ಬೆಂಗಳೂರು: ಸ್ಕೂಟರ್‍ನಲ್ಲಿ ಬಂದ ಯುವಕನೊಬ್ಬ ಗೆಳೆಯನ ಜೊತೆ ಮಾತಾಡ್ಕೊಂಡು ನಿಂತಿರ್ತಾನೆ. ಈ ವೇಳೆ ಬೈಕ್‍ನಲ್ಲಿ ಬಂದ ಇಬ್ಬರು ಟೂಲ್ಸ್ ಓಪನ್ ಮಾಡಿ ಏಕಾಏಕಿ ಇವನಿಗೆ ಹೊಡೆಯುತ್ತಾರೆ. ಇದು ಬೆಂಗಳೂರು ನಗರದ ಹೊರವಲಯದ ಬ್ಯಾಡರಹಳ್ಳಿಯಲ್ಲಿ ನಡೆದ ಘಟನೆ.
ವ್ಯಕ್ತಿಯೊಬ್ಬನನ್ನು ಹಲ್ಲೆ ಮಾಡಲು ನಾಲ್ವರು ದುಷ್ಕರ್ಮಿಗಳು ಬಂದಿರ್ತಾರೆ. ಆದರೆ ಆ ವ್ಯಕ್ತಿಯೇ ಅವರ ಕೈಲಿದ್ದ ಮಚ್ಚು ಕಸಿದುಕೊಂಡು ಅವರ ಮೇಲೆಯೇ ಹಲ್ಲೆ ಮಾಡಲು ಮುಂದಾಗ್ತಾನೆ. ವ್ಯಕ್ತಿ ಮಚ್ಚು ಹಿಡಿದು ಆರ್ಭಟಿಸಿದಾಗ ಕೊಲೆ ಮಾಡಲು ಬಂದಿದ್ದವರೆಲ್ಲಾ ಎದ್ನೋ ಬಿದ್ನೊ ಅಂತಾ ದಿಕ್ಕಾಪಾಲಾಗ್ತಾರೆ.
Advertisement
Advertisement
ಇವರನ್ನೆಲ್ಲಾ ಓಡಿಸ್ಕೊಂಡು ಹೋಗಿ ವಾಪಸ್ ಬರ್ತಿದ್ದಾಗ ಮಾರುದ್ದದ ಮರ ಎತ್ಕೊಂಡ್ ಬಂದು ಇವನನ್ನ ಹೊಡೆಯೋದಕ್ಕೆ ಹೋಗ್ತಾರೆ. ಆದ್ರೂ ಬಗ್ಗದ ಈತ ದೊಣ್ಣೆ ಕಸಿದು ಮತ್ತೆ ಮಚ್ಚು ಹಿಡಿದು ಓಡಿಸ್ಕೊಂಡು ಹೋಗ್ತಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement
ಆದರೆ ಇದೂವರೆಗೂ ಈ ಸಂಬಂಧ ದೂರು ದಾಖಲಾಗಿಲ್ಲ. ಪೊಲೀಸ್ರು ಈ ವೀಡಿಯೋ ಇಟ್ಕೊಂಡು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
Advertisement