ಬೆಂಗಳೂರು: ಕಾವೇರಿ (Cauvery) ನೀರು ವಿಚಾರವಾಗಿ ಸುಪ್ರೀಂಕೋರ್ಟ್‌ಗೆ ಮತ್ತೆ ಅರ್ಜಿ ಸಲ್ಲಿಕೆ ಮಾಡುತ್ತೇವೆ ಎಂದು ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ತಿಳಿಸಿದ್ದಾರೆ.
ಕಾವೇರಿ ನೀರಾವರಿ ಬೋರ್ಡ್ ಸಭೆ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಳೆಯಿಲ್ಲದೆ ದೊಡ್ಡ ಕಷ್ಟ ಆಗಿದೆ. 180 ಕ್ಕೂ ಹೆಚ್ಚು ತಾಲೂಕುಗಳನ್ನು ಬರ ತಾಲೂಕು ಎಂದು ಘೋಷಣೆ ಮಾಡಿದ್ದೇವೆ. ಇವತ್ತು ಕಾವೇರಿ ಬೋರ್ಡ್ ಸಭೆ ಇದೆ. ಬೋರ್ಡ್ ಮುಂದೆ ವಾಸ್ತವಿಕ ಅಂಶ ತಿಳಿಸುತ್ತೇವೆ ಎಂದರು.
Advertisement
Advertisement
ನಾನು ಈಗಾಗಲೇ ಕೇಂದ್ರ ಸಚಿವರನ್ನು ಭೇಟಿಯಾಗಿದ್ದೇನೆ. ಸಿಎಂ ಬರೆದ ಪತ್ರವನ್ನು ತಲುಪಿಸಿ ಚರ್ಚೆ ಮಾಡಿದ್ದೇನೆ. ನೀವು ಮಧ್ಯ ಪ್ರವೇಶ ಮಾಡಬೇಕು ಅಂತ ಕೇಳಿದ್ದೇನೆ. ಸಂಸತ್ ನಡೆಯೋ ಸಮಯದಲ್ಲಿ ಸಂಸದರು ಹೋಗಿ ಭೇಟಿ ಮಾಡೋ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಸರ್ವ ಪಕ್ಷ ನಿಯೋಗ ಕರೆದುಕೊಂಡು ಹೋಗಲು ಅವರು ಸಮಯ ಕೊಟ್ಟಿಲ್ಲ. ತಮಿಳುನಾಡಿನವರು ಅವರದೇ ಆದ ನಿಲುವನ್ನು ತಾಳಿದ್ದಾರೆ. ನಾವು ನಮ್ಮ ಜನರನ್ನು ಕಾಪಾಡಬೇಕು. ಕೋರ್ಟ್‌ಗೆ ಹೋಗ್ತೀವಿ ಎಂದರು. ಇದನ್ನೂ ಓದಿ: ರಾಜ್ಯದ ಕೆಟ್ಟ ಸರ್ಕಾರ ತೆಗೆಯಲು ಮೈತ್ರಿ ಒಳ್ಳೆಯದು: ರಮೇಶ್ ಜಾರಕಿಹೊಳಿ
Advertisement
Advertisement
ನಾವು ಸುಪ್ರೀಕೋರ್ಟ್‌ಗೆ ಹೋಗ್ತೀವಿ. ಕೋರ್ಟ್‌ಗೆ ವಾಸ್ತವಾಂಶ ಹೇಳುತ್ತೇವೆ. ನೀವೇ ಬಂದು ಪರಿಸ್ಥಿತಿ ನೋಡಿ ಅಂತ ಸುಪ್ರೀಂಕೋರ್ಟ್‌ಗೆ ಮನವಿ ಮಾಡ್ತೀವಿ. ಎರಡು ಕಡೆ ಬಂದು ಕೋರ್ಟ್ ನೋಡಲಿ. ಎರಡು ಕಡೆ ನೋಡಿ ಸುಪ್ರೀಂಕೋರ್ಟೇ ಹೇಳಲಿ ಅಂತ ತಿಳಿಸಿದರು. ಇದನ್ನೂ ಓದಿ: ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಎಂಪಿ ರೇಣುಕಾಚಾರ್ಯ?
Web Stories