನುವುದು ಇದರ ದುರುದ್ದೇಶ. ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡದೆ, ಹೆಸರು ಬದಲಾಯಿಸಿ, ವ್ಯಾಪಾರ ದೃಷ್ಟಿಯಿಂದ ಹೆಸರು ಬದಲಾವಣೆ ಮಾಡುವುದಕ್ಕೆ ಹೊರಟಿದ್ದರು. ಇದು ರಾಮನಗರ ಜಿಲ್ಲೆಗೆ ಮಾಡಿದ ಅವಮಾನ ಎಂದು ಕಿಡಿಕಾರಿದರು.
ಇದೇ ವೇಳೆ ಶಾಸಕ ಮುನಿರತ್ನಗೆ ಜೀವ ಬೆದರಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅಶ್ವಥ್ ನಾರಾಯಣ್, ಎಲ್ಲ ಶಾಸಕರಿಗೆ ಗನ್‌ಮ್ಯಾನ್ ಕೊಟ್ಟಿದ್ದಾರೆ. ಮುನಿರತ್ನ ಅವರಿಗೂ ಗನ್‌ಮ್ಯಾನ್ ಕೊಡಲಿ ಎಂದು ಒತ್ತಾಯಿಸಿದರು.ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಸರ್ಕಾರಿ ಸಾರಿಗೆ ಬಸ್ – ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು