ಬೆಂಗಳೂರು: ರೌಡಿ ರಾಜಕೀಯದಿಂದ (Rowdy Sheeters) ಮುಜಗರಕ್ಕೆ ಇಡಾಗಿದ್ದ ಸಿಸಿಬಿ (CCB) ಬೆಂಗಳೂರು (Bengaluru) ರೌಡಿಗಳ ವಿಷಯದಲ್ಲಿ ಖಡಕ್ ತೀರ್ಮಾನ ತೆಗೆದುಕೊಂಡಿದೆ. ರೌಡಿಗಳು ಊರು ಬಿಡುವಂತೆ ವಾರ್ನಿಂಗ್ ಮಾಡಿದ್ದಾರೆ.
ರೌಡಿ ರಾಜಕೀಯಕ್ಕೆ ಬೆಚ್ಚಿಬಿದ್ದ ಸಿಸಿಬಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳೋದಕ್ಕೆ ರೌಡಿಗಳನ್ನ ಊರು ಬಿಡಿಸಿದ್ದಾರೆ. ಸೈಲೆಂಟ್ ಸುನೀಲ ರಾಜಕೀಯ ಕಾರ್ಯಕ್ರಮದಲ್ಲಿ ಕಂಡಿದ್ದು ಸಿಸಿಬಿಗೆ ದೊಡ್ಡ ಮುಜುಗರ ಊಂಟು ಮಾಡಿದೆ. ಅಲ್ಲದೇ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದು, ರೌಡಿ ಸುನೀಲನ ತಡಕಾಟದಲ್ಲಿದೆ. ಇದನ್ನೂ ಓದಿ: ಡಿ.6 ರಂದು ಬೆಳಗಾವಿಗೆ ಹೋಗಿಯೇ ತೀರುತ್ತೇವೆ – ಬೊಮ್ಮಾಯಿಗೆ ʼಮಹಾʼ ಸಚಿವರ ಸವಾಲು
Advertisement
Advertisement
ಹಾಗಾಗಿ ಉಳಿದ ರೌಡಿಗಳನ್ನ ಸಿಸಿಬಿ ಪೊಲೀಸರು ಬೆಂಗಳೂರು ಬಿಡಿಸಿ ಕಳಿಸಿದ್ದಾರೆ. ಅಷ್ಟೇ ಅಲ್ಲದೇ ರೌಡಿಗಳಿಗೆ ಖಡಕ್ ಸಂದೇಶ ಕೊಟ್ಟಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ರಾಜಕೀಯ ಕಾರ್ಯಕ್ರಮಗಳ ವೇದಿಕೆಯಲ್ಲಿ ಕಂಡು ಬಂದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಸಹ ಕೊಟ್ಟಿದ್ದಾರೆ.
Advertisement
Advertisement
ಹಾಗಾಗಿ ಬೆಂಗಳೂರಿನಲ್ಲಿ ಪಂಟ್ರು ಅಂದುಕೊಂಡು ತಿರಗಾಡುತ್ತಿದ್ದ ರೌಡಿಗಳು ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ ಹೀಗೆ ಬೇರೆ ಬೇರೆ ರಾಜ್ಯಗಳತ್ತ ಮುಖ ಮಾಡಿದ್ದಾರೆ. ಸಿಸಿಬಿ ಖಡಕ್ ವಾರ್ನ್ನಿಂದ ಬೆಚ್ಚಿಬಿದ್ದಿರೋ ಬೆಂಗಳೂರು ರೌಡಿಗಳು ಸದ್ಯಕ್ಕೆ ಬೆಂಗಳೂರು ಕಡೆ ಮುಖಮಾಡುವುದು ವಿರಳ. ಇದನ್ನೂ ಓದಿ: ನನ್ನ ಹತ್ಯೆಗೆ ಸ್ಕೆಚ್ – ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಮುಖಂಡ ಗಂಭೀರ ಆರೋಪ