ಬೆಂಗಳೂರು: ಸರ್ಕಾರದ ಹುಕ್ಕಾಬಾರ್ ಬ್ಯಾನ್ ಆದೇಶ ಕೇವಲ ಪೇಪರ್ ಗಷ್ಟೇ ಸೀಮಿತ ಆಯ್ತಾ ಅನ್ನೋ ಪ್ರಶ್ನೆ ಮೂಡಿದೆ. ಪೊಲೀಸರ ಕಣ್ಣಿಗೆ ಮಣ್ಣೆರಚಿ ಕದ್ದುಮುಚ್ಚಿ ಹುಕ್ಕಾ ಬಾರ್ ನಡೆಸ್ತಿರೋದು ಪಬ್ಲಿಕ್ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೆಆರ್ ಪುರಂನ ಮೂನ್ ಕೆಫೆ ಹುಕ್ಕಾ ಬಾರ್ ನಲ್ಲಿ (Hookah Bar) ಅಕ್ರಮವಾಗಿ ಹುಕ್ಕಾ ಬಾರ್ ರನ್ನಿಂಗ್ ಆಗ್ತಿದೆ. ಪರಿಚಯಸ್ಥ ಕಸ್ಟಮರ್ ಗಳನ್ನ ಮಾತ್ರ ಒಳಗೆ ಬಿಟ್ಕೊಂಡು ಕಾನೂನು ಬಾಹಿರ ಕೃತ್ಯ ನಡೆಸಲಾಗ್ತಿದೆ. ಒಳಗಿನಿಂದಲೇ ಸಿಸಿಟಿವಿ ವಾಚ್ ಮಾಡುವ ಖದೀಮರು ಪೊಲೀಸರು ಯಾರಾದರು ಬಂದರೆ ಸಿಸಿಟಿವಿಯಲ್ಲಿ ನೋಡಿ ಲೈಟ್ ಆಫ್ ಮಾಡ್ತಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ತುಂಡು ತುಂಡಾಗಿ ಕತ್ತರಿಸಿ ವೃದ್ಧೆಯ ಭೀಕರ ಹತ್ಯೆ
ಸೀಮಿತ ಗ್ರಾಹಕರನ್ನು ಒಳಗೆ ಬಿಟ್ಕೊಂಡು ಹುಕ್ಕಾ ದಂಧೆ ನಡೆಸಲಾಗುತ್ತಿದೆ. ಈ ಮೂಲಕ ಸರ್ಕಾರ ಹುಕ್ಕಾ ಬ್ಯಾನ್ ಮಾಡಿದ್ರೂ ಕೂಡ ಮಾಲೀಕರು ಮಾತ್ರ ಡೋಂಟ್ ಕೇರ್ ಅನ್ನುತ್ತಾರೆ. ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿಯೇ ಇದು ಎಗ್ಗಿಲ್ಲದೇ ನಡೆಯುತ್ತಿದೆ. ಹುಕ್ಕಾಬಾರ್ ಒಳಗೆ ಹೋಗುವ, ಹುಕ್ಕಾ ಸೇದುವ ವೀಡಿಯೊಗಳು ಲಭ್ಯವಾಗಿದೆ.
ಘಟನೆ ಸಂಬಂಧ ಸಿಸಿಬಿ ಅಧಿಕಾರಿಗಳಿಂದ ಹುಕ್ಕಾ ಬಾರ್ ಸೀಜ್ ಮಾಡಿದ್ದಾರೆ. ಹುಕ್ಕಾಬಾರ್ ದಂಧೆ ನಡೆಸ್ತಿದ್ದವರು ಜೈಲಿಗಟ್ಟಿದ್ದಾರೆ.