ಚಿಕ್ಕೋಡಿ: ದೇಶಾದ್ಯಂತ ಗಣೇಶೋತ್ಸವ (Ganeshotsava) ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದ್ದು, ಪ್ರತಿ ವರ್ಷದಂತೆ ಈ ವರ್ಷವೂ ಹಲಾಲ್ ಮುಕ್ತ ಗಣೇಶ ಹಬ್ಬ ಆಚರಣೆ ಮಾಡುವಂತೆ ಶ್ರೀ ರಾಮ ಸೇನೆ (Sri Rama Sene) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಮನವಿ ಮಾಡಿದ್ದಾರೆ.
ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಅವರು, ಗೋಭಕ್ಷಕರು, ಗೋಹಂತಕರಿಂದ ಯಾವುದೇ ವಸ್ತು ಖರೀದಿ ಮಾಡಬೇಡಿ. ಯಾರೂ ಕೂಡ ಈ ಅಪರಾಧ, ತಪ್ಪನ್ನು, ಅಪವಿತ್ರತೆ ಮಾಡಬಾರದು. ಶಾಸ್ತ್ರಬದ್ಧವಾಗಿ ಮಣ್ಣಿನ ಗಣಪತಿಯನ್ನೇ ಪೂಜೆ ಮಾಡಬೇಕು. ಪಿಒಪಿ ಗಣಪತಿ ಉಪಯೋಗ ಬೇಡ. ಇದು ಅಪವಿತ್ರವಾದದ್ದು. ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಲ್ಲಿ ಸಿನಿಮಾ, ಅಶ್ಲೀಲ ಗೀತೆ ಹಾಕಬೇಡಿ ಎಂದರು. ಇದನ್ನೂ ಓದಿ: 5 ವರ್ಷದ ಬಾಲಕಿ ಮೇಲೆ ನೆರೆಮನೆಯವನಿಂದ ಅತ್ಯಾಚಾರ – 14ರ ಹುಡುಗ ಅರೆಸ್ಟ್
ಭಕ್ತಿ ಗೀತೆ ಹಾಕಿ ಗಣೇಶೋತ್ಸವ ಆಚರಿಸಿ ಪಟಾಕಿ, ಹೂವು ಹಣ್ಣು, ತರಕಾರಿ, ಎಲೆಕ್ಟ್ರಾನಿಕ, ಎಲೆಕ್ಟ್ರಿಕ್ ಸಾಮಗ್ರಿ ಪವಿತ್ರವಾದದ್ದನ್ನು ಪಡೆಯಬೇಕು. ಅಪವಿತ್ರವಾದ ವಸ್ತು ಖರೀದಿ ಮಾಡಿದರೆ ಶಾಸ್ತ್ರಕ್ಕೆ ವಿರೋಧ ಆಗುತ್ತದೆ. ಗಣೇಶೋತ್ಸವ ಮೆರವಣಿಗೆಯಲ್ಲಿ ಮದ್ಯಪಾನ, ಗುಟ್ಕಾ ತಿನ್ನದಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: Haryana Polls Dates | ಹರಿಯಾಣ ಚುನಾವಣೆ ದಿನಾಂಕ ಬದಲು – ಅಕ್ಟೋಬರ್ 5ಕ್ಕೆ ಮತದಾನ