ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಿಗರೇಟಿಗೊಂದು ಸೀಕ್ರೇಟ್ ರೂಮ್ (Cigarettes Secret Room) ಮಾಡಿ, ನಕಲಿ ವಿದೇಶಿ ಬ್ರ‍್ಯಾಂಡೆಡ್ ಸಿಗರೇಟ್‌ಗಳನ್ನ ಮಾರಾಟ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ.
ವಿದೇಶಿ ಸಿಗರೇಟ್‌ಗಳನ್ನ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಹಿಂಭಾಗದ ರಸ್ತೆಯ ಗೊಡೌನ್‌ನಲ್ಲಿದ್ದ ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್‌ಗಳನ್ನ ಸಿಸಿಬಿ ಆರ್ಥಿಕ ಅಪರಾಧ ದಳದ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅಂಡ್ ಟೀಂ ಪತ್ತೆ ಮಾಡಿದೆ. ಬಳಿಕ ಗೊಡೌನ್ ಸೀಜ್ ಮಾಡಿದೆ. ಇದನ್ನೂ ಓದಿ: ಬಿಟ್ಟೋದ ಗಂಡನನ್ನ ಜೊತೆಯಾಗಿರುವಂತೆ ಮಾಡ್ತೀನಿ ಎಂದು 7 ಲಕ್ಷ ಪಡೆದು ಎಸ್ಕೇಪ್!
ಲೈಟರ್ ಗೊಡೌನ್‌ನಲ್ಲಿ ಮಾಡಿಸಿದ್ದ ವುಡ್ ಶೆಲ್ಫ್ ನಲ್ಲೇ ಸೀಕ್ರೇಟ್ ರೂಮ್‌ಗೆ ದಾರಿ ಮಾಡಿಡಲಾಗಿತ್ತು. ಕಿಚನ್ ಕಬೋರ್ಡ್‌ನಂತೆ ಸಣ್ಣ ಕಿಂಡಿಯಷ್ಟು ಡೋರ್ ಇಡಲಾಗಿತ್ತು. ಒಂದು ವೇಳೆ ಪೊಲೀಸರು ಬಂದರೂ ಗೊತ್ತಾಗದ ರೀತಿ ಡೋರ್ ಮಾಡಿಸಿದ್ದ ಗೋಡೋನ್ ಮಾಲೀಕ ಲಲಿತ್, ವಿದೇಶಿ ಬ್ರಾಂಡೆಡ್‌ಗಳ ಹೆಸರಲ್ಲಿ ನಕಲಿ ಸಿಗರೇಟ್ ಮಾರಾಟ ಮಾಡುತ್ತಿದ್ದರು. ಇದನ್ನೂ ಓದಿ: ಎತ್ತಿನಹೊಳೆ ಯೋಜನೆಗೆ ಆರಂಭದಲ್ಲೇ ವಿಘ್ನ- ನೀರು ಹರಿಸಿದ್ದರಿಂದ ಪೈಪ್‍ನಿಂದ ಸೋರಿಕೆ
ಈ ಸೀಕ್ರೆಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ನಕಲಿ ಸಿಗರೇಟ್‌ಗಳನ್ನ ಜಪ್ತಿ ಮಾಡಿದ್ದಾರೆ. ನಗರದ ಹಲವು ಕಡೆಗಳಿಗೆ ಇಲ್ಲಿಂದಲೇ ಸಿಗರೇಟ್ ಸರಬರಾಜು ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ಸಂಬಂಧ ಕೆ.ಆರ್ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.