ಬೆಂಗಳೂರು: ಕನ್ನಡ ನಾಡಿನ ಜನತೆಯ ಮನೆಮಾತಾಗಿರುವ ಪಬ್ಲಿಕ್ ಟಿವಿ 6 ನೇ ವರ್ಷದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂಭ್ರಮಾಚರಣೆ ನಡೆದಿದೆ.
ಪಬ್ಲಿಕ್ ಮ್ಯೂಸಿಕ್ ಸಹ ಯಶಸ್ಸಿನ ಪಯಣ ಕಾಣುತ್ತಿದ್ದು 4 ನೇ ವರ್ಷಕ್ಕೆ ಕಾಲಿರಿಸಿದ್ದು, ಈಗ ಪಬ್ಲಿಕ್ ಟಿವಿ ಜೊತೆ ಪಬ್ಲಿಕ್ ಮೂವಿಸ್ ಚಾನೆಲ್ ಸಹ ಲೋಕಾರ್ಪಣೆಗೊಂಡಿದೆ. ಆದ್ದರಿಂದ ನಾಡಿನೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಆನೇಕಲ್, ಬೀದರ್, ವಿಜಯಪುರ ಮತ್ತು ದಾವಣಗೆರೆ ಸೇರಿದಂತೆ ರಾಜ್ಯಾದ್ಯಂತ ಕೇಕ್ ಕತ್ತರಿಸುವ ಮೂಲಕ ಆಚರಣೆ ಮಾಡುತ್ತಿದ್ದಾರೆ.
Advertisement
Advertisement
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಕೇಕ್ ಕತ್ತರಿಸುವ ಮುಖಾಂತರ ಜನರಿಗೆ ಸಿಹಿ ಹಂಚಿ ಪಬ್ಲಿಕ್ ಕುಟುಂಬಕ್ಕೆ ಶುಭ ಹಾರೈಸಿದ್ದಾರೆ. ಇದೇ ವೇಳೆ ಕರವೇ ಶಿವರಾಮೇಗೌಡ ಬಣದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ಕರ್ನಾಟಕದಲ್ಲಿ ಕನ್ನಡವನ್ನು ಉಳಿಸುವಂತಹ ಹಾಗೂ ಬಡವರ ದನಿಯಾಗಿ ಸುದ್ದಿ ಪ್ರಸಾರ ಮಾಡುತ್ತಿರುವ ಪಬ್ಲಿಕ್ ಟಿವಿ ಮತ್ತಷ್ಟು ಉತ್ತುಂಗಕ್ಕೆ ಏರಲಿ ಎಂದು ಶುಭಹಾರೈಸಿದರು.
Advertisement
ಗಡಿ ಜಿಲ್ಲೆ ಬೀದರ್ ನಲ್ಲಿ ಕನ್ನಡ ವಿಜಯ ಸೇನೆಯ ಕಾರ್ಯಕರ್ತರು ತಡರಾತ್ರಿ ಕೇಕ್ ಕಟ್ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ನಗರದ ಶಿವಾಜಿ ವೃತದ ಬಳಿ ತಡರಾತ್ರಿ ಕನ್ನಡ ಸೇನೆಯ ಕಾರ್ಯಕರ್ತರು ಸೇರಿ ಹಬ್ಬದ ರೀತಿಯಲ್ಲಿ ಪಬ್ಲಿಕ್ ಟಿವಿಯ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಖುಷಿ ಪಟ್ಟಿದ್ದಾರೆ. ತಡರಾತ್ರಿ ಬಂದ ಬೈಕ್ ಸವಾರರಿಗೂ ಕೇಕ್ ಹಂಚಿ, ಪಬ್ಲಿಕ್ ಟಿವಿಯ ಕಾರ್ಯಕ್ಕೆ ಜೈಗೋಷ ಹಾಕಿದ್ದಾರೆ. ಬೆಳಕು ಹಾಗೂ ಪಬ್ಲಿಕ್ ಹೀರೋಗಳಂತಹ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯನ್ನು ಮೆಚ್ಚಲೆಬೇಕು. ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಪಬ್ಲಿಕ್ ಟಿವಿಗೆ ಅಭಿನಂದನೆಗಳ ಸುರಿ ಮಳೆಯನ್ನು ಸುರಿಸಿದ್ರು.
Advertisement
ಐತಿಹಾಸಿಕ ನಗರಿ ವಿಜಯಪುರದಲ್ಲಿ ಸಾರ್ವಜನಿಜರು ನಗರದ ಗಾಂಧಿ ವೃತದ ಬಳಿ ತಡರಾತ್ರಿ ಸಾರ್ವಜನಿಕರು, ಆಟೋ ಚಾಲಕರು, ಯುವಕರು ಸೇರಿದಂತೆ ಹಲವಾರು ಪಬ್ಲಿಕ್ ಟಿವಿ ಅಭಿಮಾನಿಗಳು ಹಬ್ಬದ ರೀತಿಯಲ್ಲಿ ಪಬ್ಲಿಕ್ ಟಿವಿಯ ಹುಟ್ಟು ಹಬ್ಬವನ್ನು ಆಚರಣೆ ಮಾಡಿ ಖುಷಿ ಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಲೋಕಿಕೆರೆ ನಾಗರಾಜ್ ಅಭಿಮಾನಿ ಬಳಗದಿಂದ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಿದ್ದಾರೆ. ನಗರದ ನಿಟ್ಟುವಳ್ಳಿಯಲ್ಲಿರುವ ಅಂಗವಿಕಲರ ಕೇಂದ್ರದಲ್ಲಿ ಕೇಕ್ ಕಟ್ ಮಾಡುವುದರ ಮೂಲಕ ಪಬ್ಲಿಕ್ ಟಿವಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಅಂಗವಿಕಲ ಮಕ್ಕಳಿಗೆ ಸಿಹಿ ಹಂಚಿ ಪಬ್ಲಿಕ್ ಟಿವಿ ಇನ್ನು ನೂರು ವರ್ಷ ಹೀಗೆ ಸಾಗಲೀ. ಜನಪರವಾದ ಕೆಲಸ ಮಾಡುತ್ತ ಸಮಾಜದ ಓಳಿತಿಗಾಗಿ ಶ್ರಮಿಸುತ್ತಿರುವ ಪಬ್ಲಿಕ್ ಟಿವಿಗೆ ಹಾಗೂ ಸಂಸ್ಥೆಯ ಮುಖ್ಯಸ್ಥರಿಗೂ ಶುಭವಾಗಲಿ ಎಂದು ಹಾರೈಸಿದ್ದಾರೆ.
ಪಬ್ಲಿಕ್ ಟಿವಿ ಮತ್ತೊಂದು ಕೂಸಾದ ಪಬ್ಲಿಕ್ ಮೂವೀಸ್ ಗು ಸಹ ಶುಭಾಶಯ ತಿಳಿಸಿದ್ದಾರೆ. ಜನಸಾಮಾನ್ಯರ ಧ್ವನಿಯಾಗಿರುವ ಪಬ್ಲಿಕ್ ಟಿವಿಯ, ಕೀರ್ತಿ ಉತ್ತುಂಗಕ್ಕೆ ಏರಲಿ, ಪಬ್ಲಿಕ್ ಟಿವಿಯ ಹಾಗೂ ನೂತನ ಚಾನಲ್ ಪಬ್ಲಿಕ್ ಮೂವೀಸ್‍ಗೆ ನೆಲಮಂಗಲದ ಜನತೆ ಶುಭ ಹಾರೈಸಿ ಸಂತಸ ವ್ಯಕ್ತಪಡಿಸಿದ್ದಾರೆ.