5ನೇ ಬಾರಿ ದೊಡ್ಮನೆ ಆಟ ಬಲು ಜೋರು- `ಬಿಗ್ ಹೌಸ್’ನಲ್ಲಿ ಸೆಲೆಬ್ರಿಟಿಗಳ ಪ್ರೇಮಾನುರಾಗ ಶುರು

Public TV
2 Min Read
BIGG BOSS 5

ಬೆಂಗಳೂರು: ಐದನೇ ಬಾರಿಯ ದೊಡ್ಮನೆಯ ಆಟ ಬಲು ಜೋರಾಗಿಯೇ ನಡೆಯುತ್ತಿದೆ. ದಿನಕ್ಕೊಂದು ಹೊಸ ಹೊಸ ಸಮಾಚಾರ, ಗಲಾಟೆ, ಗದ್ದಲಗಳು ವೀಕ್ಷಕರನ್ನ ಚೇರಿನ ತುತ್ತ ತುದಿಯಲ್ಲಿ ಕೂರುವಂತೆ ಮಾಡುತ್ತಿದೆ. ಅದರಲ್ಲೂ ಈ ಬಾರಿ ಕಂಟೆಸ್ಟ್ ಗಳ ನಡುವಿನ ಪ್ರೇಮಾನುರಾಗವಂತೂ ಆಡಿಯೆನ್ಸ್ ಗೆ ವೇರಿ ಇಂಟ್ರಸ್ಟಿಂಗ್ ಸಬ್ಜೆಕ್ಟ್.

ಬಿಗ್ ಬಾಸ್ ಮನೆಯಿಂದ ಬಂದಿರುವ ಈ ಸಮಾಚಾರ ಸತ್ಯವೋ ಸುಳ್ಳೋ ಗೊತ್ತಿಲ್ಲ. ಆದರೆ ಬಿಗ್ ಬಾಸ್ ನಲ್ಲಿ ಕಂಡು ಬರುತ್ತಿರುವ ಜೋಡಿಗಳ ಮೇಲೆ ಗಾಸಿಪ್ ಮಲ್ಲರು ಕತೆ-ಕವಿತೆ ಕಟ್ಟುತ್ತಿರುವುದಂತೂ ಸುಳ್ಳಲ್ಲ.

ಚಂದನ್ ಶೆಟ್ಟಿ ಬಿಗ್ ಬಾಸ್ ಮನೆಯ ಬಹುಮುಖ ಪ್ರತಿಭೆ. ಈಗಾಗಲೇ ತಮ್ಮ ಕಂಚಿನ ಕಂಠದಿಂದ ಕಲರ್‍ ಫುಲ್ ಕನ್ಯೆಯರ ಮನ ಗೆದ್ದಿರೋ ಚಂದನ್ ಈಗ ನಿವೇದಿತಾ ಮೇಲೆ ನೀಲವೇಣಿ ಪದ್ಯ ಹಾಡುತ್ತಿದ್ದಾರೆ. ನಿವೇದಿತಾ ಮಾತನಾಡುವ ಕನ್ನಡವನ್ನು ಅವರ ಬಾಯಲ್ಲೇ ಕೇಳಬೇಕು. ಈ ಬೆಳ್ಳಿ ಬೊಂಬೆಗೆ ಚಂದನ್ ಶೆಟ್ಟಿ ಮಾರು ಹೋಗಿದ್ದಾರೆ ಎಂದು ಕಾಣಿಸುತ್ತದೆ. ನಿವೇದಿತಾ ಕಣ್ಣ ಮುಂದೆ ಬಂದರೆ ಸಾಕು ಸ್ಪಾಟ್ ನಲ್ಲೇ ಲಿರಿಕ್ ಜೊತೆಗೆ ಟ್ಯೂನ್ ಹಾಕಿ ಗಾನಾ ಬಜಾನಾ ಶುರು ಮಾಡುತ್ತಿದ್ದಾರೆ.

BIGG BOSS CHANDAN SHETTY NIVEDITHA GOWDA

ಆದರೆ ಇಲ್ಲೊಂದು ಟ್ವಿಸ್ಟ್ ಆಂಡ್ ಟರ್ನ್ ಇದೆ. ಬಿಗ್ ಬಾಸ್ ಮನೆಯ ಮತ್ತೊಬ್ಬ ಸುಂದರಿ ಶೃತಿ ಮೇಲೆ ಚಂದನ್ ಗೆ ಪ್ಯಾರ್ ಆಗಿದೆ ಅನ್ನೋ ಗುಮಾನಿಯೂ ಇದೆ. ಈ ಮಾತನ್ನು ಚಂದನ್ ಶೆಟ್ಟಿ ಒಮ್ಮೆ ಹೇಳಿದ್ದರು.

Shruthi Prakash 1

ಜೆ.ಕೆ ಎನ್ನುವ ಹಾರ್ಟ್ ಥ್ರೋಬ್ ಗೆ ಫಿಮೇಲ್ ಕಂಟೆಸ್ಟೆಂಟ್‍ಗಳ ನಡುವೆ ಒಂಥರಾ ಕಾಂಪಿಟೇಷನ್ ಶುರುವಾಗಿದೆ. ಅದರಲ್ಲಿ ಜೆಕೆ ಮತ್ತು ಶೃತಿ ನಡುವಿನ ಒಡನಾಟದ ತೂಕ ತುಸು ಜಾಸ್ತಿ. ಇಬ್ಬರ ನಡುವೆ ಸಮ್ ಥಿಂಗ್ ಸಮ್ ಥಿಂಗ್ ಎಂಬ ಡೌಟಿದೆ. ಅದಕ್ಕೆ ಸರಿಯಾಗಿ ಕಿಚ್ಚ ಸುದೀಪ್ ಇವರಿಬ್ಬರ ಬಾಯಿಂದ ಲವ್ ಸಾಂಗ್ ಹೇಳಿಸಿ ಕಾಲೆಳೆದಿದ್ದಾರೆ.

JK SHRUTHI

ಮುದ್ದುಕೃಷ್ಣ ಜಗನ್ನಾಥ್: ಬಿಗ್ ಬಾಸ್ ಸೀಸನ್ 5ರಲ್ಲಿ ಹುಡ್ಗಿರ ಪಾಲಿನ ಮುದ್ದು ಕೃಷ್ಣ ಎಂದರೆ ಜಗನ್ನಾಥ್. ಇವರನ್ನು ಕಂಡರೆ ದೊಡ್ಮನೆಯ ಬ್ಯೂಟಿಫುಲ್ ಬಾಲೆಯರಿಗೆ ಒಂಥರಾ ಕ್ರಷ್. ಜಗನ್ ಅಂದಗಾತಿ ಆಶಿತಾ ಜೊತೆ ಪ್ರೇಮ ಗಾನ ಶುರು ಹಚ್ಚಿಕೊಂಡಿದ್ದಾರೆ. ಇಬ್ಬರೂ ಒಟ್ಟಿಗೆ ತಿಂಡಿ ಊಟ ಮಾಡುತ್ತ ಟೈಮ್ ಪಾಸ್ ಮಾಡುತ್ತಿದ್ದಾರೆ.

JAGAN ASHITHA

ಆದರೆ ಅನುಪಮಾ ವಿಚಾರ ಇಲ್ಲಿ ಸ್ವಲ್ಪ ಗೊಂದಲಮಯ. ಕಾರಣ ಅನುಪಮ ಮನ ಯಾರ ಮೇಲೆ ಸರಿಗಮಪ ಅನ್ನುತ್ತಿದೆ ಅನ್ನೋದೆ ಅಯೋಮಯ. ಆಗಾಗ ಈಕೆ ಜಗನ್ ಜೊತೆ ಜಗಳವಾಡುತ್ತಾ ವೇದನೆ ಪಡುತ್ತಿರುತ್ತಾರೆ. `ಜೆಕೆ ನಿನ್ನನ್ನು ಅನುಪಮಾ ತುಂಬಾ ಹಚ್ಚಿಕೊಂಡಿದ್ದಾರೆ’ ಎಂದು ಮೊನ್ನೆ ಎಲಿಮಿನೇಟ್ ಆದ ನಿರ್ದೇಶಕ ದಯಾಳ್ ಪದ್ಮನಾಭನ್ ಹೇಳಿ ಹೋದರು. ಹೀಗಾಗಿ ಮತ್ತೆ ಕಹಾನಿ ಮೇ ಕನ್ಫೂಸ್ ಕನ್ಫೂಸ್ ಕನ್ಫೂಸ್.

Anupama Gowda 1

ಬಿಗ್‍ಬಾಸ್ ಮನೆಯಲ್ಲಿ ಇದ್ದಂಗೇ ಹೊರಗಡೆಯೂ ಸೆಲೆಬ್ರಿಟಿಗಳು ಇರೋದಿಲ್ಲ. ಇದೊಂದು ಆಟ ಅಷ್ಟೇ ಬಿಗ್ ಬಾಸ್ ಸೀಸನ್ 3ರ ನಂತರ ಪೂಜಾಗಾಂಧಿ-ಅಯ್ಯಪ್ಪ ಮದುವೆಯಾಗಿ ಬಿಡುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಅದು ಕೇವಲ ಮಾತಾಗಿಯೇ ಉಳಿಯಿತು. ಇವರೂ ಅಷ್ಟೇನೇ ಎಂದು ಬುದ್ಧಿವಂತ ವೀಕ್ಷಕರು ಗಹಗಹಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಬಾರಿಯ ದೊಡ್ಮನೆ ದೊಡ್ಡಾಟ ಜೋರಾಗಿಯೇ ಇದೆ. ಟೋಟಲಿ ಯಾರ‍್ಯಾರು ಲವ್ ಎಲ್ಲೆಲ್ಲಿಗೆ ಬಂದು ಮುಟ್ಟುತ್ತದೊ, ಓಡುತ್ತದೊ, ಕುಂಟುತ್ತದೊ ನೋಡೋಣ.

Share This Article
Leave a Comment

Leave a Reply

Your email address will not be published. Required fields are marked *