ತಮಿಳಿನ ಸ್ಟಾರ್ ನಟ ಸಿಲಂಬರಸನ್ ಅಲಿಯಾಸ್ ಸಿಂಭು ಬಗ್ಗೆ ಹೊಸ ಸುದ್ದಿಯೊಂದು ಕಾಲಿವುಡ್ ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ತಡವಾಗಿಯಾದರೂ ಮದುವೆಗೆ ಒಪ್ಪಿಕೊಂಡಿರುವ ಸಿಂಭು, ಶ್ರೀಲಂಕಾದ ಶ್ರೀಮಂತ ಉದ್ಯಮಿಯೊಬ್ಬರ ಮಗಳನ್ನು ಸಿಂಭು ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಎರಡೂ ಕುಟುಂಬಗಳ ಮಾತುಕತೆ ಕೂಡ ಮುಗಿದಿದೆ ಎನ್ನಲಾಗುತ್ತಿದೆ.
Advertisement
ಸಿಂಭು ಮದುವೆಯಾಗಲು ಹಲವರು ತುದಿಗಾಲಲ್ಲಿ ನಿಂತಿದ್ದರು. ಆದರೆ, ಅಷ್ಟು ಸುಲಭಕ್ಕೆ ಸಿಂಭು ಒಪ್ಪುತ್ತಿರಲಿಲ್ಲ. ಅದಕ್ಕೆ ಅನೇಕ ಕಾರಣಗಳನ್ನು ಹೇಳಲಾಗುತ್ತಿದೆ. ತಮ್ಮ ಜೊತೆ ನಟಿಸಿದ್ದ ಹೆಸರಾಂತ ನಾಯಕಿಯನ್ನು ಅವರು ಪ್ರೀತಿಸುತ್ತಿದ್ದರಂತೆ. ಆದರೆ, ಆಕೆಯನ್ನು ಪಡೆಯಲಾಗಲಿಲ್ಲ ಎನ್ನುವ ನೋವು ಅವರಲ್ಲಿ ಉಳಿದಿತ್ತು ಎಂದು ಹೇಳಲಾಗುತ್ತಿದೆ. ಅಲ್ಲದೇ, ನಯನತಾರಾ, ತ್ರಿಶಾ ಸೇರಿದಂತೆ ಹಲವು ನಾಯಕಿಯರ ಹೆಸರು ಕೂಡ ಸಿಂಭು ಹೆಸರಿನೊಂದಿಗೆ ತಳುಕು ಹಾಕಿಕೊಂಡಿತ್ತು. ಹೀಗಾಗಿ ಅವರು ವಿವಾಹದಿಂದ ದೂರ ಉಳಿಸಿದ್ದರು.
Advertisement
Advertisement
ಈಗಾಗಲೇ ಸಿಂಭು ಅವರ ಕಿರಿಯ ಸಹೋದರಿ ಮತ್ತು ಸಹೋದರನಿಗೆ ಮದುವೆ ಆಗಿದೆ. ಆದರೂ, ಕೂಡ ಸಿಂಭು ಮದುವೆ ಬಗ್ಗೆ ಯೋಚಿಸಿರಲಿಲ್ಲ. ಈ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಹಾರಿಕೆಯ ಉತ್ತರಗಳನ್ನು ನೀಡುತ್ತಿದ್ದರು. ಆದಷ್ಟು ಮದುವೆ ಕುರಿತಾಗಿ ಚರ್ಚೆ ಆಗದಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಮದುವೆ ಆಗಲು ಅವರು ಮುಂದೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ
Advertisement
ಅಂದುಕೊಂಡಂತೆ ನಡೆದರೆ 42ರ ವಯಸ್ಸಿನ ಸಿಂಭು, ತಮಿಳು ಕುಟುಂಬದ ಶ್ರೀಲಂಕಾ ಉದ್ಯಮಿಯ ಮಗಳ ಜೊತೆ ಹೊಸ ಜೀವನಕ್ಕೆ ಕಾಲಿಡಲಿದ್ದಾರೆ. ಆ ಹುಡುಗಿ ವೃತ್ತಿಯಲ್ಲಿ ವೈದ್ಯೆ ಎಂದು ಹೇಳಲಾಗುತ್ತಿದೆ. ಹಲವು ವರ್ಷಗಳಿಂದ ಪರಿಚಯವಿರುವ ಕುಟುಂಬ ಎನ್ನುವುದು ಅವರ ಆಪ್ತರು ಕೊಟ್ಟಿರುವ ಮಾಹಿತಿ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k