– 10 ಮಂದಿ ಯುವತಿಯರ ರಕ್ಷಣೆ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಸ್ತೆ ಬದಿಯಲ್ಲಿದ್ದ ವೇಶ್ಯಾವಾಟಿಕೆ ದಂಧೆ ಹೈಟೆಕ್ ರೂಪ ಪಡೆದುಕೊಂಡಿದೆ. ವೆಬ್ ಸೈಟ್‍ಗಳ ಮೂಲಕ ಹೈಟೆಕ್ ವೇಶ್ಯಾವಾಟಿಕೆ ಶುರುವಾಗಿದ್ದು, ಹೈಫೈ ಏರಿಯಾಗಳಲ್ಲಿ ಯಾವುದೇ ಪೊಲೀಸರ ಭಯವಿಲ್ಲದೇ ನಡೆಯುತ್ತಿದೆ.
ರಘು, ಪ್ರಜ್ವಲ್, ಕುಮಾರ್ ಮತ್ತು ಭರತ್ ಬಂಧಿತ ಆರೋಪಿಗಳು. ಉತ್ತರ ಭಾರತ ಮೂಲದಿಂದ ಯುವತಿಯರನ್ನು ಹೆಚ್ಚಿನ ಹಣದ ಆಸೆ ಹುಟ್ಟಿಸಿ ಬೆಂಗಳೂರಿಗೆ ಕರೆತರುತ್ತಾರೆ. ಪಿಂಪ್‍ಗಳು ನಗರದ ಪ್ರತಿಷ್ಠಿತ ಏರಿಯಾಗಳಲ್ಲಿ ಮನೆ ಮಾಡಿಕೊಂಡು ಅಕ್ಕಪಕ್ಕದ ಮನೆಯವರಿಗೆ ಯಾವುದೇ ಡೌಟ್ ಬರದಂತೆ ವೇಶ್ಯಾವಾಟಿಕೆ ನಡೆಸುತ್ತಾರೆ. ಕೆಲವೊಂದು ವೆಬ್ ಸೈಟ್‍ಗಳ ಮೂಲಕ ಗಿರಾಕಿಗಳನ್ನು ಬುಕ್ ಮಾಡಿ 10,000-20,000 ಸಾವಿರದ ವರೆಗೆ ಹಣ ಕಟ್ಟಿಸಿಕೊಂಡು ದಂಧೆ ನಡೆಸುತ್ತಾರೆ.
Advertisement
Advertisement
ಈ ಬಗ್ಗೆ ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಶುಕ್ರವಾರ ರಾತ್ರಿ ನಗರದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದರು. ಈ ವೇಳೆ ನಾಲ್ಕು ಜನ ಪ್ರಮುಖ ಪಿಂಪ್‍ಗಳನ್ನು ಬಂಧಿಸಿ 10 ಮಂದಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ. ಮತ್ತೊಂದು ವಿಚಾರ ಅಂದರೆ ನಗರದ ಕೆಲವೊಂದು ಪ್ರತಿಷ್ಠಿತ ಏರಿಯಾಗಳ ಅಪಾರ್ಟ್‌ಮೆಂಟ್‌ಗಳಲ್ಲಿ ಬಾಡಿಗೆ ಮನೆಗಳನ್ನು ಪಡೆದು ವೇಶ್ಯಾವಾಟಿಕೆ ನಡೆಸುತ್ತಿರೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
Advertisement
ವೆಬ್ ಸೈಟ್‍ಗಳ ಮೂಲಕವೇ ಹಣದ ವ್ಯವಹಾರ ಸೇರಿದಂತೆ ಎಲ್ಲಾ ಡೀಲ್‍ಗಳನ್ನು ಆನ್‍ಲೈನ್‍ನಲ್ಲೇ ಮುಗಿಸಿಕೊಳ್ಳುತ್ತಾರೆ. ಪೊಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿದರೂ ದಂಧೆಕೋರರು ಮಾತ್ರ ಸೈಲೆಂಟ್ ಆಗಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ. ನಗರದ ಮತ್ತಷ್ಟು ಏರಿಯಾಗಳ ಆನ್‍ಲೈನ್ ವೇಶ್ಯಾವಾಟಿಕೆ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಮತ್ತಷ್ಟು ಅಡ್ಡೆಗಳ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ.