ಬೀಜಿಂಗ್: ಅಂಗಡಿಗಳಿಗೆ ಎಷ್ಟೇ ಭದ್ರತೆ ನೀಡಿದ್ರೂ, ಕಳ್ಳರು ತಮ್ಮ ಕರಾಮತ್ತು ತೋರಿಸ್ತಾರೆ. ಕೆಲವೊಮ್ಮೆ ಕಳ್ಳರು ಚಾಲಾಕಿತನದಿಂದ ಎಲ್ಲಿಯೂ ಸುಳಿವು ನೀಡದೇ, ಸದ್ದು ಆಗದಂತೆ ಕಳ್ಳತನ ಮಾಡಿ ಎಸ್ಕೇಪ್ ಆಗ್ತಾರೆ.
ಇದೇ ರೀತಿಯಲ್ಲಿ ದಕ್ಷಿಣ ಚೀನಾದ ದೊಂಗ್ಗೌನ್ ಎಂಬ ನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿದ್ದು, ಕಳ್ಳ ಅಂಗಡಿ ಶಟರ್ ಸಹ ಎತ್ತದೇ ಅಂಗಡಿಯೊಳಗೆ ನುಗ್ಗಿದ್ದಾನೆ. ಕಳ್ಳನ ಎಲ್ಲ ಚಲನವಲನಗಳು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ವಿಡಿಯೋದಲ್ಲಿ ಏನಿದೆ?: ಸಾಧಾರಣ ಮೈ ಕಟ್ಟಿನ ವ್ಯಕ್ತಿಯೊಬ್ಬ ಅಂಗಡಿ ಮುಂದೆ ಬಂದು ನಿಲ್ತಾನೆ. ಅಂಗಡಿಯ ಶಟರ್‍ಗೆ ಹಾಕಿದ ಬೀಗ ಮುರಿಯಲು ಯತ್ನಿಸದೇ, ನಿಧಾನವಾಗಿ ಶಟರ್ ಕೆಳಗಿರುವ ಜಾಗದಲ್ಲಿ ನುಸುಳಿಕೊಂಡು ಒಳಹೋಗಿದ್ದಾನೆ. ಅಂಗಡಿ ಪ್ರವೇಶಿಸಿದ ಕೂಡಲೇ ಸೈರನ್ ಬಂದ್ ಮಾಡಿ, ಚಿನ್ನಾಭರಣಗಳನ್ನು ಚೀಲದಲ್ಲಿ ತುಂಬಿಸಿಕೊಂಡು ಬಂದ ದಾರಿಯಲ್ಲಿ ಹಿಂದಿರುಗಿ ಹೋಗಿದ್ದಾನೆ.
ಕಳ್ಳ ಕೇವಲ ಬೆಲೆಬಾಳುವ ಚಿನ್ನಾಭರಣ, ವಜ್ರದ ನೆಕ್ಲೇಸ್‍ಗಳನ್ನು ಮಾತ್ರ ಕದ್ದಿದ್ದಾನೆ. ಅಂದಾಜು 53 ಸಾವಿರ ಡಾಲರ್ (36 ಲಕ್ಷ ರೂ.ಗೂ ಅಧಿಕ) ಬೆಲೆಬಾಳುವ ಆಭರಣಗಳು ಕಳ್ಳತನವಾಗಿವೆ ಎಂದು ಚಿನ್ನದಂಗಡಿ ಮಾಲೀಕರು ತಿಳಿಸಿದ್ದಾರೆ.