BollywoodCinemaLatestMain PostSouth cinema

ತೆಲಂಗಾಣದ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದ ಸಾವು

ಖ್ಯಾತ ಸೆಲೆಬ್ರಿಟಿ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ತೆಲಂಗಾಣದ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿ ಮತ್ತು ಟಾಲಿವುಡ್ ಸಾಕಷ್ಟು ಸೆಲೆಬ್ರಿಟಿಗಳಿಗೆ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದ ಪ್ರತ್ಯೂಷಾ ಗರಿಮೆಲ್ಲಾ ಸಾವನ್ನಪ್ಪಿದ್ದಾರೆ. ಬಂಜಾರಾ ಹಿಲ್ಸ್‌ನಲ್ಲಿ ತಮ್ಮ ನಿವಾಸದಲ್ಲಿ ಶನಿವಾರ (ಜೂ.11) ಶವ ಪತ್ತೆಯಾಗಿದೆ. ತಮ್ಮ ನಿವಾಸದಲ್ಲಿ ಹಬೆಯೊಂದಿಗೆ ಕಾರ್ಬನ್ ಮಾನಾಕ್ಸೈಡ್ ಸೇವಿಸಿದ್ದಾರೆ. ಇದು ಅವರ ಸಾವಿಗೆ ಕಾರಣವಾಯಿತು. ಆಕೆಯ ಮಲಗುವ ಕೋಣೆಯಲ್ಲಿದ್ದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನುಮಾನಾಸ್ಪದ ಸಾವಿನ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಶ್ರೀಯಾ ಶರಣ್, ಕಾಜಲ್ ಅಗರ್‌ವಾಲ್, ರಾಕುಲ್, ಕೃತಿ ಶೆಟ್ಟಿ, ಸಾನಿಯಾ ಮಿರ್ಜಾ, ರಾಣಾ ದಗ್ಗುಭಾಟಿ ಹೀಗೆ ಸಾಕಷ್ಟು ಸಿನಿಮಾ ತಾರೆಯರಿಗೆ ಡಿಸೈನರ್ ಆಗಿ ಕೆಲಸ ಮಾಡಿದ್ದ ಪ್ರತ್ಯೂಷಾ ಸಾವಿಗೆ ಇದೀಗ ಚಿತ್ರರಂಗದವರು, ಆಪ್ತರು ಮತ್ತು ಸ್ನೇಹಿತರು ಕಂಬನಿ ಮಿಡಿದಿದ್ದಾರೆ.‌

Leave a Reply

Your email address will not be published.

Back to top button