ನವದೆಹಲಿ: ಹಲವಾರು ರಾಜ್ಯಗಳಲ್ಲಿ ಹೆಚ್5ಎನ್1(H5N1) ಹಕ್ಕಿ ಜ್ವರ(Birf flu) ಹರಡುತ್ತಿರುವ ಹಿನ್ನೆಲೆ ಎಲ್ಲಾ ಕೋಳಿ ಫಾರಂಗಳ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಹಕ್ಕಿ ಜ್ವರ ಹರಡುವಿಕೆ ತಡೆಗಟ್ಟಲು ಮೂರು-ಹಂತದ ಕಾರ್ಯತಂತ್ರದ ಭಾಗವಾಗಿ ಎಲ್ಲಾ ಕೋಳಿ ಸಾಕಣೆ ಕೇಂದ್ರಗಳು ಒಂದು ತಿಂಗಳೊಳಗೆ ಕಡ್ಡಾಯವಾಗಿ ಆಯಾ ರಾಜ್ಯ ಪಶುಸಂಗೋಪನಾ ಇಲಾಖೆಗಳಲ್ಲಿ ನೋಂದಣಿ ಮಾಡಬೇಕು ಎಂದು ಕೇಂದ್ರ ಪಶುಸಂಗೋಪನೆ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದನ್ನೂ ಓದಿ: ಮಾಜಿ ಸಿಎಂಗಳು ಸಂಚರಿಸಿದ ಕಾರನ್ನ 2.10 ಲಕ್ಷಕ್ಕೆ ಖರೀದಿಸಿದ ಕಾಂಗ್ರೆಸ್ ನಾಯಕ
ದೇಶದ ಹಲವಾರು ಪ್ರದೇಶಗಳಲ್ಲಿ ಹೆಚ್5ಎನ್1 ವೈರಸ್ ನಿರಂತರವಾಗಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ದೇಶನ ಬಂದಿದೆ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಛತ್ತೀಸ್‌ಗಢ, ಮಧ್ಯಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ 34 ಕೇಂದ್ರಗಳಲ್ಲಿ ಅಧಿಕಾರಿಗಳು ಹಕ್ಕಿ ಜ್ವರದ ಹರಡುವಿಕೆಯನ್ನು ದೃಢಪಡಿಸಿದ್ದಾರೆ. ಇದನ್ನೂ ಓದಿ: ನ್ಯಾಮತಿ ಬ್ಯಾಂಕ್ ದರೋಡೆಗೂ ಮುನ್ನ ಪೂಜೆ ಸಲ್ಲಿಸಿದ್ದ ದೇವಾಲಯದಲ್ಲಿ ಕಳ್ಳತನ!
ಹಕ್ಕಿ ಜ್ವರವನ್ನು ಹಾಗೂ ಅದರ ಹರಡುವಿಕೆಯನ್ನು ತಡೆಗಟ್ಟಲು ತುರ್ತು ಕ್ರಮಗಳ ಕುರಿತು ಚರ್ಚಿಸಲು ಅಲ್ಕಾ ಉಪಾಧ್ಯಾಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಕೃಷಿ ಭವನದಲ್ಲಿ ಕೋಳಿ ಉದ್ಯಮ ಪ್ರತಿನಿಧಿಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಅಧಿಕಾರಿಗಳು ಮತ್ತು ಇತರ ಪಾಲುದಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಯಿತು. ಇದನ್ನೂ ಓದಿ: ಹೆಡ್ ಕಾನ್‍ಸ್ಟೇಬಲ್ ಮನೆಗೆ ಕನ್ನ – 5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು
ಹಕ್ಕಿ ಜ್ವರ ಎಂದರೇನು?
ಏವಿಯನ್ ಇನ್ಫ್ಲುಯೆನ್ಸ್ ಎಂದು ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಒಂದು ಸೋಂಕು ಆಗಿದ್ದು, ಅದು ಪಕ್ಷಿಗಳಲ್ಲಿ ಹರಡುತ್ತದೆ. ಇದು ಮನುಷ್ಯರಿಗೆ ಹರಡುವ ಸಾಧ್ಯತೆ ಕಡಿಮೆ.