– 103, 104 ವರ್ಷದ ಹಿರಿಯ ಮತದಾರರಿಂದ ಅಂಚೆ ಮತದಾನ
ಚಿಕ್ಕಮಗಳೂರು: ಜಿಲ್ಲೆಯ ಮೀಸಲು ಕ್ಷೇತ್ರವಾದ ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಪತ್ರ (Postal Ballot) 12ಡಿ ಪಡೆದ ಅರ್ಹ ವ್ಯಕ್ತಿಗಳ ಪೈಕಿ 176 ಹಿರಿಯ ನಾಗರಿಕರು, 31 ವಿಶೇಷಚೇತನರಿಗೆ ಮನೆಯಿಂದಲೇ ಮತ ಚಲಾಯಿಸುವ (Voting) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
Advertisement
ಅಂಚೆ ಮತ ಪತ್ರ ನಮೂನೆ 12ಡಿ ಪಡೆದ ಅರ್ಹ ವ್ಯಕ್ತಿಗಳಿಂದ ಮನೆಯಿಂದಲೇ ಮತದಾನ ಮಾಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ಪೈಕಿ ಆವತಿ ಹೋಬಳಿ ಕಣತಿ ಗ್ರಾಮದ 38ರ ಮತಗಟ್ಟೆಯ ಹಿರಿಯ ಮತದಾರರಾದ ಬೀಬಿ ಜಾನ್ ಮೈದೀನ್ ಬಿನ್ ಮೈದಿನ್ (103 ವರ್ಷ) ಅವರಿಂದ ಮತದಾನ (Postal Ballot) ಮಾಡಿಸಲಾಗಿದೆ. ಇದನ್ನೂ ಓದಿ: ಮೋದಿ ʻಮನ್ ಕಿ ಬಾತ್ʼ100ನೇ ಸಂಚಿಕೆ ಇಂದು ಪ್ರಸಾರ
Advertisement
Advertisement
ಚುನಾವಣಾಧಿಕಾರಿಗಳಾದ ಹೆಚ್.ಡಿ ರಾಜೇಶ್ ಅವರು ಜಾನ್ ಮೈದೀನ್ ಬಿನ್ ಮೈದೀನ್ ಅವರಿಗೆ ಮತಪತ್ರ ನೀಡಿ ಮನೆಯಿಂದಲೇ ಮತದಾನ ಮಾಡಿಸಿದ್ದಾರೆ. ಇದೇ ವೇಳೆ ಹೂ ಗುಚ್ಛ ನೀಡಿ ಗೌರವಿಸಿದ್ದಾರೆ. ಇದನ್ನೂ ಓದಿ: ಓಲ್ಡ್ ಮೈಸೂರೇ ಮೋದಿ ಟಾರ್ಗೆಟ್- ಒಂದೇ ದಿನ 4 ಜಿಲ್ಲೆಗಳಲ್ಲಿ ನಮೋ ಮಿಂಚಿನ ಸಂಚಾರ
Advertisement
ಅಲ್ಲದೇ ಬಣಕಲ್ ಹೋಬಳಿ, ಹಳೇಹಳ್ಳಿ (ಭಾರತೀ ಬೈಲು) ಗ್ರಾಮದ ಮತಗಟ್ಟೆಯ ಸಂಖ್ಯೆ 139 ಕ್ರ.ಸಂ. 836ರ 104 ವರ್ಷದ ಪುಟ್ಟಮ್ಮ ಅವರಿಂದಲೂ ಸಹಾಯಕ ಚುನಾವಣಾಧಿಕಾರಿ ವೈ.ತಿಪ್ಪೇಸ್ವಾಮಿ ಅಂಚೆ ಮತದಾನ ಮಾಡಿಸಿದರು. ಇತರ ಸಿಬ್ಬಂದಿ ಜೊತೆಗಿದ್ದರು.