ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ, ನಟ ರಾಜೀವ್

Public TV
1 Min Read
RAJEEV copy

ಬೆಂಗಳೂರು: ಸಿನಿಮಾ ಕ್ರಿಕೆಟ್ ಲೀಗ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಆಡುತ್ತಿದ್ದ ಆಟಗಾರ, ಸ್ಯಾಂಡಲ್‍ವುಡ್ ಕಲಾವಿದ ರಾಜೀವ್ ಅವರು ದಾಂಪತ್ಯ ಜೀನನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರು ಮೂಲದ ರೇಷ್ಮಾ ಅವರ ಜೊತೆ ರಾಜೀವ್ ಕಳೆದ ವರ್ಷ ನವೆಂಬರ್ 9 ರಂದು ನಗರದ ಪೈವಿಸ್ತಾ ಕನ್ವಂಷನ್ ಹಾಲ್‍ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಶುಕ್ರವಾರ ರೇಷ್ಮಾ ಅವರನ್ನು ಮದುವೆಯಾಗಿದ್ದಾರೆ. ಇವರ ಮದುವೆಗೆ ಅತಿಥಿಯಾಗಿ ಸುದೀಪ್ ದಂಪತಿ ಬಂದಿದ್ದರು. ಮದುವೆಯಲ್ಲಿ ತೆಗೆಸಿದ್ದ ಫೋಟೋಗಳನ್ನು ಸುದೀಪ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

RAJEEV copy 1

ರಾಜೀವ್ ಕಿಚ್ಚ ಸುದೀಪ್ ನೇತೃತ್ವದ ತಂಡದಲ್ಲಿ ಕ್ರಿಕೆಟ್ ಆಟವಾಡುತ್ತಿದ್ದಾರೆ. ಸುದೀಪ್ ತಮ್ಮ ಗೆಳೆಯ ಕೂಡ ರಾಜೀವ್ ಅವರ ವೃತ್ತಿ ಜೀವನದಲ್ಲಿ ಹಾಗೂ ಚಿತ್ರಗಳಿಗೆ ಬೆಂಬಲ ನೀಡಿದ್ದಾರೆ. ರಾಜೀವ್ ನಿಶ್ಚಿತಾರ್ಥದ ಸಮಯದಲ್ಲಿ ಸುದೀಪ್ ಹೈದರಾಬಾದ್ ನಲ್ಲಿ ಇದ್ದ ಕಾರಣ ಬರಲು ಆಗಿರಲಿಲ್ಲ. ಹಾಗಾಗಿ ಸಿನಿಮಾದ ಕೆಲಸಗಳ ನಡುವೆ ಕೂಡ ಸುದೀಪ್, ರಾಜೀವ್ ಮದುವೆಯಲ್ಲಿ ಪಾಲ್ಗೊಂಡಿದ್ದು ನವದಂಪತಿಗೆ ಶುಭ ಹಾರೈಸಿದ್ದಾರೆ.

ರಾಜೀವ್ ಮದುವೆಯಾಗಿರುವ ರೇಷ್ಮಾ ಅವರು ಬೆಂಗಳೂರು ಮೂಲದವರಾಗಿದ್ದು, ದಯಾನಂದ ಸಾಗರ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿದ್ದಾರೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ನಟ ಪ್ರದೀಪ್ ಸಹ ಗೆಳೆಯನ ಮದುವೆಯಲ್ಲಿ ಭಾಗಿಯಾಗಿದ್ದು ಹೊಸ ಜೋಡಿಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಶುಭಾಶಯ ತಿಳಿಸಿದ್ದಾರೆ.

RAJEEV 1 copy

ನಟ ರಾಜೀವ್ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ನಾಯಕನಾಗಿಯೂ ಅಭಿನಯಿಸಿದ್ದರು. ‘ಬೆಂಗಳೂರು 560023’, ‘ಆರ್ ಎಕ್ಸ್ ಸೂರಿ’, ಹಾಗೂ ‘ಜಿಂದಗಿ’ ಸಿನಿಮಾಗಳಲ್ಲಿ ರಾಜೀವ್ ನಟಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *