ಬೆಂಗಳೂರು: ಸಿಡಿ (CD Case) ಪ್ರಕರಣದ ಸಿಬಿಐ ತನಿಖೆಗೆ ರಮೇಶ್ ಜಾರಕಿಹೊಳಿ (Ramesh Jarakiholi) ಒತ್ತಾಯ ವಿಚಾರವಾಗಿ ಮಾಜಿ ಸಚಿವ ಈಶ್ವರಪ್ಪ ಬೆಂಬಲ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa), ಏನಿದೆ ಅನ್ನೋದು ತನಿಖೆಯಿಂದಲೇ ಹೊರಬರಬೇಕು. ಸಿಬಿಐ (CBI) ತನಿಖೆಗೆ ಜಾರಕಿಹೊಳಿ ಅಪೇಕ್ಷೆ ಪಟ್ಟಿರುವುದರಿಂದ ಸಿಬಿಐ ತನಿಖೆ ಮಾಡುವುದು ಸೂಕ್ತ ಅಂತಾ ರಮೇಶ್ ಜಾರಕಿಹೊಳಿ ಕೂಗಿಗೆ ದನಿಗೂಡಿಸಿದ್ದಾರೆ. ಸಿಡಿ ವಿಚಾರ ಕರ್ನಾಟಕದ ರಾಜಕೀಯಕ್ಕೆ ಕಳಂಕ. ಮತ್ತೆ ಮತ್ತೆ ಇವರ ಮೇಲೆ ಅವರು, ಅವರ ಮೇಲೆ ಇವರು ಹೇಳುತ್ತಾ ಇರುವುದು ಸೂಕ್ತ ಅಲ್ಲ. ಇದನ್ನು ಒಮ್ಮೆ ಮುಗಿಸಿಬಿಡಲಿ ಅಂತೇಳಿದ್ರು. ಇನ್ನು ರಮೇಶ್ ಜಾರಕಿಹೊಳಿ ಅಪೇಕ್ಷೆಪಟ್ಟಿರುವುದರಿಂದ ತನಿಖೆ ಮಾಡಿರುವುದು ತಪ್ಪಿಲ್ಲ ಅಂತಾ ಸಮರ್ಥನೆ ಮಾಡಿಕೊಂಡ್ರು.
Advertisement
Advertisement
ಇದೇ ವೇಳೆ ಸಚಿವ ಸ್ಥಾನ ವಿಚಾರವಾಗಿ ಈಶ್ವರಪ್ಪ ಅಚ್ಚರಿ ಹೇಳಿಕೆ ನೀಡಿದ್ದಾರೆ. ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಕೂಡಾ ಸಿಎಂಗೆ ತಿಳಿಸಿ ಬಂದಿದ್ದೇನೆ. ನನ್ನ ಇನ್ನು ಮಂತ್ರಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ. ಮಂತ್ರಿಯೇ ಆಗಬೇಕು ಅಂತಾ ಏನೂ ಇಲ್ಲ. ಅನೇಕ ಇಲಾಖೆಗಳನ್ನು ನಾನು ನೋಡಿದ್ದೇನೆ ಅಂತಾ ಈಶ್ವರಪ್ಪ ಹೇಳಿದ್ದಾರೆ. ಗುಜರಾತ್ (Gujrat) ನಲ್ಲಿ ಗೆದ್ದ ಮೇಲೆ ತಾನೇ ಗೊತ್ತಾಗಿದ್ದು, ಗುಜರಾತ್ ಮಾಡೆಲ್ ಏನು ಅಂತಾ. ಕರ್ನಾಟಕದಲ್ಲಿ ಗೆದ್ದ ಮೇಲೆ ಕರ್ನಾಟಕದ ಮಾಡೆಲ್ ಏನು ಅಂತಾ ಗೊತ್ತಾಗುತ್ತದೆ. ಕರ್ನಾಟಕಕ್ಕೆ ಕರ್ನಾಟಕ ಮಾಡೆಲ್ ಅಂತಾ ಮಾರ್ಮಿಕವಾಗಿ ಹೇಳಿಕೆ ಕೊಟ್ಟರು. ಇದನ್ನೂ ಓದಿ: ಡಿಕೆಶಿ ಸಹ ಲಿಮಿಟ್ ಮೀರಬಾರದು, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ – ಸತೀಶ್ ಜಾರಕಿಹೋಳಿ
Advertisement
Advertisement
ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ (BS Yediyurappa), ಈಶ್ವರಪ್ಪ ಪಾತ್ರ ವಿಚಾರ ಏನಿರುತ್ತೆ ಎಂಬ ಪ್ರಶ್ನೆಗೆ ಈಶ್ವರಪ್ಪ ಎಚ್ಚರಿಕೆ ಉತ್ತರ ನೀಡಿದ್ದಾರೆ. ಮುಂಬರುವ ಚುನಾವಣೆಗೆ ಸಾಮೂಹಿಕ ನಾಯಕತ್ವ ಅಂತಾ ಸ್ಪಷ್ಟವಾಗಿ ಯಡಿಯೂರಪ್ಪ, ಕಟೀಲ್, ಸಿಎಂ, ವರಿಷ್ಠರು ಹೇಳಿದ್ದಾರೆ. ಬಿಜೆಪಿ ಚಾಣಕ್ಯನ ತಂತ್ರ ಮಾಡಿ ರಾಜಕಾರಣ ಮಾಡುತ್ತದೆ. ತಂತ್ರಗಾರಿಕೆ ಬಿಜೆಪಿ ಬಿಟ್ಟು ಬೇರೆ ಯಾರಿಗೂ ಗೊತ್ತಿಲ್ಲ. ಪೇಜ್ ಪ್ರಮುಖ್ ಅಂದರೆ ಏನು ಅಂತಾ ಕಾಂಗ್ರೆಸ್ ನವರಿಗೆ ಗೊತ್ತಾ ಕೇಳಿ. ಸಂಘಟನಾತ್ಮಕವಾಗಿ ಒಂದೊಂದು ಬಾರಿ ಒಂದೊಂದು ರೀತಿ ತಂತ್ರಗಾರಿಕೆ ಮಾಡುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು.
ಇನ್ನೊಂದೆಡೆ ಶಿವಮೊಗ್ಗ (Shivamogga) ದಲ್ಲಿ ಮತದಾರರಿಗೆ ಬಿಜೆಪಿ ಎಂಎಲ್‍ಸಿ ಆಯನೂರು ಮಂಜುನಾಥ್ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಆಯನೂರು ಮಂಜುನಾಥ್ ಚುನಾವಣೆಗೆ ಅಭ್ಯರ್ಥಿಯಾಗಲು ಅಪೇಕ್ಷೆ ಪಡುವುದು ತಪ್ಪಲ್ಲ. ಬಿಜೆಪಿಗೆ ಕಾರ್ಯಕರ್ತರಿಗೆ ಚುನಾವಣೆಗೆ ಸ್ಫರ್ಧೆ ಮಾಡುವುದೇ ತಪ್ಪು ಅಂತಾ ಹೇಳಿದರೆ ಚುನಾವಣೆಗೆ ಬಿಜೆಪಿ ರೆಡಿ ಇಲ್ಲ ಅಂತಾ ಆಗುತ್ತದೆ. ಪಕ್ಷ ಯಾರಿಗೆ ತೀರ್ಮಾನ ಮಾಡುತ್ತದೋ ಅವರಿಗೆ ಟಿಕೆಟ್ ಸಿಗುತ್ತದೆ ಅಂತೇಳಿದ್ರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k