ಮೈಸೂರು: ಸಾಮಾನ್ಯವಾಗಿ ಸೆಲೆಬ್ರಿಟಿಗಳನ್ನು, ಗಣ್ಯ ವ್ಯಕ್ತಿಗಳನ್ನು ನೋಡಬೇಕು ಅಂತಾ ಎಲ್ಲರಿಗೂ ಆಸೆ ಇರತ್ತೆ. ಹಾಗೇ ಎಲ್ಲರನ್ನೂ ಒಟ್ಟಿಗೆ ನೋಡಬೇಕು ಅಂತಾ ಜನರು ಹಾತೋರೆಯುತ್ತಿರುತ್ತಾರೆ. ಇವೆಲ್ಲಕ್ಕೂ ಮೈಸೂರು ದಸರಾ ಅವಕಾಶ ಮಾಡಿಕೊಟ್ಟಿದೆ.
ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ನೆಚ್ಚಿನ ನಟ, ನಟಿ, ರಾಜಕಾರಣಿಗಳು, ಸ್ಟಾರ್ ಫ್ಲೇಯರ್ಸ್ ಹೀಗೆ ತಮ್ಮಗೆ ಇಷ್ಟವಾದವರನ್ನು ಹತ್ತಿರದಿಂದ ನೋಡಿ ಕಣ್ಣು ತುಂಬಿಕೊಳ್ಳಬೇಕು ಅಂತಾ ಆಸೆ ಇರುತ್ತೆ. ಈ ಬಾರಿಯ ದಸರಾ ಪ್ರವಾಸಿಗರಿಗೆ ಅವಕಾಶ ಕಲ್ಪಿಸಿದೆ. ಒಂದೇ ಸೂರಿನಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಮುಖ ವ್ಯಕ್ತಿಗಳನ್ನು ತಂದಿದೆ. ಚಾಮುಂಡೇಶ್ವರಿ ಸೆಲೆಬ್ರಿಟಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಮೇಣದಿಂದ ರಾಜಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಬ್ದುಲ್ ಕಲಾಂ, ನರೇಂದ್ರ ಮೋದಿ, ಅಮಿತ್ ಶಾ, ಮೈಕೆಲ್ ಜಾಕ್ಸನ್ ಸೇರಿದಂತೆ ಅನೇಕರ ಪ್ರತಿಕೃತಿಯನ್ನು ನಿರ್ಮಾಣ ಮಾಡಲಾಗಿದೆ.
Advertisement
Advertisement
ಅಷ್ಟೇ ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರಾದ ಗಾಂಧೀಜಿ, ಭಗತ್ ಸಿಂಗ್, ಬಾಲ ಗಂಗಾಧರ ತಿಲಕ್ ಅವರ ಮೇಣದ ಪ್ರತಿಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಶಿರಡಿ ಸಾಯಿಬಾಬಾ ಸ್ವಾಮಿ ವಿವೇಕಾನಂದ, ಪುಟ್ಟಪರ್ತಿ ಸಾಯಿಬಾಬಾ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡಲಾಗಿದೆ.
Advertisement
Advertisement
ಮಕ್ಕಳಿಗೆ ಇಷ್ಟವಾಗುವ ಸೂಪರ್ ಮ್ಯಾನ್, ಮಿಸ್ಟರ್ ಬೀನ್, ಚಾರ್ಲಿ ಚಾಂಪಿಯನ್, ಧೋನಿ, ಜಾನ್ ಸೀನಾ ಅವರ ಪ್ರತಿಮೆಗಳು ಕಣ್ಮನ ಸೆಳೆಯುತ್ತಿವೆ. ಮೇಣದಿಂದ ಮಾಡಿರುವ ಗಣ್ಯರ ಪ್ರತಿಮೆ ನೋಡಿ ಪ್ರೇಕ್ಷಕರು ಹರ್ಷ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv