Dharwad

ವಿಡಿಯೋ: ಮನೆ ಮುಂದೆ ನಿಲ್ಲಿಸಿದ ಕಾರಿನ ಮಿರರ್ ಮುರಿಯೋ ಕಾಂಗ್ರೆಸ್ ಮುಖಂಡನ ಮಗ

Published

on

Share this

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೊಬ್ಬ ವಿಚಿತ್ರ ಸೈಕೋ ಇದ್ದಾನೆ. ರಾತ್ರೋರಾತ್ರಿ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮಿರರ್ ಮುರಿಯುವುದು ಇವನ ನಿತ್ಯದ ಕೆಲಸ.

ಹುಬ್ಬಳ್ಳಿ ಜವಳಿ ಓಣಿಯ ನಿವಾಸಿಯಾದ ವಿನಾಯಕ ಅಣ್ವೇಕರ್ ಎಂಬಾತ ಈ ಕೃತ್ಯವೆಸಗುತ್ತಿದ್ದಾನೆ. ಎರಡು ದಿನಗಳ ಹಿಂದೆ ಕಾರಿನ ಮಿರರ್ ಮುರಿದಿದ್ದಾನೆ. ನಿಂತಿರೋ ಕಾರಿನ ಗಾಜು ಒಡೆಯುವುದು ಹಾಗೂ ಮಿರರ್ ಮುರಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವಿನಾಯಕ ಕಾಂಗ್ರೆಸ್ ಮುಖಂಡ ಬಾಬು ಅಣ್ವೇಕರ್ ಅವರ ಪುತ್ರನಾಗಿದ್ದು, ಈ ಹಿಂದೆ ಹಲವು ಬಾರಿ ಓಣಿಯಲ್ಲಿ ನಿಂತಿರೋ ವಾಹನಗಳನ್ನು ಡ್ಯಾಮೆಜ್ ಮಾಡಿದ್ದಾನೆ ಎಂದು ಹೇಳಲಾಗಿದೆ.

ಘಂಟಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಯಾವುದೇ ಪ್ರಕರಣ ದಾಖಲಾಗಿಲ್ಲ.

https://www.youtube.com/watch?v=_7Q0XXi7waw

Click to comment

Leave a Reply

Your email address will not be published. Required fields are marked *

Advertisement
Advertisement