ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆಡುತ್ತಿದ್ದ ಆಟಗಾರ, ಸ್ಯಾಂಡಲ್‍ವುಡ್ ಕಲಾವಿದ ರಾಜೀವ್ ಅವರು ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಬೆಂಗಳೂರು ಮೂಲದ ರೇಷ್ಮಾ ಅವರ ಜೊತೆ ರಾಜೀವ್ ನಿಶ್ಚಿತಾರ್ಥ ನೆರವೇರಿದೆ. ರಾಜೀವ್ ಹಾಗೂ ರೇಷ್ಮಾ ಅವರ ನಿಶ್ಚಿತಾರ್ಥಕ್ಕೆ ಸ್ಯಾಂಡಲ್‍ವುಡ್ ತಾರೆಯರು ಶುಭಾಶಯ ಕೋರಿದ್ದಾರೆ. ರಾಜೀವ್ ಸ್ಯಾಂಡಲ್‍ವುಡ್‍ಗಿಂತ ಸಿಸಿಎಲ್ ಟೂರ್ನಿಯಿಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದಾರೆ.
Advertisement
Advertisement
ರಾಜೀವ್ ಮದುವೆಯಾಗುತ್ತಿರುವ ರೇಷ್ಮಾ ಅವರು ಬೆಂಗಳೂರು ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ ಎನ್ನಲಾಗಿದೆ. ರಾಜೀವ್ ಹಾಗೂ ರೇಷ್ಮಾ ಅವರ ನಿಶ್ಚಿತಾರ್ಥ ಕಾರ್ಯಕ್ರಮ ನಗರದ ಪೈವಿಸ್ತಾ ಕನ್ವಂಷನ್ ಹಾಲ್‍ನಲ್ಲಿ ನಡೆದಿದೆ.
Advertisement
ಕಿಚ್ಚ ಸುದೀಪ್ ನೇತೃತ್ವದ ತಂಡದಲ್ಲಿ ರಾಜೀವ್ ಕ್ರಿಕೆಟ್ ಆಟವಾಡುತ್ತಿದ್ದಾರೆ. ಸುದೀಪ್ ತಮ್ಮ ಗೆಳೆಯ ಕೂಡ ರಾಜೀವ್ ಅವರ ವೃತ್ತಿ ಜೀವನದಲ್ಲಿ ಹಾಗೂ ಚಿತ್ರಗಳಿಗೆ ಬೆಂಬಲ ನೀಡುತ್ತಾರೆ. ಸದ್ಯ ರಾಜೀವ್ ನಿಶ್ಚಿತಾರ್ಥಕ್ಕೆ ಸುದೀಪ್ ಅವರ ಪತ್ನಿ ಪ್ರಿಯಾ ಅವರು ಹೋಗಿ ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ.
Advertisement
ಸುದೀಪ್ ಹೈದರಾಬಾದ್‍ನಲ್ಲಿ ‘ಪೈಲ್ವಾನ್’ ಚಿತ್ರದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದ ಕಾರಣ ಅವರು ರಾಜೀವ್ ನಿಶ್ಚಿತಾರ್ಥಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಆದರೆ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ರಾಜೀವ್ ಹಾಗೂ ರೇಷ್ಮಾ ಅವರ ಫೋಟೋವನ್ನು ಹಾಕಿ ಶುಭಾಶಯ ತಿಳಿಸಿದ್ದಾರೆ.
My bestest wshs to this lovely pair on their engagement day…. Luv u my brother @RajeevHanu,,, stay blessed. pic.twitter.com/FPA6iXojsw
— Kichcha Sudeepa (@KicchaSudeep) November 18, 2018
ರಾಜೀವ್ ಅವರ ನಿಶ್ಚಿತಾರ್ಥದಲ್ಲಿ ಅವರ ಆಪ್ತ ಸ್ನೇಹಿತ, ನಟ ಪ್ರದೀಪ್ ಆಗಮಿಸಿದ್ದರು. ರಾಜೀವ್ ಹಾಗೂ ಪ್ರದೀಪ್ ಒಂದೇ ತಂಡದಲ್ಲಿ ಆಟವಾಡಿದ್ದಾರೆ. ಸದ್ಯ ಪ್ರದೀಪ್ ಅವರು ಕೂಡ ರಾಜೀವ್ ನಿಶ್ಚಿತಾರ್ಥದಲ್ಲಿ ಭಾಗವಹಿಸಿ ಗೆಳೆಯನಿಗೆ ಶುಭ ಕೋರಿದ್ದಾರೆ. ಅಲ್ಲದೇ ಕಿರುತೆರೆ ಖ್ಯಾತ ನಟ, ಬಿಗ್ ಬಾಸ್ ಸ್ಪರ್ಧಿ ಜಗನ್ ಅವರು ರಾಜೀವ್ ಅವರ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದಾರೆ.
ರಾಜೀವ್ ಸ್ಯಾಂಡಲ್‍ವುಡ್‍ನಲ್ಲಿ ಪೋಷಕ ನಟನಾಗಿ ಮಿಂಚಿದ್ದಾರೆ. ‘ಉಸಿರೇ ಉಸಿರೇ’ ಚಿತ್ರದಲ್ಲಿ ನಾಯಕನಾಗಿ ನಟಿಸಿ, ‘ಜಿಂದಗಿ’, ಆರ್‍ಎಕ್ಸ್ ಸೂರಿ’, ‘ಅಮವಾಸ್ಯೆ’, ‘ಬೆಂಗಳೂರು 560023’, ಚಿತ್ರದಲ್ಲಿ ನಟಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews