ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್, ಯುವಕನ ಮೇಲೆ ನಡೆಸಿದ ಗೂಂಡಾಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಗಾಯಾಳು ವಿದ್ವತ್ ಅಣ್ಣ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದಾರೆ.
ವಿದ್ವತ್ ಅಲ್ಲದೆ ತನ್ನ ಮೇಲೂ ನಲಪಾಡ್ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಗೆ ಬಂದಾಗ ನನ್ನ ಮೇಲೂ ಕೈ ಮಾಡಿದ್ದ ಎಂದು ಸಿಸಿಬಿ ಪೊಲೀಸರ ಮುಂದೆ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಹೀಗಾಗಿ ಇದೀಗ ಸಿಸಿಬಿ ಪೊಲೀಸರು ಸಾತ್ವಿಕ್ ಹೇಳಿಕೆಯನ್ನು ಕೂಡ ಪರಿಗಣಿಸಿದ್ದಾರೆ.
Advertisement
ವಿದ್ವತ್ ಮೇಲೆ ಹಲ್ಲೆ ನಡೆದ ಬಳಿಕ ಆತನ ಸ್ನೇಹಿತರು ಫೋನ್ ಮಾಡಿ ನನಗೆ ವಿಷಯ ತಿಳಿಸಿದ್ದರು. ನಾನು ಸ್ಥಳಕ್ಕೆ ಬರುವಷ್ಟರಲ್ಲಿ ವಿದ್ವತ್ ನನ್ನು ಮಲ್ಯ ಅಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಗೆ ಬಂದಾಗ ನಲಪಾಡ್ ಹಾಗೂ ಅವನ ಗ್ಯಾಂಗ್ ಇಲ್ಲಿಗೂ ಬಂದಿದ್ದರು. ಈ ವೇಳೆ ಅವರು ಆಸ್ಪತ್ರೆಯಲ್ಲಿ ಗಲಾಟೆ ಮಾಡುತ್ತಿದ್ದಾಗ ನನ್ನ ಮೇಲೂ ಕಿರುಚಾಡಿದ್ದರು. ಇದಕ್ಕೆ ನಾನು ಪ್ರತಿರೋಧ ತೋರಿದಾಗ ನನ್ನ ಮೇಲೆ ಕೈ ಮಾಡಿದರು ಎಂದು ಸಾತ್ವಿಕ್ ಹೇಳಿದ್ದಾರೆ. ಇದನ್ನೂ ಓದಿ: ಜಾಮೀನಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಅಪ್ಪನಿಗೆ ರೌಡಿ ನಲಪಾಡ್ ಸೂಚನೆ!
Advertisement
Advertisement
ಸಿಸಿಬಿ ಪೊಲೀಸರು ಫೆಬ್ರವರಿ 17ರ ರಾತ್ರಿ ಆಸ್ಪತ್ರೆಯಲ್ಲಿ ನಡೆದ ಘಟನೆ ಬಗ್ಗೆ ಸಾತ್ವಿಕ್ ಹೇಳಿಕೆ ಪಡೆದಿದ್ದು, ಆಸ್ಪತ್ರೆಯಲ್ಲಿ ವಿದ್ವತ್ ಮೇಲಿನ ಹಲ್ಲೆಯನ್ನು ಸಾತ್ವಿಕ್ ಪ್ರಶ್ನೆ ಮಾಡಿದ್ದನು. ಪ್ರಶ್ನೆ ಮಾಡಿದ್ದಕ್ಕೆ ವಿದ್ವತ್ ನನ್ನ ಆಸ್ಪತ್ರೆಗೆ ದಾಖಲಿಸಬೇಡ ಎಂದು ಸಾತ್ವಿಕ್ ಮೇಲೆ ನಲಪಾಡ್ ಹಲ್ಲೆ ಮಾಡಿದ್ದನು ಎಂಬುದಾಗಿ ವರದಿಯಾಗಿತ್ತು. ಇದನ್ನೂ ಓದಿ: ಜಾಮೀನು ಅರ್ಜಿ ತಿರಸ್ಕೃತ- ನಲಪಾಡ್ ಗೆ ಜೈಲೇ ಗತಿ
Advertisement
ಶನಿವಾರ ಸಿಸಿಬಿ ಪೊಲೀಸರು ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ಸಾತ್ವಿಕ್ ಹೇಳಿಕೆಯನ್ನು ಪಡೆದಿದ್ದಾರೆ. ಸಾತ್ವಿಕ್ ನನ್ನು ಈ ಪ್ರಕರಣದ ಸಾಕ್ಷಿಯನ್ನಾಗಿ ಪರಿಗಣಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್