– ಸ್ವಯಂ ಗಣತಿ ಮಾಡೋದು ಹೇಗೆ?
ಬೆಂಗಳೂರು: ರಾಜ್ಯದಲ್ಲಿ (Karnataka) ಇಂದಿನಿಂದ ಜನಗಣತಿ (Census) ಆರಂಭಗೊಂಡಿದ್ದು, ಎರಡು ಹಂತಗಳಲ್ಲಿ ಜನಗಣತಿ ನಡೆಯಲಿದೆ.
ಮೊದಲ ಹಂತದಲ್ಲಿ ಮನೆಗಳ ಗಣತಿ ಮತ್ತು ಎರಡನೇ ಹಂತದಲ್ಲಿ ಜನ ಗಣತಿ ನಡೆಯಲಿದೆ. ಇಂದಿನಿಂದ ಸ್ವಯಂ ಗಣತಿ ಕೂಡ ಆರಂಭವಾಗಿದೆ. ಸ್ವಯಂ ಗಣತಿಯಲ್ಲಿ ಸ್ವತಃವಾಗಿ ಜನರೇ ಭಾಗವಹಿಸಿ ನೋಂದಣಿ ಮಾಡಿಕೊಳ್ಳಬಹುದು. ಗಣತಿಯ ವೆಬ್ ಪೋರ್ಟಲ್‌ನಲ್ಲಿ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ಮನೆಯ ಯಾವುದೇ ಒಬ್ಬ ಸದಸ್ಯರು ವೆಬ್ ಪೋರ್ಟಲ್ ಮೂಲಕ ಮನೆಯ ವಿವರಗಳನ್ನ ದಾಖಲಿಸಬಹುದು. ನೋಂದಾಣಿ ನಂತರ ಸ್ವಯಂಗಣತಿಯ ಐಡಿಯನ್ನ ಮೊಬೈಲ್ ಅಥವಾ ಇಮೇಲ್ ಮೂಲಕ ಪಡೆಯಬಹುದು. ಇದನ್ನೂ ಓದಿ: ರಾಯಚೂರಿನಲ್ಲಿ ರೊಟ್ಟಿ ಕೇಂದ್ರಗಳಿಗೆ ತಟ್ಟಿದ ಗ್ಯಾಸ್ ಸಿಲಿಂಡರ್ ಬಿಸಿ

ಏ.1ರಿಂದ ಏ.15ರವರೆಗೂ ಸ್ವಯಂ ಗಣತಿಯಲ್ಲಿ ಭಾಗವಹಿಸಬಹುದು. ನಂತರ ಗಣತಿದಾರರು ಮನೆ ಮನೆಗೆ ತೆರಳಿ ಗಣತಿ ಮಾಡಲಿದ್ದಾರೆ. ಎರಡನೇ ಹಂತವಾಗಿ ಏ.16ರಿಂದ ಮೇ 15ರ ಅವಧಿಯಲ್ಲಿ ಗಣತಿದಾರರು ಮನೆ – ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪರಿಶೀಲಿಸಿ ಸಂಗ್ರಹಿಸಲಿದ್ದಾರೆ. ಇದನ್ನೂ ಓದಿ: ಆಪರೇಷನ್ ಅರಹಮಾ | ಜಮ್ಮು ಕಾಶ್ಮೀರದಲ್ಲಿ ಎನ್‌ಕೌಂಟರ್ – ಓರ್ವ ಪಾಕ್ ಉಗ್ರನ ಹತ್ಯೆ
ಸ್ವಯಂ ಗಣತಿ ಹೇಗೆ ಮಾಡುವುದು?
* ಅಧಿಕೃತ ಪೋರ್ಟಲ್ Se.census.gov.in ಗೆ ಭೇಟಿ ನೀಡಿ.
* ಓಟಿಪಿ ಬರುವ ಮೊಬೈಲ್ ಸಂಖ್ಯೆ ಮೂಲಕ ಲಾಗಿನ್ ಆಗಬೇಕು.
* ರಾಜ್ಯ, ಜಿಲ್ಲೆ, ಸ್ಥಳೀಯ ವಿವರ ಹಾಕಬೇಕು.
* ಡಿಜಿಟಲ್ ಮ್ಯಾಪ್‌ನಲ್ಲಿ ಮನೆಯ ಸ್ಥಳವನ್ನ ಗುರುತಿಸುವುದು.
* ನಿಮ್ಮ ಮನೆ ಮತ್ತು ಕುಟುಂಬಕ್ಕೆ ಸಂಬಂಧಿಸಿದ ವಿವರಗಳನ್ನ ಭರ್ತಿ ಮಾಡಿ.
* ಗುರುತಿಸಿದ ನಂತರ ಸ್ವಯಂ ಗಣತಿ ಐಡಿ ಪಡೆಯುತ್ತೀರಿ.
* ನಿಮ್ಮ ಸ್ವಯಂ ಗಣತಿಯ ಐಡಿಯನ್ನ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು..
* ಗಣತಿದಾರರು ಮನೆಗೆ ಭೇಟಿ ನೀಡಿದಾಗ ನಿಮ್ಮ ಸ್ವಯಂ ಐಡಿಯನ್ನು ನೀಡಬೇಕು.
* ಗಣತಿದಾರರು ಸ್ವಯಂ ಐಡಿ ಮೂಲಕ ವಿವರಗಳನ್ನು ದೃಢಿಕರಿಸುತ್ತಾರೆ.

