– ಮೊಬೈಲ್ ಕಿತ್ತೆಸೆದು ಸುಳ್ಳು ಕತೆ ಕಟ್ಟಿದ ಶಿಲಾದಿತ್ಯ ಬೋಸ್
ಬೆಂಗಳೂರು: ವಿಂಗ್ ಕಮಾಂಡರ್ (Wing Commander) ಶಿಲಾದಿತ್ಯ ಬೋಸ್ (Shiladitya Bose) ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಅವರೇ ಡಿಲೆವರಿ ಬಾಯ್ ಮೇಲೆ ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಬೈಕ್ ಸವಾರ ವಿಕಾಸ್ ನೆಲಕ್ಕೆ ಬಿದ್ದರೂ ಬಿಡದೇ ಹಲ್ಲೆ ಮಾಡಿದ್ದ ವಿಂಗ್ ಕಮಾಂಡರ್, ತನ್ನ ಮೇಲೆಯೇ ಹಲ್ಲೆ ನಡೆದಿದೆ ಎಂದು ಕಥೆ ಕಟ್ಟಿದ್ದಾರೆ. ಅಲ್ಲದೇ ಮೊಬೈಲ್‍ನ್ನು ಕಿತ್ತೆಸೆದು ದರ್ಪ ಮೆರೆದಿದ್ದಾರೆ ಎಂಬುದು ತಿಳಿದು ಬಂದಿದೆ. ಸ್ಥಳೀಯರು ಬಿಡಿಸಲು ಮುಂದಾದರೂ ಜಗ್ಗದೇ ಬೈಕ್ ಸವಾರನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನೂ ಓದಿ: ಬೈಕ್ ಸವಾರನಿಗೆ ಮನಸೋಇಚ್ಛೆ ಹಲ್ಲೆ ಮಾಡಿ ಕಥೆ ಕಟ್ಟಿದ ವಿಂಗ್ ಕಮಾಂಡರ್
ಏನಿದು ಪ್ರಕರಣ?
ಕಾರಿಗೆ ಬೈಕ್ ಹಿಂದಿನಿಂದ ಟಚ್ ಆಗಿದ್ದಕ್ಕೆ ಗಲಾಟೆಯಾಗಿದೆ ಎನ್ನಲಾಗಿತ್ತು. ಪ್ರಕರಣ ಸಂಬಂಧ ವಿಂಗ್ ಕಮಾಂಡರ್ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ವಿಡಿಯೋದಲ್ಲಿ, ಬೈಕ್ ಸವಾರ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ. ಕನ್ನಡ ಮಾತನಾಡಿಲ್ಲ ಎಂದು ಹಲ್ಲೆ ಮಾಡಿದ. ನನ್ನ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ. ಈ ವೇಳೆ ನನ್ನ ಮೇಲೆ ಹಲ್ಲೆ ಮಾಡಿದ. ಸ್ಥಳೀಯರು ಯಾರೂ ಕೂಡ ಸಹಾಯಕ್ಕೆ ಬರಲಿಲ್ಲ ಎಂದು ವಿಂಗ್ ಕಮಾಂಡರ್ ಆರೋಪ ಮಾಡಿದ್ದರು. ತಲೆಗೆ ಮತ್ತು ಮೂಗಿನ ಭಾಗಕ್ಕೆ ಪೆಟ್ಟಾಗಿದೆ ಎಂದು ಬ್ಯಾಂಡೇಜ್ ಹಾಕಿಸಿದ್ದರು.
ಆದರೆ, ಹಲ್ಲೆಗೆ ಸಂಬಂಧಿಸಿದ ವೀಡಿಯೋ ಈಗ `ಪಬ್ಲಿಕ್ ಟಿವಿ’ಗೆ ಲಭ್ಯವಾಗಿದ್ದು, ವಿಂಗ್ ಕಮಾಂಡರ್ ಅಸಲಿಯತ್ತು ಬಯಲಾಗಿದೆ. ವಿಡಿಯೋದಲ್ಲಿ ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಮಾರಣಾಂತಿಕ ಹಲ್ಲೆ ನಡೆಸಿರುವುದು ಕಂಡುಬಂದಿದೆ. ಇದನ್ನೂ ಓದಿ: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ | ಹಾರಿ ಬಿದ್ದು ಪ್ರಾಣಬಿಟ್ಟ ಮಹಿಳೆ – ವಿಡಿಯೋ ವೈರಲ್