ಭೋಪಾಲ್: ಪೋಷಕರು ಕೆಲಸಕ್ಕೆ ಹೋದ ಸಮಯದಲ್ಲಿ ಆಯಾ 2 ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಜಬಲ್ಪುರದ ರಜಿನಿ ಚೌಧರಿ ಆರೋಪಿ. ಈಕೆಗೆ ಮಗುವನ್ನು ನೋಡಿಕೊಳ್ಳಲು ಪೋಷಕರು ಆಹಾರದ ಜೊತೆಗೆ ಮಾಸಿಕ 5,000 ರೂ. ನೀಡುತ್ತಿದ್ದರು. ಪೋಷಕರಿಬ್ಬರು ಕೆಲಸಕ್ಕೆ ಹೋಗುತ್ತಿದ್ದರಿಂದ ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಈಕೆಗೆ ವಹಿಸಲಾಗಿತ್ತು.
Advertisement
Advertisement
ದಿನ ಕಳೆದಂತೆ ಎರಡು ವರ್ಷದ ಬಾಲಕ ಮಂಕಾಗಿ ಹಾಗೂ ದುರ್ಬಲನಾಗಿರುವುದನ್ನು ನೋಡಿದ್ದ ಪೋಷಕರು ಕಳವಳಗೊಂಡಿದ್ದರು. ಇದರಿಂದಾಗಿ ಆತನನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಗುವಿನ ಅಂಗಾಂಗಗಳು ಊದಿಕೊಂಡಿರುವುದು ಕಂಡು ಬಂದಿತ್ತು. ಇದರಿಂದಾಗಿ ಪೋಷಕರು ತಾವು ಇಲ್ಲದಿರುವಾಗ ಏನೋ ತೊಂದರೆ ಆಗಿದೆ ಎಂದು ಶಂಕಿಸಿ ಮನೆಯಲ್ಲಿ ಸಿಸಿ ಕ್ಯಾಮೆರಾ ಹಾಕಿದ್ದರು. ಇದನ್ನೂ ಓದಿ: ಕಾರಹುಣ್ಣಿವೆ ಕರಿ ಹರಿಯುವ ವೇಳೆ ಭೀಮಾನದಿಗೆ ಹಾರಿ ಪ್ರಾಣಬಿಟ್ಟ ಎತ್ತು
Advertisement
Advertisement
ಇದಾದ ಬಳಿಕ ಸಿಸಿಟಿವಿಯ ದೃಶ್ಯಾವಳಿಗಳನ್ನು ನೋಡಿದ ಪೋಷಕರು ಭಯಭೀತರಾಗಿದ್ದಾರೆ. ದೃಶ್ಯದಲ್ಲಿ ರಜನಿ ಮಗುವಿನ ಮೇಲೆ ಅಮಾನುಷವಾಗಿ ಹಲ್ಲೆ ಮಾಡುತ್ತಿರುವುದು ಕಂಡುಬಂದಿದೆ. ಅಷ್ಟೇ ಅಲ್ಲದೇ ರಜನಿ ಮಗುವನ್ನು ಥಳಿಸುವುದು, ಕೂದಲಿಡಿದು ಎಳೆದುಕೊಂಡು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇನ್ನೆರೆಡು ದಿನ ಮಳೆ: ಹವಾಮಾನ ಇಲಾಖೆ