– ಕೆಲ್ಸ ಕೊಡಿಸೋ ನೆಪದಲ್ಲಿ ಬೆಂಗ್ಳೂರಿಗೆ ಕರೆಸ್ತಿದ್ರು
ಬೆಂಗಳೂರು: ಭಾನುವಾರ ರಾತ್ರಿ ಸಿಸಿಬಿ ಪೊಲೀಸರು ನಡೆಸಿದ ದಾಳಿಯಲ್ಲಿ ಥಾಯ್ಲೆಂಡ್ ದೇಶದ ಯುವತಿ ಸೇರಿದಂತೆ ಆರು ಜನ ಯುವತಿಯರು ಸಿಕ್ಕಿಬಿದ್ದಿದ್ದಾರೆ.
ವಿವೇಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನರ್ ರಸ್ತೆ ಕೋರಮಂಗಲದಲ್ಲಿ ರಾತ್ರಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಮೂರು ಜನ ಪಿಂಪ್‍ಗಳು ಎಸ್ಕೇಪ್ ಆಗಿದ್ದು, ಉತ್ತರ ಭಾರತದ ಮೂವರು ಯುವತಿಯರ ಜೊತೆಗೆ ಥಾಯ್ಲೆಂಟ್ ಮೂಲದ ಯುವತಿಯೊಬ್ಬಳು ಕೂಡ ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ಪ್ರಮುಖ ಆರೋಪಿ ಸೂರ್ಯನನ್ನು ಬಂಧಿಸಲಾಗಿದ್ದು, ಉಳಿದ ಮೂವರು ಎಸ್ಕೇಪ್ ಆಗಿದ್ದಾರೆ. ಉತ್ತರ ಪ್ರದೇಶ ಮೂಲದ ಯುವತಿಯರನ್ನು ಕೆಲಸ ಕೊಡಿಸುವ ನೆಪದಲ್ಲಿ ಬೆಂಗಳೂರಿಗೆ ಕರೆಸುತ್ತಿದ್ದ ಆರೋಪಿಗಳು ಇಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ಟೂರಿಸ್ಟ್ ವೀಸಾದ ಅಡಿ ಭಾರತಕ್ಕೆ ಬಂದಿರುವ ಥಾಯ್ಲೆಂಡ್ ದೇಶದ ಯುವತಿ ಸ್ಪಾ ಹೆಸರಿನಲ್ಲಿ ದಂಧೆ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
ನಗರದ ವಿವಿಧ ಪ್ರತಿಷ್ಠಿತ ಏರಿಯಾಗಳಲ್ಲಿ ವಿದೇಶಿ ಮೂಲದ ಯುವತಿಯರು, ಟೂರಿಸ್ಟ್ ಮತ್ತು ಎಜುಕೇಷನ್ ವೀಸಾದಲ್ಲಿ ಬೆಂಗಳೂರು ಸೇರಿದಂತೆ ವಿವಿಧ ಮಹಾನಗರಗಳಲ್ಲಿ ವಾಸವಾಗಿದ್ದಾರೆ. ಅವರಲ್ಲಿ ಬಹುತೇಕರು ಹಣಕ್ಕಾಗಿ ಹೈಫೈ ಏರಿಯಾಗಳಲ್ಲಿ ಸ್ಪಾಗಳ ಹೆಸರಲ್ಲಿ ವೇಶ್ಯಾವಾಟಿಕೆ ದಂಧೆ ಮಾಡುತ್ತಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಎರಡು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಮತ್ತಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆ ಇದೆ.