CrimeLatestMain PostNational

ಮಗನ ಬರ್ತ್‌ಡೇ ಪಾರ್ಟಿ ವೇಳೆ ಹಾರಿಸಿದ ಗುಂಡು ತಗುಲಿ ತಾಯಿ ಸಾವು

Advertisements

ಲಕ್ನೋ: ಪುತ್ರನ ಬರ್ತ್‌ಡೇ ಸಂಭ್ರಮಾಚರಣೆ ವೇಳೆ ಹಾರಿಸಿದ ಗುಂಡು ತಗುಲಿ ತಾಯಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದಿದೆ.

ಅನಿತಾ ವರ್ಮಾ ಮೃತಪಟ್ಟ ಮಹಿಳೆ. ಬುಧವಾರ ರಾತ್ರಿ ಮೂರು ವರ್ಷದ ತಮ್ಮ ಪುತ್ರನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಈ ವೇಳೆ ಸಂಭ್ರಮಕ್ಕಾಗಿ ಹಾರಿಸಿದ ಗುಂಡು ಮಹಿಳೆಗೆ ತಗುಲಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

ಅನಿತಾ ಅವರು ಪ್ರದೀಪ್‌ ವರ್ಮಾ ಎಂಬವರನ್ನು ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗನ ಹುಟ್ಟುಹಬ್ಬ ಸಂಭ್ರಮಕ್ಕೆ 100 ಕ್ಕೂ ಹೆಚ್ಚು ಅತಿಥಿಗಳನ್ನು ಆಹ್ವಾನಿಸಿದ್ದರು. ಅನಿತಾ ಕುಟುಂಬಕ್ಕೆ ಹತ್ತಿರದವರೇ ಆಗಿದ್ದ ಜೈರಾಮ್‌ ವರ್ಮಾ ಪಾರ್ಟಿ ವೇಳೆ ಕುಡಿದ ಮತ್ತಿನಲ್ಲಿದ್ದರು. ಸಂಭ್ರಮಕ್ಕೆ ಜೈರಾಮ್‌ ಹಾರಿಸಿದ ಗುಂಡು ಅನಿತಾಗೆ ತಗುಲಿ ಮೃತಪಟ್ಟಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜೈರಾಮ್‌ ವರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪಿಯನ್ನು ಬಚಾವ್ ಮಾಡಲು ಖತರ್ನಾಕ್ ಪ್ಲಾನ್ ಮಾಡಿದ್ದ ತಂದೆ ಅರೆಸ್ಟ್!

Leave a Reply

Your email address will not be published.

Back to top button