ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ಡಾನ್ಸ್ ಬಾರ್ ಗಳನ್ನು ತೆರೆದಿದ್ದಕ್ಕೆ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಮೂವರನ್ನು ಶನಿವಾರ ರಾತ್ರಿ ಬಂಧಿಸಿ 78 ಮಹಿಳೆಯರನ್ನು ರಕ್ಷಿಸಿದ್ದಾರೆ.
ಬಂಧಿತರನ್ನು 38 ವರ್ಷದ ಅಶೋಕ್ ಶೆಟ್ಟಿ, 22 ವರ್ಷದ ಸಚಿನ್ ಹಾಗೂ ಮೋಹನ್ ಪಿ ಎಂದು ಗುರುತಿಸಲಾಗಿದೆ. ಅಶೋಕ್ ಶೆಟ್ಟಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಸಚಿನ್ ಕ್ಯಾಶಿಯರ್ ಆಗಿದ್ದಾನೆ. ಮೋಹನ್ ಕಲಾಸಿಪಾಳ್ಯ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.
ದಾಳಿ ವೇಳೆ ಸಿಸಿಬಿ ಪೊಲೀಸರು ಬ್ರಿಗೇಡ್ ನೈಟ್ ಬಾರ್ 6 ಹಾಗೂ ಬ್ರಿಗೇಡ್ ರೋಡ್ ಹಾಗೂ ಕಲಾಸಿಪಾಳ್ಯದ ನೈಟ್ ಕ್ವೀನ್ ರೆಸ್ಟೋರೆಂಟ್ ಮೇಲೆ ನಿರಂತರವಾಗಿ ದಾಳಿ ಮಾಡಿದ್ದಾರೆ. ಈ ವೇಳೆ 100 ಹೆಚ್ಚು ಮಂದಿ ಗ್ರಾಹಕರನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ಬಳಿಕ ಸಿಸಿಬಿ ಪೊಲೀಸರು 12 ಸ್ಪೀಕರ್ಸ್, ಮೂರು ಸೌಂಡ್ ಸಿಸ್ಟಮ್ಸ್ ಹಾಗೂ ಎರಡೂ ಕಡೆಗಳಿಂದ ಕಂಪ್ಯೂಟರ್ ಗಳನ್ನು ವಶಕ್ಕೆ ಪಡೆದಿದ್ದಾರೆ.