ನವದೆಹಲಿ: ಕದನ ವಿರಾಮ (Ceasefire Violation) ಮತ್ತೆ ಉಲ್ಲಂಘಿಸಿ ಪಾಕಿಸ್ತಾನ ಬಾಲ ಬಿಚ್ಚಿದೆ. ಜಮ್ಮುವಿನ ಅಖ್ನೂರ್, ಕನಾಚಕ್, ಪರ್ಗ್ವಾಲ್, ರಾಮನಗರ ವಲಯಗಳಲ್ಲಿ ಜೋರಾಗಿ ಸ್ಫೋಟಗಳು ಕೇಳಿಬಂದಿವೆ.
ಜಮ್ಮುವಿನ ಅಖ್ನೂರ್‌ನಲ್ಲಿ ಸಂಜೆ 7:45 ಕ್ಕೆ ಕದನ ವಿರಾಮ ಉಲ್ಲಂಘನೆಯಾದ ವರದಿಯಾಗಿದೆ. ಹಲವಾರು ಬಾರಿ ಜೋರಾಗಿ ಸ್ಫೋಟಗಳು ಕೇಳಿಬಂದವು. ಅಖ್ನೂರ್, ಕನಾಚಕ್, ಪರ್ಗ್ವಾಲ್ ಮತ್ತು ರಾಮನಗರ ವಲಯಗಳಲ್ಲಿ ಫಿರಂಗಿ ಶೆಲ್ ದಾಳಿ ವರದಿಯಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮ ಒಪ್ಪಂದದ ಸುಮಾರು 2 ಗಂಟೆ 45 ನಿಮಿಷಗಳ ನಂತರ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಭಾರತದ ವಿರುದ್ಧ ಪಾಕಿಸ್ತಾನ ಸುಳ್ಳು ಸುದ್ದಿಗಳನ್ನು ಹಬ್ಬಿಸಿದೆ: ಸೋಫಿಯಾ ಖುರೇಷಿ
#WATCH | J&K | Red streaks seen and explosions can be heard as India’s air defence intercepts Pakistani drones amid blackout in Udhampur
(Visuals deferred by an unspecified time) pic.twitter.com/oQO8RwhBfm
— ANI (@ANI) May 10, 2025
ಉಧಂಪುರದಲ್ಲಿ ಕತ್ತಲೆಯಾದಾಗ ಭಾರತದ ವಾಯು ರಕ್ಷಣಾ ಪಡೆಗಳು ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆಹಿಡಿಯುತ್ತಿದ್ದಂತೆ ಕೆಂಪು ಗೆರೆಗಳು ಮತ್ತು ಸ್ಫೋಟಗಳು ಕೇಳಿಬರುತ್ತಿವೆ. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜೋರಾದ ಸ್ಫೋಟಗಳು ಕೇಳಿಬರುತ್ತಿವೆ. ರಾಜಸ್ಥಾನದ ಬಾರ್ಮರ್ ನಗರದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದೆ. ಪಂಜಾಬ್‌ನ ಫಿರೋಜ್‌ಪುರದಲ್ಲಿ ಸಂಪೂರ್ಣ ವಿದ್ಯುತ್ ಕಡಿತಗೊಳಿಸಲಾಗಿದೆ. ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಬ್ಲ್ಯಾಕ್‌ಔಟ್ ಮಾಡಲಾಗಿದೆ. ಇದನ್ನೂ ಓದಿ: ಭೂ, ಜಲ, ವಾಯು ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಿ ಕದನ ವಿರಾಮಕ್ಕೆ ಭಾರತ-ಪಾಕ್ ಒಪ್ಪಿಗೆ
Keri Battal Akhnoor side
(Rajouri district)
UAVs spotted pic.twitter.com/Fm2id5TT1K
— War & Gore (@Goreunit) May 10, 2025
‘ಇದು ಕದನ ವಿರಾಮವಲ್ಲ. ಶ್ರೀನಗರದ ಮಧ್ಯಭಾಗದಲ್ಲಿರುವ ವಾಯು ರಕ್ಷಣಾ ಘಟಕಗಳು ಇದೀಗಷ್ಟೇ ತೆರೆದುಕೊಂಡಿವೆ’ ಎಂದು ಎಕ್ಸ್‌ನಲ್ಲಿ ಜಮ್ಮು-ಕಾಶ್ಮೀರ ಸಿಎಂ ಓಮರ್ ಅಬ್ದುಲ್ಲಾ ತಿಳಿಸಿದ್ದಾರೆ. ಶ್ರೀನಗರದಲ್ಲಿ ಸ್ಫೋಟದ ಸದ್ದು ಕೇಳಿಬರುತ್ತಿದೆ ಎಂದು ಸಿಎಂ ಹೇಳಿದ್ದಾರೆ.