ಬೆಂಗಳೂರು: ಸ್ಕೂಟರ್‌ಗೆ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಕೆಂಗೇರಿಯಲ್ಲಿ (Kengeri) ನಡೆದಿದೆ.
ಮೃತರನ್ನು ಪತಿ ಅಸೀಫ್ ಅಹಮದ್ ಹಾಗೂ ಪತ್ನಿ ಶಬಾನಾ ಬೇಗಮ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಶ್ರದ್ಧಾ ವಾಕರ್ ತಂದೆ ಹೃದಯಾಘಾತದಿಂದ ಸಾವು
ಮೃತ ಗಂಡ, ಹೆಂಡತಿ ಸ್ಕೂಟರ್‌ನಲ್ಲಿ ಟ್ಯಾನರಿ ರಸ್ತೆಯಿಂದ ಉತ್ತರಹಳ್ಳಿಯ ದರ್ಗಾಕ್ಕೆ ಹೋಗುತ್ತಿದ್ದರು. ಈ ವೇಳೆ ಸಿಮೆಂಟ್ ಮಿಕ್ಸರ್ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಲಾರಿ ಚಾಲಕ ಅಪಘಾತದ ಬಳಿಕ ಸ್ಕೂಟರ್‌ನ್ನು ಮುಂದಕ್ಕೆ ಎಳೆದುಕೊಂಡು ಹೋಗಿದ್ದಾನೆ. ಅಪಘಾತದ ದೃಶ್ಯ ಪಕ್ಕದ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ತನಿಖೆಯ ವೇಳೆ ಇಬ್ಬರು ಕೂಡ ಹೆಲ್ಮೆಟ್ ಹಾಕಿರುವುದು ಬೆಳಕಿಗೆ ಬಂದಿದೆ. ಸದ್ಯ ಕೆಂಗೇರಿ ಸಂಚಾರಿ ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.ಇದನ್ನೂ ಓದಿ: ಗದಗ | ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ – 26.57 ಲಕ್ಷ ನಗದು ವಶ