ಬೆಂಗಳೂರು: ಅಧಿಕಾರಿಗಳ ಮನೆಯಲ್ಲಿ ಮಾತ್ರ ಕೋಟಿ ಹಣ ಸಿಕ್ಕಿಲ್ಲ ದಂಧೆಕೋರರ ಮನೆಯಲ್ಲೂ ಕೋಟಿ ಕೋಟಿ ಹಣ ಸಿಕ್ಕಿದೆ. ನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿ ಅಪಾರ ಪ್ರಮಾಣದ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮೀಟರ್ ಓಡಿದಂತೆಲ್ಲಾ ಹಣ ವಸೂಲಿ ಮಾಡುತ್ತಿದ್ದ ದಂಧೆಕೋರರಿಗೆ ಖಾಕಿ ಬಿಸಿ ಮುಟ್ಟಿಸಿದ್ದು, ವಿಜಯನಗರ, ಕಾಮಾಕ್ಷಿಪಾಳ್ಯ ಜಯನಗರ ಸೇರಿದಂತೆ 14 ಕಡೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ 9 ಜನರ ಮನೆ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಮೈಕೋ ಲೇಔಟ್ ಭಾಸ್ಕರ್, ಸುಬ್ರಹ್ಮಣ್ಯ, ಬಾತ್ ರೂಮ್ ವೇಲು ಮತ್ತು ಮಾರ್ಕೆಟ್ ಪೊಲೀಸ್ ಠಾಣೆಯ ರೌಡಿಶೀಟರ್ ಮನೆ ಮೇಲೂ ದಾಳಿ ಮಾಡಲಾಗಿದೆ.
Advertisement
Advertisement
ಮೈಕೋ ಲೇಔಟ್ ಭಾಸ್ಕರ್, ಸುಬ್ರಹ್ಮಣ್ಯ ಎಂಬವರು ಮನೆಯಲ್ಲಿ ತಲಾ ಮೂವತ್ತು ಲಕ್ಷ ವಶಕ್ಕೆ ಪಡೆಯಲಾಗಿದೆ. ಇವರು ತಿಂಗಳಿಗೆ ತಲಾ 10ರಿಂದ 15 ಪರ್ಸೆಂಟ್ ಬಡ್ಡಿ ತೆಗೆದುಕೊಳ್ಳುತ್ತಿದ್ದರು. ಸಿಸಿಬಿ ಪೊಲೀಸರು ಸುಮಾರು 14 ತಂಡಗಳಾಗಿ ಬೆಳಗ್ಗೆ ಐದು ಗಂಟೆಯಿಂದ ದಾಳಿ ಮಾಡಿದ್ದಾರೆ. ದಾಳಿ ವೇಳೆ 69 ಲಕ್ಷ ನಗದು, 258 ಚೇಕ್ ಗಳು, 52 ಆನ್ ಡಿಮ್ಯಾಂಡ್ ನೋಟ್ ಗಳು, 11 ನಿವೇಶನ ದಾಖಲಾತಿಗಳು, 25 ಇ ಸ್ಟಾಂಪ್, 13 ಬಾಂಡ್ ಪೇಪರ್ ಗಳು ಮತ್ತು ಐದಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
Advertisement
ಬೆಂಗಳೂರಿನ ನಗರದಾದ್ಯಂತ ಸಿಸಿಬಿ ಪೊಲೀಸರು ದಾಳಿ ನಡೆಸುತ್ತಿದ್ದು, ಮೀಟರ್ ಬಡ್ಡಿದಂಧೆಕೋರರ ಮನೆ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 69 ಲಕ್ಷ ರೂ. ನಗದು ಹಣ ಸಿಕ್ಕಿದೆ. ಇನ್ನು ಕಾರ್ಯಾಚರಣೆ ನಡೆಯುತ್ತಿದೆ. ಯಾರ ಬಳಿ, ಎಷ್ಟು? ಹಣ ಸಿಕ್ಕಿದೆ ಎಂದು ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=qzACrYbpmVI