ಬೆಂಗಳೂರು: ಚಲಿಸುತ್ತಿದ್ದ ಕಾರಿನ ಮೇಲೆ ಮೆಟ್ರೋ ಬ್ರಿಡ್ಜ್‌ನ ಸಿಮೆಂಟ್ ತುಂಡು ಬಿದ್ದ ಪರಿಣಾಮ ಕಾರಿನ ಗಾಜು ಒಡೆದು ಹೋಗಿದ್ದು, ಒಳಗಿದ್ದವರು ಅಪಾಯದಿಂದ ಪಾರಾಗಿರುವ ಘಟನೆ ನಗರದ ಮೈಸೂರು ರಸ್ತೆಯಲ್ಲಿ (Mysuru Road) ನಡೆದಿದೆ.
ನಮ್ಮ ಮೆಟ್ರೋದಲ್ಲೂ ಅನೇಕ ಅವಘಡಗಳು ನಡೆಯುತ್ತಲೇ ಇದ್ದು, ಇದೀಗ ಮತ್ತೊಂದು ಘಟನೆ ಸಂಭವಿಸಿದೆ. ನಿನ್ನೆ (ನ.25) ಬೆಳಿಗ್ಗೆ ಮೈಸೂರು ರಸ್ತೆಯ ಬಳಿ ಮೆಟ್ರೋ ಬ್ರಿಡ್ಜ್‌ನಿಂದ ಸಿಮೆಂಟಿನ ಕಲ್ಲು ಕಳಚಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದಿದೆ. ಬಿದ್ದ ಪರಿಣಾಮ ಕಾರಿನ ಮಾಲೀಕ ನಮ್ಮ ಮೆಟ್ರೋ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಬಿಜೆಪಿ ಶಾಸಕನಿಗೆ ಉದಯಪುರ ಅರಮನೆ ಪ್ರವೇಶಕ್ಕೆ ನಿರಾಕರಣೆ – ಬೆಂಬಲಿಗರಿಂದ ಕಲ್ಲು ತೂರಾಟ, ಪರಿಸ್ಥಿತಿ ಉದ್ವಿಗ್ನ
Advertisement
Advertisement
ಯಲಹಂಕದ ಬಾಗಲೂರಿನಿಂದ ಮೈಸೂರಿಗೆ ಕಾರ್ಯಕ್ರಮಕ್ಕೆ ನವೀನ್ ರಾಜ್ ಮತ್ತು ಕುಟುಂಬ ಹೋಗುತ್ತಿದ್ದಾಗ ಮೈಸೂರು ರಸ್ತೆಯ ಪಿಲ್ಲರ್ ನಂಬರ್ 393 ಬಳಿ ಈ ಘಟನೆ ನಡೆದಿದೆ. ಮೆಟ್ರೋ ರೈಲು ಹೋಗುತ್ತಿದ್ದಂತೆ ಅಲ್ಲಿನ ವೈಬ್ರೇಷನ್‌ಗೆ ಸಿಮೆಂಟ್ ಕಳಚಿ ಬಿದ್ದಿದೆ. ಖರೀದಿಸಿ ಒಂದು ತಿಂಗಳು ಕೂಡ ಆಗದ ಎಸ್‌ಯುವಿ 700 ಕಾರಿನ ಮುಂದಿನ ಗ್ಲಾಸ್ ಒಡೆದಿದ್ದು, ಕಾರಿನ ಮೇಲ್ಭಾಗ ಹಾನಿಯಾಗಿದೆ. ಕಲ್ಲು ಬಿದ್ದ ರಭಸಕ್ಕೆ ಕಾರಿನಲ್ಲಿದ್ದವರು ಭಯಗೊಂಡಿದ್ದಾದರೂ ಪಾರಾಗಿದ್ದಾರೆ.
Advertisement
Advertisement
ಈ ಕುರಿತು ಕಾರಿನ ಮಾಲೀಕ ಮಾತನಾಡಿ, ಕೂಡಲೇ ಬಿಎಂಆರ್‌ಸಿಎಲ್ (BMRCL) ಅಧಿಕಾರಿಗಳನ್ನು ಸಂಪರ್ಕಮಾಡುವ ಪ್ರಯತ್ನ ಮಾಡಿದ್ದೇನೆ. ಬಳಿಕ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ನಮಗೆ ಪರಿಹಾರ ಬೇಕು, ಕಾರು ತೆಗೆದುಕೊಂಡು ಇನ್ನೂ ಒಂದು ತಿಂಗಳು ಕೂಡ ಆಗಿಲ್ಲ, ನಮ್ಮ ಮೆಟ್ರೋದವರು (Namma Metro) ಇದಕ್ಕೆ ಉತ್ತರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ, ಮೆಟ್ರೋ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಕಾರು ಮಾಲೀಕನಿಂದ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ. ಕಾರು ಮೇಲೆ ಬಿದ್ದ ಆ ಸಿಮೆಂಟ್ ಕಲ್ಲು ಯಾರ ಮೇಲಾದರೂ ಬಿದ್ದಿದ್ದರೆ ಏನು ಗತಿ? ಎನ್ನುವುದು ನಮ್ಮ ಪ್ರಶ್ನೆಯಾಗಿದೆ. ಇದಕ್ಕೆ ಶಾಶ್ವತವಾದ ಪರಿಹಾರವನ್ನು ಹಾಗೂ ಸರಿಯಾದ ರೀತಿಯ ನಿರ್ವಹಣೆಯನ್ನು ನಮ್ಮ ಮೆಟ್ರೋ ಮಾಡಬೇಕಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮೂರು ಪೂರಿ ಒಟ್ಟಿಗೆ ತಿನ್ನಲು ಹೋಗಿ ಗಂಟಲಿಗೆ ಸಿಕ್ಕಿಕೊಂಡು 11ರ ಬಾಲಕ ಸಾವು