ಬೆಂಗಳೂರು: ಈ ವಾರವೇ ಅದ್ದೂರಿಯಾಗಿ ಬಿಡುಗಡೆಯಾಗಲು ನನ್ನಪ್ರಕಾರ ಚಿತ್ರ ಸಜ್ಜುಗೊಂಡಿದೆ. ಇದು ವಿನಯ್ ಬಾಲಾಜಿ ನಿರ್ದೇಶನದ ಚೊಚ್ಚಲ ಚಿತ್ರವಾಗಿದ್ದರೂ ಕೂಡಾ ಯಾವ ಸ್ಟಾರ್ ಸಿನಿಮಾಗಳಿಗೂ ಕಡಿಮೆ ಇಲ್ಲದಂತೆ ಸದ್ದು ಮಾಡುತ್ತಿರೋದಂತೂ ನಿಜ. ಇದೆಲ್ಲ ಹೇಗೆ ಸಾಧ್ಯವಾಯಿತೆಂಬ ಅಚ್ಚರಿ ಯಾರಿಗಾದರೂ ಇದ್ದರೆ ಅದಕ್ಕೆ ಕ್ರಿಯೇಟಿವಿಟಿ, ಹೊಸತನಕ್ಕಾಗಿನ ಹುಡುಕಾಟ ಎಂಬುದಕ್ಕಿಂತ ಬೇರ್ಯಾವ ಉತ್ತರವೂ ಸಿಗಲು ಸಾಧ್ಯವಿಲ್ಲ. ಈ ಚಿತ್ರದಲ್ಲಿ ಪ್ರತೀ ವಿಚಾರದಲ್ಲಿಯೂ ಪ್ರಯೋಗಾತ್ಮಕ ಅಂಶಗಳನ್ನು ಬೆರೆಸಿರೋ ನಿರ್ದೇಶಕರು ನನ್ನಪ್ರಕಾರ ಸ್ಕ್ರೀನ್‍ಪ್ಲೇನಲ್ಲಿ ನವೀನ ಪ್ರಯೋಗ ಹೊಂದಿದೆ ಅನ್ನೋ ವಿಚಾರವನ್ನು ಹೇಳಿದ್ದರು. ಇದೀಗ ಆ ಸ್ಕ್ರೀನ್ ಪ್ಲೇ ಚಮತ್ಕಾರ ಸೆನ್ಸಾರ್ ಮಂಡಳಿ ಅಧಿಕಾರಿಗನ್ನೂ ಥ್ರಿಲ್ ಆಗಿಸಿದೆ.
ನನ್ನ ಪ್ರಕಾರ ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಸಿಕ್ಕಿದೆ. ಇದರೊಂದಿಗೆ ಸೆನ್ಸಾರ್ ಮಂಡಳಿ ಅಧಿಕಾರಿಗಳ ಕಡೆಯಿಂದ ಭರಪೂರವಾದ ಮೆಚ್ಚುಗೆಗಳೂ ಸಿಕ್ಕಿವೆ. ಪ್ರಧಾನವಾಗಿ ಅವರಿಗೆ ನನ್ನಪ್ರಕಾರದಲ್ಲಿ ಮಾಡಲಾಗಿರೋ ಸ್ಕ್ರೀನ್ ಪ್ಲೇ ಪ್ರಯೋಗಗಳು ಇಷ್ಟವಾಗಿವೆ. ಇತ್ತೀಚೆಗೆ ತಾವು ನೋಡಿದ ಚಿತ್ರಗಳ ಸಾಲಿನಲ್ಲಿ ಇದೊಂದು ಅದ್ಭುತವಾದ ಸ್ಕ್ರೀನ್‍ಪ್ಲೇ ಪ್ರಯೋಗ ಹೊಂದಿರೋ ಚಿತ್ರ ಎಂಬ ಮುಕ್ತಕಂಠದ ಮೆಚ್ಚುಗೆಯೂ ಅವರ ಕಡೆಯಿಂದ ಸಿಕ್ಕಿದೆ. ಇದರಿಂದ ನಿರ್ದೇಶಕ ವಿನಯ್ ಬಾಲಾಜಿ ಸೇರಿದಂತೆ ಇಡೀ ಚಿತ್ರತಂಡವೇ ಸಂತಸಗೊಂಡಿದೆ.
ಸೆನ್ಸಾರ್ ಮಂಡಳಿ ಅಧಿಕಾರಿಗಳು ಹೀಗೆ ಮೆಚ್ಚುಗೆ ಸೂಚಿಸಿರೋದು ಇಡೀ ಚಿತ್ರದಲ್ಲಿ ಸ್ಕ್ರೀನ್ ಪ್ಲೇ ಕಸುವೆಂಥಾದ್ದಿದೆ ಅನ್ನೋದಕ್ಕೆ ಸ್ಪಷ್ಟ ಸಾಕ್ಷಿ. ಕೇವಲ ಸ್ಕ್ರೀನ್ ಪ್ಲೇನಲ್ಲಿ ಮಾತ್ರವಲ್ಲದೇ ಎಲ್ಲ ವಿಚಾರಗಳಲ್ಲಿಯೂ ಇಂಥಾದ್ದೇ ಹೊಸತನ ಮತ್ತು ಹೊಸಾ ಪ್ರಯೋಗಗಳೊಂದಿಗೆ ನನ್ನಪ್ರಕಾರ ಚಿತ್ರ ರೂಪಿಸಲ್ಪಟ್ಟಿದೆಯಂತೆ. ಇದೆಲ್ಲವೂ ಪ್ರೇಕ್ಷಕರಿಗೆ ಹೊಸಾ ಫೀಲ್ ನೀಡಲಿವೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಚಿತ್ರವಾದರೂ ಅದನ್ನು ಮೀರಿದ ಸಸ್ಪೆನ್ಸುಗಳು ಪ್ರೇಕ್ಷಕರಿಗಾಗಿ ಕಾದಿವೆ.