ಮತ್ತದೇ ಎಡವಟ್ಟು – ಗುಜಿರಿ BMTC ಬಸ್‍ಗಳಿಗೆ CCTV ಭಾಗ್ಯ

ಬೆಂಗಳೂರು: ಬಿಟ್ಟಿ ದುಡ್ಡು ಕಾಟಾಚಾರದ ಕೆಲಸ. ಫಂಡ್ ಸಿಗುತ್ತೆ, ಏನೋ ಕೆಲಸ ಮಾಡಬೇಕಲ್ಲ ಎನ್ನುವ ಬಿಎಂಟಿಸಿ (BMTC) ಮನಸ್ಥಿತಿ ಮತ್ತೊಮ್ಮೆ ಬಟಾಬಯಲಾಗಿದೆ. ಮಹಿಳಾ ಸುರಕ್ಷತೆಗಾಗಿ ನಿರ್ಭಯಾ ಯೋಜನೆಡಿಯಲ್ಲಿ (Nirbhaya Scheme) ಬಸ್‍ನಲ್ಲಿ (Bus) ಸಿಸಿಟಿವಿ (CCTV) ಆಳವಡಿಕೆಗೆ ಕೇಂದ್ರ ದುಡ್ಡು ಬಿಡುಗಡೆ ಮಾಡಿದೆ. ಈ ಹಣವನ್ನು ಗುಜಿರಿ ಸ್ಕ್ರಾಪ್‍ಗೆ ಹಾಕಲು ಸಿದ್ಧವಾಗಿರುವಂತಹ ಬಸ್‍ಗಳಿಗೆ ಸಿಸಿಟಿವಿ ಬಳಕೆ ಮಾಡಿ ಬಿಎಂಟಿಸಿ ಎಡವಟ್ಟು ಮಾಡಿದೆ.
ಕೇಂದ್ರದ ನಿರ್ಭಯಾ ಪ್ರಾಜೆಕ್ಟ್‌ನಲ್ಲಿ ಮಹಿಳಾ ಸುರಕ್ಷತೆಗಾಗಿ ಬಿಎಂಟಿಸಿ ಬಸ್‍ಗೆ ಸಿಸಿಟಿವಿ ಅಳವಡಿಕೆಗಾಗಿ ಕೋಟಿ ಕೋಟಿ ದುಡ್ಡು ಬಿಡುಗಡೆ ಮಾಡಿದೆ. ಸುಮಾರು ಐದು ಸಾವಿರ ಬಿಎಂಟಿಸಿ ಬಸ್‍ಗಳಿಗೆ ಸಿಸಿಟಿವಿ ಹಾಗೂ ಮಹಿಳಾ ಸುರಕ್ಷತೆಗಾಗಿ ಎಮರ್ಜೆನ್ಸಿ ಬಟನ್‍ಗಳನ್ನು ಬಸ್‍ನಲ್ಲಿ ಅಳವಡಿಕೆ ಮಾಡಲಾಗಿದೆ. ಆದರೆ ಬಹುತೇಕ ಗುಜರಿ ಡಕೋಟ ಎಕ್ಸ್‌ಪ್ರೆಸ್ ಬಸ್‍ಗಳಿಗೆ ಅಳವಡಿಕೆ ಮಾಡಿರೋದು ನೋಡಿದರೆ ಕಾಟಾಚಾರಕ್ಕೆ ಅಳವಡಿಕೆ ಮಾಡಿದಂತೆ ಕಾಣಿಸುತ್ತಿದೆ. ಇದನ್ನೂ ಓದಿ: ಕೆಎಸ್‍ಆರ್‌ಟಿಸಿಗೆ ಶಾಲಾ ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬಸ್ ಡಿಕ್ಕಿ – 9 ಮಂದಿ ಸಾವು, 40 ಜನರಿಗೆ ಗಾಯ
ನಿರ್ಭಯಾ ಫಂಡ್ ರಿಲೀಸ್ ಆಗಿದ್ರೂ ಈ ಹಿಂದೆ ಅನೇಕ ಬಾರಿ ಫಂಡ್ ಸದುಪಯೋಗವನ್ನು ಬಿಎಂಟಿಸಿ ಮಾಡಲಿಲ್ಲ. ಇದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದ ಬಳಿಕ ಇದೀಗ ಇರುವ ಬಸ್‍ಗಳಿಗೆ ಸಿಸಿಟಿವಿ ಅಳವಡಿಕೆ ಮಾಡಿದೆ. ಅ ಬಸ್‍ಗಳ ಪರಸ್ಥಿತಿ ಹೇಗಿದೆ ಎಂದರೆ, ಕಿತ್ತೋದ ಸೀಟು, ನೆಟ್ಟಗಿಲ್ಲದ ಬ್ರೇಕ್, ಡಕೋಟಾ ಡೋರ್, ಗಾಜಿಲ್ಲದ ಕಿಟಕಿಗಳು ಯಾವುದು ನೆಟ್ಟಗಿಲ್ಲದ ಬಿಎಂಟಿಸಿ ಬಸ್‍ನಲ್ಲಿ ಈಗ ಹೊಸ ಸಿಸಿಟಿವಿ ಅಳವಡಿಕೆ ನೋಡಿದ್ರೇ ಗುಜಿರಿ ಬಸ್‍ಗಳಿಗೆ ಇದ್ಯಾಕಪ್ಪ ಹೈಟೆಕ್ ವ್ಯವಸ್ಥೆ ಅಂತಾ ಪ್ರತಿಯೊಬ್ಬರಿಗೆ ಅನಿಸುತ್ತೆ. ಒಟ್ಟಿನಲ್ಲಿ ಕೇಂದ್ರದಿಂದ ಬಂದ ಕೋಟಿ, ಕೋಟಿ ಅನುದಾನ ಮಾತ್ರ ಬಿಎಂಟಿಸಿ ಹೀಗೆ ವ್ಯರ್ಥ ಮಾಡ್ತಿರುವುದು ಜನರ ಕಡುಕೋಪಕ್ಕೆ ಕಾರಣವಾಗಿದೆ. ಇದನ್ನೂ ಓದಿ: PFI ಕಚೇರಿಯಲ್ಲಿ ಮೆಟಲ್ ಡಿಟೆಕ್ಟರ್ ಪತ್ತೆ!