ಬಳ್ಳಾರಿ: ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಯ ಅಹಂಬಾವಿ ನಿವಾಸದ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿ ಪರಿಶೀಲನೆ ನಡೆಸುವ ವೇಳೆ ಅಧಿಕಾರಿಗಳು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ.
ಸಿಸಿಬಿ ಅಧಿಕಾರಿಗಳಿಗೆ ಸೆಲ್ಫಿ ಹುಚ್ಚು ಹೆಚ್ಚಾಗಿದ್ದು, ಬಳ್ಳಾರಿಯ ಜನಾರ್ದನ ರೆಡ್ಡಿ ಮನೆ ಪರಿಶೀಲನೆ ವೇಳೆ ಸಿಸಿಬಿ ಅಧಿಕಾರಿಗಳು ಸೆಲ್ಫಿ ಕ್ಲಿಕಿಸಿಕೊಂಡಿದ್ದಾರೆ. ಸಿಸಿಬಿ ಪೊಲಿಸರು ಪರಿಶೀಲನೆಗಿಂತ ಹೆಚ್ಚಾಗಿ ಸೆಲ್ಪಿ ತಗೆಸಿಕೊಂಡಿದ್ದಾರೆ.
Advertisement
ಇಂದು ಬೆಳಂಬೆಳಗ್ಗೆ ರೆಡ್ಡಿ ನಿವಾಸಕ್ಕೆ ಎರಡು ವಾಹನಗಳಲ್ಲಿ ಆಗಮಿಸಿದ ಸಿಸಿಬಿ ಪೊಲೀಸರು ಪರಿಶೀಲನೆ ಆರಂಭ ಮಾಡಿದ್ದಾರೆ. ಒಟ್ಟು 8 ಮಂದಿ ಅಧಿಕಾರಿಗಳ ತಂಡ ಈ ಕಾರ್ಯದಲ್ಲಿ ತೊಡಗಿದೆ. ಇತ್ತ ಜರ್ನಾದನ ರೆಡ್ಡಿ ಮನೆ ಮೇಲೆ ದಾಳಿ ನಡೆಯುತ್ತಿರುವ ಸುದ್ದಿ ತಿಳಿಯುತ್ತಿದಂತೆ ಶಾಸಕ ಶ್ರೀರಾಮುಲು ಅವರು ರೆಡ್ಡಿ ಮನೆ ಬಳಿ ದೌಡಾಯಿಸಿದ್ದು, ಆಪ್ತ ಸ್ನೇಹಿತನ ನೆರವಿಗೆ ಧಾವಿಸಿದ್ದಾರೆ.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಬೆಂಗಳೂರಿನ ಪರಿಜಾತ ಅಪಾರ್ಟ್ ಮೆಂಟ್ ಮೇಲೂ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಲಾಗಿತ್ತು. ಈ ವೇಳೆ ದಾಳಿ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿಗಳು ಮನೆಯಲ್ಲಿ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಮನೆಯ ಒಳ ಆವರಣದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ವಶಕ್ಕೆ ಪಡೆದಿರುವ ದಾಖಲೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುದಿಲ್ಲ. ತನಿಖೆ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದರು. ಈ ದಾಳಿಯ ವೇಳೆ ಪರಿಜಾತ ಅಪಾರ್ಟ್ ಮೆಂಟ್ ಹೊರ ಆವರಣದಲ್ಲಿ ಸೆಕ್ಯೂರಿಟಿಗಾಗಿ ಅಳವಡಿಸಲಾಗಿದ್ದ ಸಿಸಿಟಿವಿ ಡಿವಿಆರ್ ಮಾತ್ರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ರೆಡ್ಡಿ ಮೇಲಿನ ಆರೋಪಕ್ಕೆ ಬುಧವಾರ ಪ್ರತಿಕ್ರಿಯೆ ನೀಡಿದ ಬಿಜೆಪಿ ಶಾಸಕ ಶ್ರೀರಾಮುಲು, ನಾನು ಮಾಧ್ಯಮಗಳಲ್ಲಿ ಈ ಪ್ರಕರಣ ಕುರಿತು ನೋಡಿದ್ದೇನೆ. ಕಾನೂನು ಅದರ ಕೆಲಸ ಮಾಡುತ್ತೆ. ಕಾನೂನಿಗಿಂತ ದೊಡ್ಡವರು ಯಾರು ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv