ಬೆಂಗಳೂರು: ಉತ್ತರಪ್ರದೇಶದಲ್ಲಿ ನಿಗೂಢವಾಗಿ ಮೃತಪಟ್ಟ ಕರ್ನಾಟಕದ ಐಎಎಸ್ ಅಧಿಕಾರು ಅನುರಾಗ್ ತಿವಾರಿ ಅವರ ಕೊನೆಯ ಕ್ಷಣದ ವಿಡಿಯೋವೊಂದು ಲಭ್ಯವಾಗಿದೆ.
ಉತ್ತರಪ್ರದೇಶ ರಾಜಧಾನಿ ಲಕ್ನೋದ ಹಜರತ್‍ಗಂಜ್‍ನಲ್ಲಿರುವ ಆರ್ಯನ್ ಹೋಟೆಲ್‍ಗೆ ಎಂಟ್ರಿ ಕೊಡ್ತಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ದೃಶ್ಯದಲ್ಲಿ ಗ್ಲಾಸ್ ಡೋರ್‍ನ್ನು ತಳ್ಳಿಕೊಂಡು ತಿವಾರಿ ಎಂಟ್ರಿ ಕೊಡ್ತಿದ್ದಾರೆ. ಒಳಗೆ ಬಂದ ಬಳಿಕ ತಿವಾರಿ ಅಲ್ಲೇ ಇದ್ದ ಸ್ಟ್ಯಾಂಡ್‍ವೊಂದರಲ್ಲೇ ಏನನ್ನೋ ತೆಗೆದು ಓದುತ್ತಿದ್ದಾರೆ. ಹೋಟೆಲ್‍ಗೆ ತಿವಾರಿ ಎಂಟ್ರಿ ಕೊಡೋ ವೇಳೆ ಅವರ ಬ್ಯಾಚ್‍ಮೇಟ್ ಆಗಿದ್ದ ಪಿಎನ್ ಸಿಂಗ್ ಕೂಡಾ ಇದ್ದರು ಎನ್ನುವುದು ವಿಶೇಷ.
ಇದನ್ನೂ ಓದಿ: Exclusive: ಅನುರಾಗ್ ತಿವಾರಿಗೆ ಇತ್ತು ಜೀವ ಭಯ- 4-5 ತಿಂಗಳಿಂದ ಕೊಟ್ಟೇ ಇರಲಿಲ್ಲ ಸಂಬಳ
ಮೇ 17ರಂದು ತಿವಾರಿ ಮೃತದೇಹ ಹೋಟೆಲ್‍ನ ಬಳಿಯೇ ಸಿಕ್ಕಿತ್ತು. ಮೂರು ದಿನಗಳಿಂದ ಇದೇ ಹೋಟೆಲ್‍ನಲ್ಲಿ ತಿವಾರಿ ತಂಗಿದ್ದರೂ ರೂಂ ಬುಕ್ ಆಗಿದ್ದು ಮಾತ್ರ ಅವರ ಸ್ನೇಹಿತ ಪಿಎನ್ ಸಿಂಗ್ ಹೆಸರಲ್ಲಿ ಅನ್ನೋದು ವಿಚಿತ್ರ. ತಿವಾರಿ ಮರಣೋತ್ತರ ಪರೀಕ್ಷೆ ಕೂಡಾ ಅಪೂರ್ಣವಾಗಿದ್ದು ಸಾವಿಗೆ ಖಚಿತ ಕಾರಣ ಸಿಕ್ಕಿಲ್ಲ.
ಇದನ್ನೂ ಓದಿ: ಅನುರಾಗ್ ತಿವಾರಿ ನಿಗೂಢ ಸಾವು: ಹರ್ಷ ಗುಪ್ತಾಗೆ ನೋಟಿಸ್ ಜಾರಿ?
ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಕರ್ನಾಟಕ ಐಎಎಸ್ ಅಧಿಕಾರಿ ಜನ್ಮದಿನದಂದೇ ಶವವಾಗಿ ಪತ್ತೆ