ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗ ಚೀಟ್ ಫಂಡ್ ಕಂಪನಿಗಳದ್ದೆ ಹವಾ ಆಗಿದ್ದು, ಸದ್ಯಕ್ಕೆ ಸಿಸಿಬಿ ಪೊಲೀಸರು ಆಂಬಿಡೆಂಟ್ ಕೇಸ್ ತನಿಖೆ ಮಾಡುತ್ತಿದ್ದಾರೆ. ಆದರೆ ಈಗ ಅಜ್ಮೀರ ಕಂಪನಿ ಕರ್ಮಕಾಂಡ ಹೊರ ಬಂದಿದೆ. ಆಂಬಿಡೆಂಟ್ ಚಿಟ್‍ಫಂಡ್ ವಂಚನೆ ಕೇಸನ್ನು ಜಾಲಾಡುತ್ತಿರುವ ಸಿಸಿಬಿ ಪೊಲೀಸರಿಗೆ ಇದೀಗ ಮತ್ತೊಂದು ವಂಚನೆ ಕೇಸ್ ಹೆಗಲೇರಿದೆ.
ಜಯನಗರ ಮೂಲದ ಅಜ್ಮೀರ ಕಂಪನಿ ಸಾವಿರಾರು ಜನರಿಂದ ನೂರಾರು ಕೋಟಿ ಹಣ ಸಂಗ್ರಹ ಮಾಡಿ ಗ್ರಾಹಕರಿಂದ ಪಡೆದ ಹಣಕ್ಕೆ 18% ಬಡ್ಡಿ ನೀಡುವ ಆಮಿಷವೊಡ್ಡಿತ್ತು. ಜನರು ಕೂಡ ಆಭರಣ, ಮನೆ, ಚಿನ್ನ ಮಾರಿ ಲಕ್ಷ ಲಕ್ಷ ಹಣ ಹೂಡಿದ್ದಾರೆ. ಆದರೆ ಮಾಲೀಕ ತಬ್ರೇಜ್ ಹಾಗೂ ದಸ್ತಗೀರ್ ಈಗ ಕಚೇರಿಗೆ ಬೀಗ ಜಡಿದು ಎಸ್ಕೇಪ್ ಆಗಿದ್ದಾನೆ ಎಂದು ಹಣ ಕಳೆದುಕೊಂಡ ನಾಜೀಯಾ ಹೇಳಿದ್ದಾರೆ.
Advertisement
Advertisement
ಹಣ ಕಳೆದುಕೊಂಡವರು ವಂಚನೆ ಪ್ರಕರಣದ ಬಗ್ಗೆ ತನಿಖೆ ಮಾಡಬೇಕು. ನಮಗೂ ಹಣ ವಾಪಸ್ ಕೊಡಿಸಿ ಅಂತ ಸಿಸಿಬಿ ಮುಂದೆ ಪ್ರತಿಭಟಿಸಿದ್ದಾರೆ. ಒಂದು ವಾರದೊಳಗೆ ಅಕೌಂಟ್ ಗಳ ಪರಿಶೀಲನೆ ನಡೆಸಿ ಹಣ ಎಲ್ಲೆಲ್ಲಿ ಹೋಗಿದೆ ಅನ್ನೋದನ್ನ ಪತ್ತೆ ಹಚ್ಚುತ್ತೇವೆ ಅಂತ ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಭರವಸೆ ಕೊಟ್ಟಿದ್ದಾರೆ.
Advertisement
Advertisement
ಕೋಟಿ ಕೋಟಿ ಹಣ ವಂಚಿಸಿದ ಮಾಲೀಕರಾದ ತಬ್ರೇಜ್ ನಾಪತ್ತೆಯಾಗಿದ್ದು, ದಸ್ತಗೀರ್ ಜಾಮೀನು ಪಡೆದಿದ್ದಾನೆ ಎಂದು ತಿಳಿದು ಬಂದಿದೆ. ಬಣ್ಣ ಬಣ್ಣದ ಮಾತುಗಳಿಂದ ಜನರನ್ನು ಯಾಮಾರಿಸುವ ಇಂತಹ ಬೋಗಸ್ ಕಂಪನಿಗಳಿಗೆ ಪೊಲೀಸರು ಬ್ರೇಕ್ ಹಾಕಬೇಕಿದೆ. ಜನರು ಕೂಡ ಇಂತಹವರ ಬಣ್ಣದ ಮಾತುಗಳಿಗೆ ಎಚ್ಚೆತ್ತುಕೊಳ್ಳಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews