– ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿ
ನವದೆಹಲಿ: ಪಾಕಿಸ್ತಾನದ(Pakistan) ಜೊತೆಗಿನ ಕದನ ವಿರಾಮಕ್ಕೆ ಭಾರತ(India) ಒಪ್ಪಿಕೊಂಡಿದ್ದೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿದೆ.
ಇಂದು ಸಂಜೆ 5 ಗಂಟೆಯಿಂದಲೇ ಕದನ ವಿರಾಮ ಜಾರಿಯಾಗಿದೆ. ಮೇ 12ರಂದು ಉಭಯ ದೇಶಗಳು ಮಾತುಕತೆ ನಿರ್ಧರಿಸಿವೆ. ಈ ಸಭೆಗೆ ಅಮೆರಿಕಾ(America) ಮಧ್ಯಸ್ಥಿಕೆ ಇಲಾಖೆ ವಹಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿದೆ: ಪಾಕ್ ವಿದೇಶಾಂಗ ಸಚಿವ ಘೋಷಣೆ
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕ್ ಉಗ್ರರು(Pahalgam Terror Attack) ದಾಳಿ ಮಾಡಿ 26 ಅಮಾಯಕರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಮೇ 7ರಂದು ಭಾರತವು ʻಆಪರೇಷನ್ ಸಿಂಧೂರʼ(Operation Sindoor) ಹೆಸರಿನಡಿಯಲ್ಲಿ ಪಾಕ್‌ನ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿತ್ತು. ಇದನ್ನೂ ಓದಿ: ಭಾರತ-ಪಾಕಿಸ್ತಾನದಿಂದ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಗೆ: ಟ್ರಂಪ್ ಘೋಷಣೆ
ಈ ದಾಳಿಗೆ ಪ್ರತಿಯಾಗಿ ಪಾಕ್ ಭಾರತದ ಮೇಲೆ ಡ್ರೋನ್ ಹಾಗೂ ಕ್ಷಿಪಣಿ ದಾಳಿ ಮಾಡಿತ್ತು. ಭಾರತೀಯ ಸೇನೆಯು ಪಾಕ್‌ನ ಡ್ರೋನ್ ಹಾಗೂ ಕ್ಷಿಪಣಿಗಳಿಗೆ ಹೊಡೆದುರುಳಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು. ಇದನ್ನೂ ಓದಿ: ಪಾಕ್‌ಗೆ ಬೆಂಬಲ ನೀಡಿದ ಟರ್ಕಿ, ಅಜೆರ್ಬೈಜಾನ್‌ಗೆ ಭಾರತ ಪೆಟ್ಟು – 2 ದೇಶಗಳಿಗೆ ಟೂರ್ ಪ್ಯಾಕೇಜ್ ಸ್ಥಗಿತ
ಭಾರತದ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಏರ್ಪಡುತ್ತಿದ್ದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಉಭಯ ರಾಷ್ಟ್ರಗಳಿಗೆ ಕದನ ವಿರಾಮ(Ceasefire) ಮಾಡುವಂತೆ ಸಲಹೆ ನೀಡಿದ್ದರು. ಆದರೆ ಇದು ಫಲಪ್ರದವಾಗಿರಲಿಲ್ಲ. ಇದೀಗ ಮತ್ತೊಮ್ಮೆ ಮಾತುಕತೆ ನಡೆಸಿ, ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದೆ.